ಇತ್ತೀಚೆಗೆ ಸರ್ಕಾರದ ಸೌಲಭ್ಯಗಳು ಸಿಗುತ್ತಿವೆ ಎಂದು ಬಹಳಷ್ಟು ಜನ ವಿವಿಧ ಬ್ಯಾಂಕಗಳಲ್ಲಿ ಸೆವಿಂಗ್ ಖಾತೆ ತೆರೆಯುತ್ತಾರೆ. ಕೆಲವರು ಬ್ಯಾಂಕ್ ಖಾತೆ ತೆರೆದ ನಂತರ ಅದನ್ನು ಕ್ಲೋಸ್ ಮಾಡದೆ ಹಾಗೆ ಬಿಟ್ಟುಬಿಡುತ್ತಾರೆ. ಇನ್ನೂ ಕೆಲವು ಖಾಸಗಿ ನೌಕರರು ಕಂಪನಿ ಬದಲಾಯಿಸುವಾಗಿ ಅಥವಾ ಬ್ಯಾಂಕ್ ಚೇಂಜ್ ಆಗುವಾಗ ಹಳೆಯ ಸ್ಯಾಲರಿ ಅಕೌಂಟ್ಸ್ ಬಂದ್ ಮಾಡುವುದಿಲ್ಲ. ಕೆಲವರಲ್ಲಿ ಒಂದೇ ವ್ಯಕ್ತಿಯ ಹೆಸರಿನಲ್ಲಿ ಹಲವು ಬ್ಯಾಂಕ್ ಖಾತೆ ಕಂಡು ಬರುತ್ತವೆ. ಆದರೆ ಬಳಕೆಯಾಗದ ಖಾತೆ ಬಂದ್ ಮಾಡಿಸದಿದ್ದರೆ ಮುಂದಿನ ದಿನಗಳಲ್ಲಿ ಬ್ಯಾಂಕ್ ವಿಧಿಸುವ ಶುಲ್ಕದಿಂದ ಭಾರಿ ಮೊತ್ತ ತೆರಬೇಕಾಗುತ್ತದೆ. ಬೇರೆ ಬೇರೆ ಬ್ಯಾಂಕಿನಲ್ಲಿ ಬ್ಯಾಲೆನ್ಸ್ ಇಲ್ಲದ ಹಾಗೂ ಬಳಕೆಯಾಗದೆ ಇದ್ದರೆ ಕೂಡಲೇ ಅಕೌಂಟ್ಸ್ ಬಂದ್ ಮಾಡಿಸುವುದು ಉತ್ತಮ.
ಶುಲ್ಕದಿಂದ ಪಾರಾಗಲು ಕನಿಷ್ಟ ಬ್ಯಾಲೇನ್ಸ್ ಇರಲಿ:
ವಿವಿಧ ಬ್ಯಾಂಕ್ ಗಳಿಗೆ ಅನುಗುಣವಾಗಿ ತಿಂಗಳಿಗೆ ರೂ.500 ರಿಂದ ರೂ.10000 ವರೆಗೆ ಕನಿಷ್ಠ ಬ್ಯಾಲೆನ್ಸ್ ಹೊಂದಲೇಬೇಕು. ಇಲ್ಲದಿದ್ದರೆ ಬ್ಯಾಂಕ್ ಗಳು ತನ್ನ ಪಾಲಸಿಗೆ ಅನುಗುಣವಾಗಿ ಶುಲ್ಕ ವಿಧಿಸುತ್ತವೆ. ಎಸ್.ಎಮ್.ಎಸ್, ಚೆಕ್ ಬುಕ್, ಹಾಗೂ ಎಟಿಎಂ ಸೇರಿದಂತೆ ವಿವಿಧ ಆಯಾ ಬ್ಯಾಂಕ್ ನಿಯಮನುಸಾರ ಇಂತಿಷ್ಟು ಹಣ ಚಾರ್ಜ್ ವಿಧಿಸುತ್ತಾರೆ. ಒಂದು ವೇಳೆ ನಿಮ್ಮ ಖಾತೆಯಲ್ಲಿ ಕನಿಷ್ಟ ಬ್ಯಾಲೇನ್ಸ್ ಇಲ್ಲದಿದ್ದರೆ ಮುಂದೆ ಭಾರಿ ಶುಲ್ಕ ವಿಧಿಸುವ ಸಾಧ್ಯತೆ ಹೆಚ್ಚಿರುತ್ತದೆ.
