News

ಹವಾಮಾನ ಆಧಾರಿತ ಕೃಷಿ ಸಲಹೆಗಳು ಹಾಗೂ ಪ್ರಮುಖ ಬೆಳೆಗಳ ಮಾಹಿತಿ

04 May, 2023 10:14 AM IST By: Kalmesh T
Climate Based Agriculture meteorological advisory for Dharwad District

Agriculture meteorological advisory: ಹವಾಮಾನ ಪರಿಸ್ಥಿತಿ ಮತ್ತು ಮುನ್ಸೂಚನೆ ಸಾರಾಂಶ ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಇವರು, ಧಾರವಾಡ ಜಿಲ್ಲೆಗೆ ನೀಡಿದ ಮುಂದಿನ 5 ದಿನಗಳ ಮುನ್ಸೂಚನೆ. ಇದನ್ನೂ ಓದಿರಿ

ಹವಾಮಾನ ಪರಿಸ್ಥಿತಿ ಮತ್ತು ಮುನ್ಸೂಚನೆ ಸಾರಾಂಶ ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಇವರು, ಧಾರವಾಡ ಜಿಲ್ಲೆಗೆ ನೀಡಿದ ಮುಂದಿನ 5 ದಿನಗಳ ಮುನ್ಸೂಚನೆ

ಪ್ರಮುಖವಾಗಿ ಬಾಗಶಃ ಮೋಡದ ಆಕಾಶವಿರುವ ಮತ್ತು ಹುರವಾದ ಮಳೆಯ ಸಾದ್ಯತೆ ಇದೆ. ಗರಿಷ್ಠ ತಾಪಮಾನ ಮುಂದಿನ ಐದು ದಿನಗಳಲ್ಲಿ 35 ಲಿಅ ಹಾಗೂ ಕನಿಷ್ಠ ತಾಪಮಾನ 20 ಲಿಅ ರಿಂದ 22 ಲಿಅ ಸರಾಸರಿ ಸಾಪೇಕ್ಷ ಆದ್ರತೆ ಶೇ. 62 - 64 ಬೆಳಗಿನ ಸಮಯದಲ್ಲಿ ಹಾಗೂ ಸರಾಸರಿ ಸಾಪೇಕ್ಷ ಆದ್ರತೆ ಶೇ. 45 - 47 ಮಧ್ಯಾಹ್ನದ ಸಮಯದಲ್ಲಿ ಮತ್ತು ಸರಾಸರಿ ಗಾಳಿಯ ವೇಗ ಪ್ರತಿ ಗಂಟೆಗೆ 2 - 3 ಕೀ.ಮೀ ಇರುವ ಮುನ್ಸೂಚನೆ ಇದೆ.

ಈ ಹವಾಮಾನ ಮುನ್ಸೂಚನೆಯನ್ನು ಪರಿಗಣಿಸಿ, ರೈತರು ಈ ಕೆಳಕಂಡ ಕೃಷಿ ಚಟುವಟಿಕೆಗಳನ್ನು ಅನುಸರಿಸಲು ಸಲಹೆ ನೀಡಲಾಗಿದೆ.

ಹವಾಮಾನ ಆಧಾರಿತ ಕೃಷಿ ಸಲಹೆಗಳು

ಪ್ರಮುಖ ಹಿಂಗಾರಿ/ತೋಟಗಾರಿಕೆ ಬೆಳೆಗಳ ಬೆಳೆ ಮಾಹಿತಿ ಮತ್ತು ಅನುಸರಿಸುವ ಕ್ರಮಗಳು

ಸಾಮಾನ್ಯ:

