News

ಬೆಳೆ ವಿಮೆ: ವಿಮಾ ಮೊತ್ತ ತುಂಬಲು ಜುಲೈ 10ರವರೆಗೆ ಕೊನೆಯ ದಿನಾಂಕ ವಿಸ್ತರಣೆ

02 July, 2020 7:30 PM IST By:

ಪ್ರಸಕ್ತ 2020-21ನೇ ಸಾಲಿಗೆ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ  ಪಪ್ಪಾಯ ಹಾಗೂ ಹಸಿ ಮೆಣಸಿನಕಾಯಿ ಬೆಳೆಗಳಿಗೆ  ರೈತರು ಬೆಳೆ ವಿಮೆಗಾಗಿ ವಿಮಾ ಮೊತ್ತ ತುಂಬಲು ಕೊನೆಯ ದಿನಾಂಕವನ್ನು  ಜುಲೈ 10 ರವರೆಗೆ ವಿಸ್ತರಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ತಿಳಿಸಿದೆ.

ಪಪ್ಪಾಯ ಬೆಳೆಗೆ 6700 ರೂ.ಮತ್ತು ಹಸಿರು ಮೆಣಸಿನಕಾಯಿಗೆ ಪ್ರತಿ ಹೆಕ್ಟೇರ್ 3550 ರೂ.  ಪ್ರೀಮಿಯಂ ಮೊತ್ತ ಇರುತ್ತದೆ. ಈ ಯೋಜನೆಯ ಸದುಪಯೋಗ ಪಡೆಯಲು ರೈತರು ತಮ್ಮ ಹತ್ತಿರದ ಬ್ಯಾಂಕುಗಳಿಗೆ ಅಥವಾ ಸಾಮಾನ್ಯ ಸೇವಾ ಕೇಂದ್ರಗಳಿಗೆ (ಅSಅ) ಪಹಣಿ, ಆಧಾರ ಕಾರ್ಡ್, ಬ್ಯಾಂಕ್ ಪಾಸಬುಕ್ ಹಾಗೂ ಸ್ವಯಂ ಘೋಷಿತ ಬೆಳೆ ಪ್ರಮಾಣ ಪತ್ರದೊಂದಿಗೆ ಭೇಟಿ ನೀಡಬೇಕು. ಮತ್ತಿತರ  ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರನ್ನು ಸಂಪರ್ಕಿಸಬೇಕು.