ಖಾಸಗಿ ನೌಕರರು ನೌಕರಿ ಬಿಟ್ಟ ಬಳಿಕ ಖಾತೆ ಬಂದ್ ಮಾಡಿ:
ವಿವಿಧ ಖಾಸಗಿ ನೌಕರರು ಝೀರೋ ಬ್ಯಾಲೆನ್ಸ್ ಅಕೌಂಟ್ ತೆರೆಯುತ್ತಾರೆ. ನೌಕರಿ ಬಿಟ್ಟ ನಂತರ ಹಳೆಯ ಖಾತೆ ಬಂದ್ ಮಾಡದೆ ಅಥವಾ ಕಂಪನಿ ಬ್ಯಾಂಕ್ ಚೇಂಜ್ ಮಾಡುವಾಗಲೂ ಹಳೆ ಖಾತೆ ಬಂದ್ ಮಾಡುವುದಿಲ್ಲ. ಸತತ ಮೂರು ತಿಂಗಳುಗಳ ಕಾಲ ಖಾತೆಗೆ ವೇತನ ಬರದೆ ಹೋದ ಸಂದರ್ಭದಲ್ಲಿ ತಾನಾಗಿಯೇ ಸಾಧಾರಣ ಉಳಿತಾಯ ಖಾತೆಯಾಗಿ ಪರಿವರ್ತನೆಯಾಗುತ್ತವೆ. ಆಗ, ಆ ಖಾತೆಯಲ್ಲಿಯೂ ಕೂಡ ಕನಿಷ್ಠ ಬ್ಯಾಲೆನ್ಸ್ ಇರಬೇಕು. ಇಲ್ಲದಿದ್ದರೆ ಬ್ಯಾಂಕ್ ಶುಲ್ಕ ವಿಧಿಸಲಾಗುತ್ತದೆ.
ಗೊತ್ತಿಲ್ಲದೆ ಬ್ಯಾಂಕ್ ಶುಲ್ಕ ಕಡಿತ ಸಾಧ್ಯತೆ:
ಕೆಲವು ಬ್ಯಾಂಕುಗಳು ರೂ.100 ರಿಂದ ರೂ.1000 ಗಳಷ್ಟು ವಿವಿಧ ಕಾರಣ ನೀಡಿ ಶುಲ್ಕ ವಿಧಿಸುತ್ತವೆ. ಈ ಶುಲ್ಕ ನಿಮ್ಮ ಖಾತೆಯಿಂದ ಕಡಿತಗೊಳಿಸಲಾಗುತ್ತದೆ. ಕೆಲವು ಸಲ ನಿಮಗೆ ಶುಲ್ಕ ಕಡಿತವಾಗುತ್ತಿರುವುದು ಗೊತ್ತೇ ಇರುವುದಿಲ್ಲ. ಬಹಳ ದಿನಗಳ ನಂತರ ಆ ಖಾತೆಗೆ ಹಣ ಜಮೆಮಾಡಿದ್ದರೆ ಹಿಂದಿನ ಶುಲ್ಕದ ಆಧಾರದ ಮೇಲೆ ನಿಮ್ಮ ಬ್ಯಾಂಕಿನಲ್ಲಿರುವ ಹಣವು ಕಡಿತಗೊಳಿಸಲಾಗುವುದು. ನಿಮ್ಮ ಬ್ಯಾಂಕ್ ಖಾತೆ ಬಳಕೆಯಾಗದಿದ್ದರೆ ಕೂಡಲೇ ಅದನ್ನು ಕ್ಲೋಸ್ ಮಾಡಿಸಿ ಇಲ್ಲವೇ ಬ್ಯಾಂಕ್ ಖಾತೆಯ ವ್ಯವಹಾರ ಮುಂದುವರಿಸಿ ಶುಲ್ಕದಿಂದ ಪಾರಾಗಬಹುದು.