  • ಕಳೆದ ಮೂರು ದಿನಗಳಲ್ಲಿ ದಾಖಲಾದ ಒಟ್ಟು ಮಳೆ 0.0 ಮಿ.ಮೀ.
  • ಮುಂದಿನ 5 ದಿನಗಳ ಮುನ್ಸೂಚನೆಯಂತೆ ಬಾಗಶಃ ಮೋಡದ ಆಕಾಶವಿರುವ ಮತ್ತು ಹುರವಾದ ಮಳೆಯ ಸಾದ್ಯತೆ ಇದೆ.
  • ತೋಟಗಾರಿಕೆ ಮತ್ತು ತರಕಾರಿ ಬೆಳೆಗಳಿಗೆ ನೀರು ಕೊಡಬೇಕು.
  • ಮಾಗಿ ಉಳುಮೆಗೆ ಮುಂಚೆ ಪೋಷಕಾಂಶಗಳ ಪರೀಕ್ಷೆಗೆ ಮಣ್ಣಿ ಮಾದರಿಗಳನ್ನು ತೆಗೆಯಬೇಕು ನಂತರ ಇಳುಕಲಿಗೆ ಅಡ್ಡಲಾಗಿ ಆಳವಾದ ಉಳುಮೆ ಕೈಗೊಳ್ಳಬೇಕು.
  • ಕಬ್ಬಿನಲ್ಲಿ ಹನಿ ನೀರಾವರಿ ಅಳವಡಿಸುವುದರಿಂದ ಶೇ. 40 ರಷ್ಟು ನೀರನ್ನು ಉಳಿತಾಯ ಮಾಡಬಹುದು. ನೀರಿನ ಲಬ್ಯತೆ ಕಡಿಮೆ ಇದ್ದಲ್ಲಿ ಕಬ್ಬಿಗೆ ಸಾಲು ಬಿಟ್ಟು ಸಾಲು ನೀರುಕೊಡಬೇಕು.
  • ಪ್ರಾಥಮಿಕ ಉಳುಮೆ/ನೇಗಿಲು ಹೊಡೆದಕಡೆಗಳಲ್ಲಿ ಚನ್ನಾಗಿ ಮಳೆ ಬಂದ ನಂತರ ಗುರ ಹೊಡೆಯಬೇಕು, ಇದರಿಂದ ಸಸ್ಯಾವಶೇಷಗಳು ಮಣ್ಣಿನೊಂದಿಗೆ ಬೆರೆತು ಬೇಗನೆ ಕಳೆಯುತ್ತವೆ. ಅಕಾಲಿಕ ಮಳೆಯ ನೀರು ಭೂಮಿಯಲ್ಲಿ ಇಂಗಲು ಸಹಾಯವಾಗುತ್ತದೆ.

1. ಜೋಳ, ಕುಸುಬೆ, ಕಡಲೆ, ಗೋಧಿ : ಕಟಾವಾದ ನಂತರ ಮಾಗಿ ಉಳುಮೆ ಕೈಗೊಳ್ಳಬೇಕು. ಪ್ರಾಥಮಿಕ ಉಳುಮೆ/ನೇಗಿಲು ಹೊಡೆದ ಕಡೆಗಳಲ್ಲಿ ಚನ್ನಾಗಿ ಮಳೆ ಬಂದ ನಂತರ ಗುರ ಹೊಡೆಯಬೇಕು.

ಇದರಿಂದ ಸಸ್ಯಾವಶೇಷಗಳು ಬೇಗನೆ ಮಣ್ಣಿನೊಂದಿಗೆ ಬೆರೆತು ಬೇಗನೆ ಕಳೆಯುತ್ತವೆ. ಕಡಲೆ, ಗೋಧಿ ಹತ್ತಿ

2. ಹತ್ತಿ : ಹತ್ತಿ ಬಿಡಿಸುವುದು ಮುಗಿದ ನಂತರ ಕಟ್ಟಿಗೆಯನ್ನು ಸುಡದೇ ಕಾಂಪೋಸ್ಟ ತಯಾರಿಸಲು ಉಪಯೋಗಿಸಬೇಕು ಅಥವಾ ಆಳವಾಗಿ ಉಳುಮೆ ಮಾಡಿ ಮಣ್ಣಿನಲ್ಲಿ ಮುಚ್ಚಬೇಕು.

3. ಕಬ್ಬು: ಕಬ್ಬಿಗೆ ಬೆಳವಣಿಗೆ ಹಂತದಲ್ಲಿ (101-270 ದಿನಗಳವರೆಗೆ) 7 ದಿನಕ್ಕೊಮ್ಮೆ ನೀರು ಕೊಡಬೇಕು.

ಕಬ್ಬು ನಾಟಿಮಾಡಿದ 50, 65, 80 ಮತ್ತು 95 ನೆಯ ದಿನದಂದು ಬೋದುಗಳಲ್ಲಿ ಕುಂಟೆ ಹಾಯಿಸಬೇಕು, ನಂತರ 120 ನೇದಿನ ಆಳವಾಗಿ ಹರಗಿ ಕಬ್ಬಿನ ಎರಡೂ ಮಗ್ಗಲು ಮಣ್ಣು ಏರಿಸಬೇಕು.

