News

ಸಿಟಿ ಕಾಂಪೋಸ್ಟ್ ವಿತರಣೆಗೆ 50ರಷ್ಟು ಸರ್ಕಾರದಿಂದ ಸಹಾಯಧನ

29 December, 2020 7:00 AM IST By:
Compost Subsidy

ಸಿಟಿ ಕಾಂಪೋಸ್ಟ್ ಅಥವಾ ಸಿಟಿ ಗೊಬ್ಬರ ಅತಿ ಹೆಚ್ಚು ಪೋಷಕಾಂಶಗಳು ಹೊಂದಿದ್ದು ಇದು ಎಲ್ಲ ರೈತರ ಹೊಲಗಳಿಗೆ ಹಾಕಿದರೆ ತುಂಬಾ ಒಳ್ಳೆಯದು. ಅದಕ್ಕೋಸ್ಕರ ಸರಕಾರವು 50ರಷ್ಟು ಸಹಾಯಧನ ರೈತರಿಗೆ ನೀಡಲಾಗುತ್ತದೆ. ಇನ್ನುಳಿದ ಅರ್ಧದಷ್ಟು ರೈತರು ಹಣವನ್ನು ಪಾವತಿಸಬೇಕಾಗುತ್ತದೆ.

ಸರ್ಕಾರವು ಎಲ್ಲಾ ಸಿಟಿ ತ್ಯಾಜ್ಯಗಳನ್ನು ಒಂದೆಡೆ ತೆಗೆದುಕೊಂಡುಹೋಗಿ ಹಾಕುತ್ತಾರೆ.  ಅದರಲ್ಲಿರುವ ಕಾಗದಗಳು, ವಿಭಜನೆ ಒಳಗಾಗದ ವಸ್ತುಗಳನ್ನು ಬೇರ್ಪಡಿಸುತ್ತಾರೆ,  ವಿಭಜನೆ ಗೊಳ್ಳುವ ವಸ್ತುಗಳು ಒಂದೆಡೆ ಹಾಕಿ ಅದನ್ನು ಕೋಳಿಸುತ್ತಾರೆ.  ಅದು ಹೆಚ್ಚು ಪೋಷಕಾಂಶಗಳನ್ನು ಹೊಂದಿರುತ್ತದೆ, ಉಳಿದ ತಿಪ್ಪೆ ಗೊಬ್ಬರದೊಂದಿಗೆ ಹೊಂದಾಣಿಕೆ ಮಾಡಿದರೆ ಅದು ಹೆಚ್ಚು ಪೋಷಕಾಂಶಗಳು ಹೊಂದಿಕೊಂಡಿರುತ್ತದೆ.

ಇದರಿಂದಾಗಿ ಎಲ್ಲಾ ಹಣವು ರೈತರೇ ಪಾವತಿಸಬೇಕಾದ ರೆ ಒಂದು ಹೆಚ್ಚು ಹಣ ಆಗುತ್ತದೆ ಎಂದು 50ರಷ್ಟು ಸರ್ಕಾರವೇ ನೀಡಲಾಗುತ್ತದೆ.

ಸಿಟಿ ಕಾಂಪೋಸ್ಟ್ ನಲ್ಲಿ ಹೊಂದಿರುವ ಅಂಶಗಳು:

* ಇದರಲ್ಲಿ ಸಾರಜನಕ ರಂಜಕ ಪೊಟ್ಯಾಶ್ ಪೋಷಕಾಂಶಗಳು 1.2 ಶೇಕಡ ಕಿಂತ ಜಾಸ್ತಿ ಇರುತ್ತದೆ.

* ಸಾವಯವ ಇಂಗಾಲ ಶೇಕಡ 12 ಕಿಂತ ಹೆಚ್ಚು ಇರುತ್ತದೆ.

* ಮತ್ತು ಲಘು ಪೋಷಕಾಂಶಗಳು ಮತ್ತು ಸೂಕ್ಷ್ಮಾಣು ಜೀವಿಗಳು ಹೊಂದಿರುತ್ತದೆ.

City Compost

ಸಿಟಿ ಕಾಂಪೋಸ್ಟ್ ಬಳಸುವುದರಿಂದ ಆಗುವ ಪ್ರಯೋಜನಗಳು:

* ಮಣ್ಣಿನ ಕಣಗಳ ಸಾಂದ್ರತೆಯು ಕಡಿಮೆ ಆಗುವುದರಿಂದ ಮಣ್ಣಿನಲ್ಲಿ ಗಾಳಿಯ ಪ್ರವೇಶ ಸುಲಭವಾಗಿ ಆಗುತ್ತದೆ.  ಇದರಿಂದ ಮಣ್ಣು ಫಲವತ್ತತೆ ಕಳೆದುಕೊಳ್ಳುವುದಿಲ್ಲ.

* ಮಣ್ಣಿನಲ್ಲಿ ತೇವಾಂಶ ಹಿಡಿವ ಶಕ್ತಿ ಹೆಚ್ಚಿಸುತ್ತದೆ.

