News

ಚಿತ್ರದುರ್ಗ: ಪಿಎಂ ಕಿಸಾನ್‌ e-KYC ಮಾಡಿಸಲು ಕೊನೆಯ ಅವಕಾಶ

23 May, 2023 2:47 PM IST By: Maltesh
ಪಿಎಂ ಕಿಸಾನ್‌ e-KYC ಮಾಡಿಸಲು ಕೊನೆಯ ಅವಕಾಶ

ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ ನೋಂದಾಯಿತ ಅರ್ಹ ಫಲಾನುಭವಿಗಳಿಗೆ ಆರ್ಥಿಕ ನೆರವು ಜಮೆಯಾಗುತ್ತಿದ್ದು, ಈ ಕುರಿತು ಅರ್ಹ ಫಲಾನುಭವಿಗಳು ಕಡ್ಡಾಯವಾಗಿ ಇ-ಕೆವೈಸಿ ಮಾಡಿಕೊಳ್ಳಬೇಕು. ಇದು ಕೊನೆಯ ಅವಕಾಶ ಎಂದು ಕೃಷಿ ಇಲಾಖೆ ಜಂಅಟಿ ಕೃಷಿ ನಿರ್ದೇಶಕ ಪಿ.ರಮೇಶ್ ಕುಮಾರ್ ಜಿಲ್ಲೆಯ ರೈತರಿಗೆ ಮನವಿ ಮಾಡಿದ್ದಾರೆ.

ಈಗಾಗಲೇ ಅನೇಕ ಬಾರಿ ಮನವಿ ಮಾಡಿದರೂ ಕೆಲವು ರೈತರು ಇ-ಕೆವೈಸಿ ಮಾಡಿಸಿರುವುದಿಲ್ಲ. ಅರ್ಹ ರೈತ ಫಲಾನುಭವಿಯು http://pmkisan.gov.in   ವೈಬ್ಸೈಟ್‍ಗೆ ಭೇಟಿ ನೀಡಿ, ಆಧಾರ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆ ನಮೂದಿಸಬೇಕು. ಮೊಬೈಲ್ ಸಂಖ್ಯೆಗೆ ಬರುವ ಓಟಿಪಿ ನಮೂದಿಸಿ ಉಚಿತವಾಗಿ ಇ-ಕೆವೈಸಿ ಮಾಡಿಕೊಳ್ಳಬಹುದು.

ಆಧಾರ್ ಸಂಖ್ಯೆಗೆ ಮೊಬೈಲ್ ನಂಬರ್  ನೋಂದಾಣೆಯಾಗದ ರೈತರು ಅಥವಾ ಓಟಿಸಿ ಸೃಜನೆಯಾಗದ ರೈತರು ಹತ್ತಿರದ ಗ್ರಾಮ ಒನ್ ಸೇವಾ ಕೇಂದ್ರ ಅಥವಾ ಸಮಾನ್ಯ ಸೇವಾ ಕೇಂದ್ರಕ್ಕೆ (csc)  ಭೇಟಿ ನೀಡಿ ಬಯೋಮೆಟ್ರಿಕ್ ಉಪಕರಣದಲ್ಲಿ ಬೆರಳಚ್ಚು ನಮೂದಿಸಿ ಇ-ಕೆವೈಸಿ ಮಾಡಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಭೇಟಿ ನೀಡಿ, ಮಾಹಿತಿ ಪಡೆದು ಇ-ಕೆವೈಸಿ ನೋಂದಾಯಿಸಲು ಜಂಟಿ ಕೃಷಿ ನಿರ್ದೇಶಕ ಪಿ. ರಮೇಶಕುಮಾರ್ ತಿಳಿಸಿದ್ದಾರೆ.

ಕೃಷಿ ಪ್ರಾಯೋಗಿಕ ತರಬೇತಿ

ಚಿತ್ರದುರ್ಗ ನಗರದ ಎ.ಪಿ.ಎಂ.ಸಿ ಆವರಣದ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಇದೇ ಮೇ.31 ಮತ್ತು ಜೂನ್ 1 ರಂದು ಕೃಷಿ ಕೋಟಾದಡಿ ರಾಜ್ಯದ ಕೃಷಿ ಹಾಗೂ ಸಂಬಂಧಿತ ವಿಶ್ವ ವಿದ್ಯಾನಿಲಯಗಳಿಗೆ 2023-24ನೇ ಸಾಲಿನ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ಕೃಷಿ ಪ್ರಾಯೋಗಿಕ ತರಬೇತಿ ಹಮ್ಮಿಕೊಳ್ಳಲಾಗಿದೆ.

ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ, ಅರಣ್ಯ, ರೇಷ್ಮೆ, ಹಣ್ಣು, ತರಕಾರಿ, ಬಿತ್ತನೆ ಬೀಜ, ಆಹಾರ ಧಾನ್ಯ, ಕೃಷಿ ಪರಿಕರಗಳ ಬಗ್ಗೆ ಪರಿಚಯಿಸಲಾಗುತ್ತದೆ.

ಕರ್ನಾಟಕ ರಾಜ್ಯದ ಕೃಷಿ ಮತ್ತು ಕೃಷಿ ಸಂಬಂಧಿತ ವಿಶ್ವ ವಿದ್ಯಾನಿಲಯಗಳಲ್ಲಿ ಸ್ನಾತಕ ಪದವಿಗಳ ಪ್ರವೇಶಕ್ಕೆ ಪ್ರವೇಶ ಬಯಸುವ ಅಭ್ಯರ್ಥಿಗಳು ಇದೇ ಮೇ.25 ರೊಳಗೆ ಸಂಸ್ಥೆ ಕಛೇರಿಯಲ್ಲಾಗಲಿ ಅಥವಾ 9742455666 ಗೆ ಫೋನ್ ಪೇ ಮೂಲಕವಾಗಲಿ ರೂ. 700/- ಅನ್ನು ಪಾವತಿಸಿ ಹೆಸರು ನೊಂದಾಯಿಸಿ ಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08194-228292, ಸಂಪರ್ಕಿಸಬೇಕು ಎಂದು ಕೃಷಿ ತಂತ್ರಜ್ಞರ ಸಂಸ್ಥೆ ಕಾರ್ಯದರ್ಶಿ ತಿಳಿಸಿದ್ದಾರೆ.