ಕಬ್ಬಿನಲ್ಲಿ ಉಣ್ಣೆ ಹೇನಿನ ಹತೋಟಿಗೆ 1.0 ಗ್ರಾಂ ಅಸಿಪೇಟ 75 WP ಅಥವಾ 2.0 ಮಿ.ಲೀ ಕ್ಲೋರಪೈರಿಪಾಸ 20 ಇಸಿ/ ಡೈಮಿಥೋಯೇಟ 30 ಇ.ಸಿ ಪ್ರತೀ ಲೀಟರ ನೀರಿಗೆ ಬೆರೆಸಿ ಸಿಂಪಡಿಸಬೇಕು.

ಕಬ್ಬಿನಲ್ಲಿ ತುಕ್ಕುರೋಗದ ಹತೋಟಿಗೆ ಹೆಕ್ಸಾಕೊನಾಜೋಲ್ 5 ಇಸಿ/ಪ್ರೋಫಿಕೊನಾಜೋಲ್ 25 ಇಸಿ ಪ್ರತೀ ಲೀಟರ ನೀರಿಗೆ ಬೆರೆಸಿ ಸಿಂಪಡಿಸಬೇಕು.

ಕಬ್ಬಿನಲ್ಲಿ ಹನಿ ನೀರಾವರಿ ಅಳವಡಿಸುವುದರಿಂದ ಶೇ. 40 ರಷ್ಟು ನೀರನ್ನು ಉಳಿತಾಯ ಮಾಡಬಹುದು. • ಕಬ್ಬಿನಲ್ಲಿ ಸೂಲಂಗಿ (ಹೂ) ಬಂದ ಎರಡು ತಿಂಗಳ ಒಳಗಾಗಿ ಕಟಾವು ಕೈಗೊಳ್ಳಬೇಕು.

ಕಬ್ಬಿನ ಕಟಾವಾದ ನಂತರ ಕಬ್ಬಿನ ರವದಿಯನ್ನು ಸುಡದೆ ಕಾಂಪೊಸ್ಟ ತಯಾರಿಸಲು ಉಪಯೋಗಿಸಬೇಕು/ ಕಬ್ಬಿನ ಸಾಲುಗಳ ಮದ್ಯ ಹೊದಿಕೆಯಾಗಿ ಹಾಕಬೇಕು.

4. ಮಾವು :

ಅ) ನಿರ್ವಹಣಾ ಕ್ರಮಗಳು:

ಮಾವಿನಲ್ಲಿ ಹಣ್ಣು ನೊಣದ ನಿಯಂತ್ರಣಕ್ಕಾಗಿ ಪ್ರತಿ ಎಕರೆ ಪ್ರದೇಶದಲ್ಲಿ 4 ಮೋಹಕ ಬಲೆಗಳನ್ನು ತೂಗು ಹಾಕಬೇಕು. ಈ ಬಲೆಗಳಲ್ಲಿ ಪ್ರತಿ ಲೀಟರ್ ನೀರಿನಲ್ಲಿ 1 ಮಿ.ಲೀ. ಮೀಥೈಲ್ ಯುಜಿನಾಲ್ ಬೆರೆಸಿದ ದ್ರಾವಣ ಬಳಸಬೇಕು.

ಪ್ರತಿ ಬಲೆಗೆ 100 ಮಿ.ಲೀ. ದ್ರಾವಣ ಉಪಯೋಗಿಸಬೇಕು. • ಮಾವಿನ ಹಣ್ಣುನೊಣದ ಹತೋಟಿಗೆ 4 ಗ್ರಾಂ ಕಾರ್ಬರಿಲ್ 50 ಡಬ್ಲೂಪಿ ಪ್ರತಿ ಲೀ. ನೀರಿಗೆ ಅಥವಾ 1.7 ಮಿ.ಲೀ ಡೈಮಿಥೋಯೇಟ್ 30 ಇಸಿ ಯನ್ನು 10 ಗ್ರಾಂ ಬೆಲ್ಲದೊಂದಿಗೆ ಕರಗಿಸಿ ಹಣ್ಣುಮಾಗುವ ಅವಧಿಯಲ್ಲಿ ಸಿಂಪರಣೆ ಮಾಡಬೇಕು.

