News

5 Guarantees 5 ಗ್ಯಾರಂಟಿಗಳ ಜಾರಿಗೆ ಸರ್ಕಸ್‌: ಜಾರಿಯಾಗುತ್ತಾ ಗ್ಯಾರಂಟಿ ?

02 June, 2023 2:11 PM IST By: Hitesh
Circus to implement 5 Guarantees: Guarantee Enforcement?

ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದಕ್ಕೆ ಆ ಪಕ್ಷ ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಐದು ಪ್ರಮುಖ ಗ್ಯಾರಂಟಿಗಳೂ ಪ್ರಮುಖವಾದ ಪಾತ್ರವನ್ನು ವಹಿಸಿದೆ.

ಆಗಿದ್ದರೆ, ಕಾಂಗ್ರೆಸ್‌ ಚುನಾವಣೆಯ ಸಂದರ್ಭದಲ್ಲಿ ನೀಡಿದ್ದ ಭರವಸೆಗಳೇನು, ಅದಕ್ಕೆ ಎಷ್ಟು ವೆಚ್ಚವಾಗಲಿದೆ

ಈಗ ಏನ್ನೆಲ್ಲ ಚರ್ಚೆ ನಡೆಯುತ್ತಿದೆ ಎನ್ನುವುದರ ವಿವರ ಇಲ್ಲಿದೆ .

ಶುಕ್ರವಾರ ಕ್ಯಾಬಿನೆಟ್‌ ಸಭೆ 

ಗ್ಯಾರಂಟಿ ಘೋಷಣೆಗೆ ಸಂಬಂಧಿಸಿದಂತೆ ಶುಕ್ರವಾರ ಸಚಿವ ಸಂಪುಟ ಸಭೆ ನಡೆಯಲಿದೆ. ಸಂಪುಟ ಸಭೆಯಲ್ಲಿ ಮತ್ತೊಂದು ಸುತ್ತಿನ ಚರ್ಚೆ

ನಡೆದ ನಂತರದಲ್ಲಿ ಗ್ಯಾರಂಟಿ ಜಾರಿ ಕುರಿತು ಅಧಿಕೃತ ಘೋಷಣೆ ಆಗುವ ಸಾಧ್ಯತೆ ಇದೆ.

ಗ್ಯಾರಂಟಿ ಜಾರಿಗೆ ಸರ್ಕಸ್‌: ಸರಣಿ ಸಭೆ!

ಕಾಂಗ್ರೆಸ್‌ ಚುನಾವಣೆಯ ಸಂದರ್ಭದಲ್ಲಿ ನೀಡಿದ್ದ ಐದು ಗ್ಯಾರಂಟಿಗಳ ಜಾರಿಗೆ ಸಂಬಂಧಿಸಿದಂತೆ ಈಗಾಗಲೇ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರಣಿ ಸಭೆ ನಡೆಸಿದ್ದಾರೆ. ಅಧಿಕಾರಿಗಳು ಹಾಗೂ ಸಚಿವರೊಂದಿಗೆ ಗ್ಯಾರಂಟಿ ಜಾರಿಗೆ

ಸಂಬಂಧಿಸಿದಂತೆ ಹಲವು ಸಭೆಗಳು ನಡೆದಿವೆ. ಈ ನಡುವೆ ಗ್ಯಾರಂಟಿಯನ್ನು ಯಾವುದೇ ಷರತ್ತುಗಳು ಇಲ್ಲದೆ

ಜಾರಿ ಮಾಡಬೇಕು ಎಂದು ವಿರೋಧ ಪಕ್ಷಗಳು ಪಟ್ಟು ಹಿಡಿದಿವೆ. ಆಗಿದ್ದರೆ ಕಾಂಗ್ರೆಸ್‌ ಚುನಾವಣೆ ಸಂದರ್ಭದಲ್ಲಿ

ನೀಡಿದ್ದ  5 ಗ್ಯಾರಂಟಿಗಳೇನು ಎನ್ನುವುದನ್ನು ನೋಡೋಣ. 

ಪ್ರಮುಖ ಐದು ಗ್ಯಾರಂಟಿಗಳ ವಿವರ ಈ ರೀತಿ ಇದೆ.   

ಗೃಹಲಕ್ಷ್ಮೀ ಯೋಜನೆ: ಕಾಂಗ್ರೆಸ್‌ ಪಕ್ಷವೇ ಹೇಳಿರುವಂತೆ ಈ ಯೋಜನೆಯ ಮೂಲಕ ಕುಟುಂಬ ನಿರ್ವಹಣೆಗೆ ಆರ್ಥಿಕ

ಬೆಂಬಲ ನೀಡಲು ಉದ್ದೇಶಿಸಲಾಗಿದ್ದು, ಯೋಜನೆಯ ಅಡಿಯಲ್ಲಿ ಮನೆಯ ಯಜಮಾನಿಗೆ ಪ್ರತಿ ತಿಂಗಳು 2,000 ಸಾವಿರ ರೂ. ಸಹಾಯಧನ ಸಿಗಲಿದೆ.

ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ: ರಾಜ್ಯದ ಮಹಿಳೆಯರಿಗೆ ಸರ್ಕಾರಿ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ.

ಯುವನಿಧಿ: ಈ ಯೋಜನೆಯ ಅಡಿಯಲ್ಲಿ ನಿರುದ್ಯೋಗಿಗಳಿಗೆ ಮಾಸಿಕ 3000 ಸಾವಿರ ರೂಪಾಯಿ ಹಾಗೂ

ಡಿಪ್ಲೋಮಾ ಪದವೀಧರ ನಿರುದ್ಯೋಗಿಗಳಿಗೆ 1,500 ರೂಪಾಯಿ ನಿರುದ್ಯೋಗ ಭತ್ಯೆ ನೀಡಲು ಅನುಮೋದನೆ (ಎರಡು ವರ್ಷಗಳ ವರೆಗೆ) ಈ ಸೌಲಭ್ಯ ಸಿಗಲಿದೆ.

ಗೃಹ ಜ್ಯೋತಿ: ಈ ಯೋಜನೆಯ ಅಡಿಯಲ್ಲಿ ರಾಜ್ಯದ ಪ್ರತಿ ಮನೆಗೆ 200 ಯೂನಿಟ್‌ ಉಚಿತ ವಿದ್ಯುತ್‌ ಸಿಗಲಿದೆ.

ಅನ್ನಭಾಗ್ಯ: ಈ ಯೋಜನೆಯ ಅಡಿಯಲ್ಲಿ ರಾಜ್ಯದ ಬಿಪಿಎಲ್‌ ಕುಟುಂಬದ ಪ್ರತಿ ವ್ಯಕ್ತಿಗೆ ತಲಾ 10 ಕೆ.ಜಿ ಉಚಿತ ಅಕ್ಕಿ ಸಿಗಲಿದೆ. 

(ವಿಡಿಯೋ ಸ್ಟೋರಿಗೆ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ)
5GuaranteeScheme 5 ಗ್ಯಾರಂಟಿ ಜಾರಿಗೆ ಸರ್ಕಸ್‌: ಜಾರಿಯಾಗುತ್ತಾ ಗ್ಯಾರಂಟಿ? Congressguaranteeupdates|promises  

ಯಾವ ಯೋಜನೆಗೆ ಎಷ್ಟು ಕೋಟಿ ರೂಪಾಯಿ ಬೇಕು ?

ಐದು ಯೋಜನೆಗಳ ಅನುಷ್ಠಾನಕ್ಕೆ ಈ ಹಿಂದೆ ಅಂದಾಜು 50ರಿಂದ 52 ಸಾವಿರ ಕೋಟಿ ರೂಪಾಯಿ ಬೇಕು ಎಂದು ಅಂದಾಜಿಸಲಾಗಿತ್ತು.

ಪರಿಶೀಲನೆಯ ನಂತರ ಇದೀಗ ಅಂದಾಜು 48 ಸಾವಿರ ಕೋಟಿ ರೂಪಾಯಿ ಬೇಕಾಗಲಿದೆ ಎಂದು ಅಂದಾಜಿಸಲಾಗಿದೆ.

ಎಲ್ಲರಿಗೂ 200 ಯೂನಿಟ್‌ ಉಚಿತ ವಿದ್ಯುತ್‌ ಅಂದರೆ, ಗೃಹಜ್ಯೋತಿ ಯೋಜನೆ ಜಾರಿಗೆ 10 ಕೋಟಿ ರೂಪಾಯಿ ವೆಚ್ಚವಾಗಲಿದೆ.

2.14 ಕುಟುಂಬಕ್ಕೆ ಈ ಮೊತ್ತ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

ಇನ್ನು ಗೃಹಲಕ್ಷ್ಮಿ ಯೋಜನೆ ಅನುಷ್ಠಾನಕ್ಕೆ 24 ಸಾವಿರ ಕೋಟಿ ರೂ., ಅನ್ನಭಾಗ್ಯ ಯೋಜನೆ ಅಡಿಯಲ್ಲಿ 10 ಕೆ.ಜಿ ಅಕ್ಕಿ

ನೀಡುವುದಕ್ಕೆ 9,500 ಕೋಟಿ ರೂ., ರಾಜ್ಯದ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕೆ 3 ಸಾವಿರ ಕೋಟಿ ರೂ.

ಹಾಗೂ ನಿರುದ್ಯೋಗ ಭತ್ಯೆ ನೀಡುವ ಯುವನಿಧಿ ಯೋಜನೆಗೆ ಅಂದಾಜು 2 ಸಾವಿರ ಕೋಟಿ ರೂಪಾಯಿ ಬೇಕಾಗಲಿದೆ ಎಂದು ಅಂದಾಜಿಸಲಾಗಿದೆ. 

(ವಿಡಿಯೋ ಸ್ಟೋರಿಗೆ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ)
5GuaranteeScheme 5 ಗ್ಯಾರಂಟಿ ಜಾರಿಗೆ ಸರ್ಕಸ್‌: ಜಾರಿಯಾಗುತ್ತಾ ಗ್ಯಾರಂಟಿ? Congressguaranteeupdates|promises