ದೇಶದಲ್ಲಿ ನಿರಂತರವಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆಯ ನಡುವೆಯೇ ಕೇಂದ್ರ ಸರ್ಕಾರವು ಸಾರ್ವಜನಿಕರಿಗೆ ಸಿಹಿಸುದ್ದಿಯೊಂದನ್ನು ನೀಡಿದೆ. ಆ ಯೋಜನೆಯ ವಿವರ ಇಲ್ಲಿದೆ.
ಕೇಂದ್ರ ಸರ್ಕಾರವು ಇದೀಗ ಸಬ್ಸಿಡಿ ದರದಲ್ಲಿ ಕಡಿಮೆ ಬೆಲೆಗೆ ಕಡಲೆ ಬೇಳೆಯನ್ನು ನೀಡಲು ಮುಂದಾಗಿದೆ.
ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಸಬ್ಸಿಡಿ ಹೊಂದಿರುವ ಕಡಲೆಬೇಳೆಯನ್ನು ಭಾರತ್ ದಾಲ್ ಬ್ರಾಂಡ್
ಯೋಜನೆ ಹೆಸರಿನಲ್ಲಿ ಕೆ.ಜಿಗೆ 60 ರೂಪಾಯಿ ದರದಲ್ಲಿ ನಿಗದಿ ಮಾಡಲಾಗಿದೆ. ಇನ್ನು 30 ಕೆ.ಜಿಯ ಪ್ಯಾಕ್ ಖರೀದಿಸಿದರೆ,
ಪ್ರತಿ ಕೆಜಿಗೆ 55ರೂಪಾಯಿ ಆಗಲಿದೆ. ದೆಹಲಿ-ಎನ್‌ಸಿಆರ್‌ನಲ್ಲಿರುವ ನ್ಯಾಷನಲ್ ಅಗ್ರಿಕಲ್ಚರಲ್ ಕೋಆಪರೇಟಿವ್ ಮಾರ್ಕೆಟಿಂಗ್
ಫೆಡರೇಶನ್ ಚಿಲ್ಲರೆ ಮಾರಾಟ ಮಳಿಗೆಗಳು ಕಡಲೆಬೇಳೆಯನ್ನು ಮಾರಾಟ ಮಾಡುತ್ತಿವೆ.
ಭಾರತ್ ದಾಲ್ ಯೋಜನೆಯ ಮೂಲಕ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಬೇಳೆಕಾಳುಗಳನ್ನು ಲಭ್ಯವಾಗುವಂತೆ
ಮಾಡಲು ಕೇಂದ್ರ ಸರ್ಕಾರವು ತೆಗೆದುಕೊಂಡ ಪ್ರಮುಖ ಹೆಜ್ಜೆ ಇದಾಗಿದೆ ಎಂದು ಹೇಳಲಾಗಿದೆ.
ನ್ಯಾಷನಲ್ ಅಗ್ರಿಕಲ್ಚರಲ್ ಕೋಆಪರೇಟಿವ್ ಮಾರ್ಕೆಟಿಂಗ್ ಫೆಡರೇಶನ್ ದೆಹಲಿ-ಎನ್‌ಸಿಆರ್‌ನಲ್ಲಿರುವ ತನ್ನ ಚಿಲ್ಲರೆ
ಮಾರಾಟ ಮಳಿಗೆಗಳ ಮೂಲಕ ಮತ್ತು NCCF, ಕೇಂದ್ರೀಯ ಭಂಡಾರ್ ಮತ್ತು ಸಫಲ್‌ನ ಔಟ್‌ಲೆಟ್‌ಗಳ ಮೂಲಕ ಧಾನ್ಯವನ್ನು ವಿತರಿಸಲಿದೆ.
Chickpeas | ಇನ್ಮುಂದೆ ಸಬ್ಸಿಡಿ ದರದಲ್ಲಿ ಸಿಗಲಿದೆ ಕಡಲೆ ಬೇಳೆ; ಏನಿದು ಭಾರತ್ ದಾಲ್ ಯೋಜನೆ | Bharat Dal Scheme
ಅಲ್ಲದೇ ರಾಜ್ಯ ಸರ್ಕಾರಗಳ ಕಲ್ಯಾಣ ಯೋಜನೆಗಳು, ಜೈಲುಗಳಿಗೆ ಸರಬರಾಜು ಮಾಡಲು ಮತ್ತು ಅವರ ಗ್ರಾಹಕ ಸಹಕಾರಿ ಮಳಿಗೆಗಳ ಮೂಲಕ ವಿತರಿಸಲು ಲಭ್ಯವಿರಲಿದೆ.
ಕಡಲೆಬೇಳೆ ಮಹತ್ವವೇನು ?
ಕಡಲೆಬೇಳೆ ಭಾರತದಲ್ಲಿ ಹೇರಳವಾಗಿ ಬೆಳೆಯುವ ದ್ವಿದಳ ಧಾನ್ಯವಾಗಿದೆ. ಕಡಲೆಯನ್ನು ಕುದಿಸಿ ಸಲಾಡ್ ಮಾಡಲಾಗುತ್ತದೆ.
ಹುರಿದ ಕಡಲೆಯನ್ನು ಚನಾ ದಾಲ್, ಕರಿ ಹಾಗೂ ಸೂಪ್‌ಗಳಲ್ಲೂ ಬಳಸಲಾಗುತ್ತದೆ.
ಚನ್ನಾ ಬೆಸನ್ ನಮ್ಕೀನ್‌ಗಳು ಮತ್ತು ಸಿಹಿತಿಂಡಿಗಳಲ್ಲಿ ಪ್ರಮುಖ ಪದಾರ್ಥವಾಗಿ ಕಡಲೆಬೇಳೆಯನ್ನು ಬಳಸಲಾಗುತ್ತದೆ.
ಅಲ್ಲದೇ ರಕ್ತಹೀನತೆ, ರಕ್ತದಲ್ಲಿನ ಸಕ್ಕರೆ ಪ್ರಮಾಣ, ಮೂಳೆ ಆರೋಗ್ಯ ಸೇರಿದಂತೆ ದೇಹಕ್ಕೆ ಅವಶ್ಯವಿರುವ ಫೈಬರ್,
ಕಬ್ಬಿಣ, ಪೊಟ್ಯಾಸಿಯಮ್, ವಿಟಮಿನ್ ಬಿ, ಸೆಲೆನಿಯಮ್ ಬೀಟಾ, ಕ್ಯಾರೋಟಿನ್ ಮತ್ತು ಕೋಲೀನ್‌ಗಳಂತಹ
ಅಂಶವನ್ನು ಇದು ಒಳಗೊಂಡಿದೆ. ಬಹುಪೌಷ್ಟಿಕಾಂಶದ ಆರೋಗ್ಯ ಪ್ರಯೋಜನದ
ಜೊತೆಗೆ ಮಾನಸಿಕ ಆರೋಗ್ಯಕ್ಕೂ ಕಡಲೆ ಸಹಕಾರಿಯಾಗಿದೆ.