ಆ) ಮಾವಿನ ಹಣ್ಣು ಹಾಕಲು:

0.1 ಪ್ರತಿಶತ ಇಥ್ರೆಲ (1 ಎಂ.ಎಲ್ ಇಥ್ರೆಲನ್ನು 1ಲೀಟರ ನೀರಿನಲ್ಲಿ ಬೆರೆಸುವದು) ನಂತರ ಈ ದ್ರಾವಣದಲ್ಲಿ ಕಯಿಗಳನ್ನು ಅದ್ದಿ ತೆಗೆದು ಪೇಪರ ಮೆಲೆ ಒಂದಕ್ಕೊಂದು ತಾಗದಂತೆ ಒಣಗಲು ಬಿಡಬೇಕು.

ಈ ವಿಧಾನದಿಂದ 2 ದಿನದಲ್ಲಿ ಕಾಯಿ ಹಣ್ಣಾಗುವವು ಅಥವಾ ಒಣಗಿದ ಭತ್ತದ ಹುಲ್ಲು/ಗೋಧಿ ಹುಲ್ಲನ್ನು ಉಪಯೋಗಿಸಬೇಕು. ಮೆಣಶಿನಕಾಯಿ/ ಟೊಮ್ಯಾಟೊ/ ಬದನೆ

5. ಮೆಣಶಿನಕಾಯಿ: ಮಳೆಯ ಅವಕಾಶವಿಲ್ಲದಿರುವುದರಿಂದ ತರಕಾರಿ ಬೆಳೆಗಳಿಗೆ ನೀರು ಕೊಡಬೇಕು.

ಮೆಣಶಿನಕಾಯಿಯಲ್ಲಿ ರಸಹೀರುವ ಕೀಟಗಳಾದ ಥ್ರಿಪ್ಸ್ನುಶಿ ಹಾಗೂ ಹೇನಿನ ಹತೋಟಿಗೆ 1.7 ಮಿ.ಲೀ ಡೈಮಿಥೋಯೇಟ್ 30 ಇ.ಸಿ ಅಥವಾ 1.0 ಮಿ.ಲೀ ಮಿಥೈಲ್ ಪ್ಯಾರಾಥಿಯಾನ್ 50 ಇ.ಸಿ ಅಥವಾ 1.0 ಗ್ರಾಂ ಅಸಿಫೇಟ್ 75 ಎಸ್.ಪಿ ಪ್ರತಿಲೀಟರ ನೀರಿಗೆ ಬೆರೆಸಿ ಸಿಂಪಡಿಸಬೇಕು.

ಮೆಣಶಿನಕಾಯಿ ಬೆಳೆಯು ಬಹುತೇಕ ಕಟಾವಿನ ಹಂತದಲ್ಲಿರುವುದರಿAದ ಈಗ ಮೆಳೆಯವಕಾಶ ಕಡಿಮೆ ಇರುವುದರಿಂದ ಆದಷ್ಟು ಬೇಗನೆ ಕಟಾವುಮಾಡಿ ಬಿಸಿಲಿಗೆ ಒಣಗಿಸಬೇಕು.

a) ಟೊಮ್ಯಾಟೊ: ಟೊಮ್ಯಾಟೊದಲ್ಲಿ ಟ್ಯೂಟಾ ಕೀಟದ ಹತೋಟಿ: ಪ್ರತಿ ಎಕರೆ ಪ್ರದೇಶಕ್ಕೆ 12 ಮೋಹಕ ಬಲೆಗಳನ್ನು ಅಳವಡಿಸಬೇಕು.

ಸಿಂಪರಣೆ: ಪ್ರತಿ ಲೀಟರ ನೀರಿಗೆ 0.15 ಮಿ.ಲೀ ಕ್ಲೊರ‍್ಯಾಂಟ್ರಾನೀಲಿಪ್ರೇಲ್ 18.5 ಎಸ್.ಸಿ ಕೀಟನಾಸಕವನ್ನು ಬೆರೆಸಿ ಸಿಂಪದಿಸಬೇಕು.

ಟೊಮ್ಯಾಟೊ ಬೆಳೆಯಲ್ಲಿ, ಬೂದುರೋಗದ ಬಾಧೆ ಕಂಡುಬAದಲ್ಲಿ 3 ಗ್ರಾಂ, ನೀರಿನಲ್ಲಿ ಕರಗುವ ಗಂಧಕವನ್ನು ಪ್ರತಿ ಲೀ. ನೀರಿಗೆ ಬೆರೆಸಿ ಸಿಂಪಡಿಸಬೇಕು.