* ಸಾವಯವ ಗೊಬ್ಬರ ಮಣ್ಣಿನಲ್ಲಿ ಇರುವುದರಿಂದ ಮಣ್ಣಿನಲ್ಲಿ ಸೂಕ್ಷ್ಮಜೀವಿಗಳ ಪ್ರಕ್ರಿಯೆ ನಿರಂತರವಾಗಿ ನಡೆಯುವುದರಿಂದ ಮಣ್ಣಿನ ಗುಣಮಟ್ಟ ಹೆಚ್ಚುತ್ತದೆ

* ಸತತವಾಗಿ ಸಾವಯವ ಗೊಬ್ಬರಗಳು ಉಪಯೋಗಿಸುವುದರಿಂದ ಒಂದು ಹೆಚ್ಚಿನ ಇಳುವರಿ ಪಡೆದುಕೊಳ್ಳಬಹುದು.

* ಮಣ್ಣಿನ ರಸಸಾರ ಸಮತೋಲನದಲ್ಲಿಡುತ್ತದೆ.

 ಬಳಸುವ ಪ್ರಮಾಣ :

* ಕೃಷಿ ಬೆಳೆಗಳಾದ ಜೋಳ ಮುಸುಕಿನ ಜೋಳ ಸೂರ್ಯಕಾಂತಿ,  ಇತ್ಯಾದಿ ಇದಕ್ಕೆ ಸಿಟಿ ಕಾಂಪೋಸ್ಟ್ ಒಂದು ಮೆಟ್ರಿಕ್ ಟನ್ ಪ್ರತಿ ಎಕರೆಗೆ ಹಾಕಬೇಕು.

* ತೋಟಗಾರಿಕೆ ಬೆಳೆಗಳಾದ ದ್ರಾಕ್ಷಿ,ತೆಂಗು,ಮಾವು, ಸೀಬೆ, ನಿಂಬೆ, ಸಪೋಟ್, ಪ್ರತಿ ಗಿಡಕ್ಕೆ 10 ಕೆಜಿ ಹಾಕಬೇಕು.

* ಕುಂಬಳಕಾಯಿಗಳು,  ಬದನೆ,ಬೆಂಡೆ,  ಎಲೆಕೋಸು ಮತ್ತು ಹೂಕೋಸು ಇತರೆ ಅರ್ಧ ಕೆಜಿ ಸಿಟಿ ಕಾಂಪೋಸ್ಟ್ ಪ್ರತಿ ಚದುರು ಮೀಟರ್ ಗೆ ಹಾಕಬೇಕು.

* ಪ್ಲಾಂಟೇಶನ್ ಬೆಳೆಗಳಾದ ರಬ್ಬರ್,ಅಡಿಕೆ,ಗೋಡಂಬಿ ಗಳಿಗೆ 1ಕೆಜಿ ಪ್ರತಿ ಚದುರ ಮೀಟರ್ ಗೆ ಹಾಕಬೇಕು.

* ಅಲಂಕಾರಿಕ ಸಸ್ಯಗಳಿಗೆ 1ಕೆಜಿ ಸಿಟಿ ಕಾಂಪೋಸ್ಟ್ ಪ್ರತಿ ಚದರ ಮೀಟರ್ ಗೆ ಹಾಕಬೇಕು.

 ಕೃಷಿ ಇಲಾಖೆಯಿಂದ ಸಹಾಯಧನ ರೈತರಿಗೆ

 *ಸಿಟಿ ಕಾಂಪೋಸ್ಟ್ ಪ್ರತಿ ಟನ್ನಿಗೆ 2,200/- ರೂಪಾಯಿಗಳು,

* ಸರ್ಕಾರವು ರೈತರಿಗೆ ನೀಡುವುದು 1,100/- ಇದು ಪ್ರತಿ ಟನ್ನಿಗೆ ನೀಡಲಾಗುತ್ತದೆ.

* ಕೆಸಿ ಡಿಸಿ ಮೂಲಕ ರೈತರು ಸಿಟಿ ಕಾಂಪೋಸ್ಟ್ ಜಮೀನಿಗೆ ಸಾಗಿಸಿದರೆ, ಪಾವತಿಸಬೇಕಾದ ದರ 1,100/- ಪ್ರತಿ ಒಂದು ಟನ್ನಿಗೆ.

* ರೈತರೇ ನೇರವಾಗಿ ಘಟಕದಿಂದ ಸಿಟಿ ಕಾಂಪೋಸ್ಟ್ ಸಾಗಿಸಿ ಕೊಂಡರೆ ಪಾವತಿಸಬೇಕಾದ ದರ 200/-

* ಕೆಸಿಡಿಸಿ ಇಂದ ನೇರವಾಗಿ ಸಿಟಿ ಕಾಂಪೋಸ್ಟ್, ಖರೀದಿಸುವುದರ 2,520/- ಪ್ರತಿ ಟನ್ನಿಗೆ.

ಹೆಚ್ಚಿನ ಮಾಹಿತಿಗಾಗಿ http://www.kcdc.in/ ಈ ವೆಬ್ ಪೇಜ್ ನಲ್ಲಿ ಮಾಹಿತಿ ಪಡೆದುಕೊಳ್ಳಿ.

ಲೇಖಕರು: ಮುತ್ತಣ್ಣ ಬ್ಯಾಗೆಳ್ಳಿ