News

ಎಲ್‌ಪಿಜಿ ಗ್ರಾಹಕರಿಗೆ ಸಂತಸದ ಸುದ್ದಿ- ಈಗ ಕಿರಾಣಿ ಅಂಗಡಿಗಳಲ್ಲಿಯೂ ಸಿಗಲಿದೆ ಚೋಟು’ ಎಲ್‌ಪಿಜಿ

20 December, 2020 12:44 PM IST By:

ಚೋಟು ಪಾವ್, ಚೋಟು ಚಾಯ್, ಚೋಟು ಪಾವ್ ಭಾಜಿ ಹೀಗೆ ಚೋಟು ಹೀಗೆ ಚೋಟು ಇತ್ತೀಚೆಗೆ ದೇಶಾದ್ಯಂತ ಹೆಸರು ಮಾಡುತ್ತಿದೆ. ಈಗ ಚೋಟು ಸಿಲಿಂಡರ್ ಸಹ ನಿಮ್ಮ ಮನೆಬಾಗಿಲಿಗೆ ಬರಲಿದೆ. ನೀವು ಇದನ್ನು ಖರೀದಿಸಲು ಡೀಲರ್ ಬಳಿ ಹೋಗುವ ಅವಶ್ಯಕತೆಯಿಲ್ಲ. ಕಿರಾಣಿ ಅಂಗಡಿಯಲ್ಲಿಯೂ ಮುಂದೆ ಸಿಗಲಿದೆ.

ಹೌದು ಇತ್ತೀಚೆಗೆ ಇಂಡಿಯನ್ ಆಯಿಲ್ ಕಂಪನಿಯು ‘ಚೋಟು’ ಹೆಸರಿನ ಐದು ಕೆ.ಜಿ.ಯ ಅಡುಗೆ ಅನಿಲ್ (ಎಲ್‌ಪಿಜಿ) ಸಿಲಿಂಡರ್‌ಅನ್ನು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದೆ.

ತೂಕದಲ್ಲಿ ಹಗುರ, ರಿಯಾಯಿತಿ ದರದಲ್ಲಿ, ಸುಲಭವಾಗಿ ಕೊಂಡೊಯ್ಯಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಇದನ್ನು ಬಿಡುಗಡೆ ಮಾಡಲಾಗಿದೆ.

‘ಚೋಟು’ ಎಲ್‌ಪಿಜಿ ಸಿಲಿಂಡರ್‌ ಅನ್ನು ಇಂಡಿಯನ್‌ ಆಯಿಲ್‌ ಪೆಟ್ರೋಲ್‌ ಬಂಕ್‌ಗಳಿಂದ, ಇಂಡೇನ್‌ ಎಲ್‌ಪಿಜಿ ವಿತರಕರಿಂದ ಅಥವಾ ಕೆಲವು ಕಿರಾಣಿ ಅಂಗಡಿ ಗಳಿಂದ ಖರೀದಿಸಬಹುದು. ಒಂದು ಗುರುತಿನ ಚೀಟಿಯನ್ನು ಪುರಾವೆಯ ರೂಪದಲ್ಲಿ ನೀಡಿ, ಈ ಸಿಲಿಂಡರ್ ಪಡೆದುಕೊಳ್ಳಬಹುದು ಎಂದು ಇಂಡಿಯನ್ ಆಯಿಲ್‌ನ ಪ್ರಕಟಣೆ ತಿಳಿಸಿದೆ.

ಈ ಸಿಲಿಂಡರ್ ಪಡೆಯಲು ವಿಳಾಸ ದೃಢೀಕರಣದ ಅಗತ್ಯ ಇಲ್ಲ. ಒಂಟಿಯಾಗಿ ವಾಸಿಸುವ ಅಥವಾ ದೊಡ್ಡ ಕುಟುಂಬವನ್ನು ಹೊಂದಿಲ್ಲದ ಯುವ ವೃತ್ತಿಪರರಿಗೂ ಇದು ಉಪಯುಕ್ತವಾಗಲಿದೆ ಎಂದು ಕಂಪನಿ ಹೇಳಿದೆ.