ಟೊಮ್ಯಾಟೊ ಬೆಳೆಯಲ್ಲಿ ಪ್ರತಿ ಎರಡು ಸಾಲುಗಳ ಮದ್ಯ ಒಂದು ಸಾಲು ಮೂಲಂಗಿ ಬೆಳೆಯನ್ನು ಅಂತರ ಬೆಳೆಯಾಗಿ ಬೆಳೆಯುವದರಿಂದ ಹಣ್ಣು ಕೊರಕದಬಾಧೆ ಕಡಿಮೆಮಾಡಬಹುದು.

6. ಪಶು ವಿಜ್ಙಾನ: ನೆರಳಿಗಾಗಿ ಎರೆಹುಳು ಕುಣಿಯಸುತ್ತ ತರಕಾರಿ ಬೆಳೆದರೆ ಇದರ ಕೀಟ/ರೋಗದ ಹತೋಟಿಗೆ ರಾಸಾಯನಿಕಗಳನ್ನು ಸಿಂಪರಣೆ ಮಾಡಬಾರದು.

ಹಾಲು ಕೊಡುವ ಪ್ರಾಣಿಗಳಿಗೆ ಅವು ಕೊಡುವ ಹಾಲಿನ ಆದಾರದ ಮೇಲೆ ಆಹಾರವನ್ನು ಕೋಡಬೇಕು.

ನೆರಳಿಗಾಗಿ ಎರೆಹುಳು ಕುಣಿಯಸುತ್ತ ತರಕಾರಿ ಬೆಳೆದರೆ ಇದರ ಕೀಟ/ರೋಗದ ಹತೋಟಿಗೆ ರಾಸಾಯನಿಕಗಳನ್ನು ಸಿಂಪರಣೆ ಮಾಡಬಾರದು.

ಜಾನುವಾರುಗಳಿಗೆ ಹತ್ತಿರದ ಪಶುವ್ಶೆದ್ಯಾದಿಕಾರಿಗಳ ಸಲಹೆ ಪಡೆದು ಜಂತುನಾಶಕ ಔಷಧಿ ಕುಡಿಸಬೇಕು. • ದನದ ಕೊಟ್ಟಿಗೆಯನ್ನು ಸ್ವಚ್ಚವಾಗಿಡಬೇಕು ಮತ್ತು ತಾಪಮಾನ ಹೆಚ್ಚಾಗುತ್ತಿರುವದರಿಂದ ಚಪ್ಪರದಮೇಲೆ ಒಣಕಣಿಕೆ ಅಧವಾ ಹುಲ್ಲಿನ ಹೊದಿಕೆಹಾಕಿ ತಂಪಾಗಿರುವಂತೆ ನೋಡಿಕೊಳ್ಳಬೇಕು.

ಬೇಸಿಗೆಯಲ್ಲಿ ಕೆರೆಯನೀರು ಕಲುಷಿತವಾಗುವ ಸಾದ್ಯತೆಯಿರುವುದರಿಂದ ಸ್ವಚ್ಛವಾದ ನೀರಿನಿಂದ ಮೈತೊಳೆಯಬೇಕು. • ಬೇಸಿಗೆ ಸಮಯದಲ್ಲಿ ದನ ಕರುಗಳಿಗೆ ಮೇಲಿಂದಮೆಲೆ ಶುದ್ಧವಾದ ನೀರುಕುಡಿಸಬೇಕು.

ಎಮ್ಮೆಗಳಿಗೆ ಮದ್ಯಾಹ್ನದ ಸಮಯದಲ್ಲಿ ಆದಷ್ಟು ನೀರಿನಲ್ಲಿ (ಕೆರೆ, ಹೊಂಡದಲ್ಲಿ) ಬಿಡುವುದು ಉತ್ತಮ. ಇಲ್ಲವೆ ದಿನಕ್ಕೆ 2-3 ಬಾರಿ ನಣ್ಣೀರಿನಿಂದ ಮೈತೊಳೆಯಬೇಕು ಇಲ್ಲವೇ ನೀರು ಸಿಂಪಡಿಸಬೇಕು.