News

ಪಿಎಂ ಕಿಸಾನ್ ಯೋಜನೆಯ 9ನೇ ಕಂತಿನ ಹಣ ಶೀಘ್ರ ಬಿಡುಗಡೆ ಸಾಧ್ಯತೆ-ಲಿಸ್ಟ್ ನಲ್ಲಿ ನಿಮ್ಮ ಹೆಸರು ಹೀಗೆ ಚೆಕ್ ಮಾಡಿ

01 August, 2021 8:35 PM IST By:

ಪಿಎಂ ಕಿಸಾನ್ ಯೋಜನೆಯ 9ನೇ ಕಂತಿನ ಹಣಕ್ಕಾಗಿ ಕಾಯುತ್ತಿರುವ ರೈತರಿಗೆ ಗುಡ್ ನ್ಯೂಸ್ . ಮೂಲಗಳ ಪ್ರಕಾರ ಇದೇ ತಿಂಗಳಲ್ಲಿ 9ನೇ ಕಂತಿನ ಹಣ ಬಿಡುಗಡೆಯಾಗುವ ಸಾಧ್ಯತೆಯಿದೆ. ಲಿಸ್ಟ್ ನಿಲ್ಲಿ ನಿಮ್ಮ ಹೆಸರು ಚೆಕ್ ಮಾಡಲು ಈಗ ಎಲ್ಲಿಯೂ ಹೋಗಬೇಕಿಲ್ಲ. ಮನೆಯಲ್ಲಿಯೇ ಕುಳಿತು ಕ್ಷಣಾರ್ಧದಲ್ಲಿ ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಬಹುದು. ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ಸಂಕ್ಷೀಪ್ತ ಮಾಹಿತಿ.

ನಿಮ್ಮ ಹೆಸರು ಇರುವುದನ್ನು ಚೆಕ್ ಮಾಡಲು ಹೀಗೆ ಮಾಡಿ.

https://pmkisan.gov.in/Rpt_BeneficiaryStatus_pub.aspx  ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. ನಿಮ್ಮ ರಾಜ್ಯ ಜಿಲ್ಲೆ ತಾಲೂಕು ಹಾಗೂ ಗ್ರಾಮವನ್ನು ಆಯ್ಕೆ ಮಾಡಿಕೊಂಡು ಹೊಸ beneficiary ಲಿಸ್ಟ್ ನಲ್ಲಿ ನಿಮ್ಮ ಹೆಸರು ಇರುವುದನ್ನು ಚೆಕ್ ಮಾಡಿ, ಇಲ್ಲಿ A to z ಕ್ರಮವಾಗಿ ಹೆಸರು ಇರುತ್ತದೆ. ನಿಮ್ಮ ಹೆಸರು ಯಾವ ಅಕ್ಷರದಿಂದ ಆರಂಭವಾಗುತ್ತದೆ ಎಂಬುದನ್ನು ನೋಡಿ ಕೆಳಗಡೆ ಕ್ಲಿಕಿ ಮಾಡಿದರೆ ಸಾಕು ಅಲ್ಲಿ ನಿಮ್ಮ ಹೆಸರು ಇರುವುದನ್ನು ನೋಡಿಕೊಳ್ಳಬಹುದು.

ಪಿಎಂ ಕಿಸಾನ್ ಸ್ಟೇಟಸ್ ಚೆಕ್ ಮಾಡು ಈ ಲಿಂಕ್ ಕ್ಲಿಕ್ ಮಾಡಿ. https://pmkisan.gov.in/beneficiarystatus.aspx ನಿಮ್ಮ ಮೊಬೈಲ್ ನಂಬರ್, ಅಧಾರ್ ಕಾರ್ಡ್ ಅಥವಾ ಅಕೌಂಟ್ ನಂಬರ್ ಈ ಮೂರರಲ್ಲಿ ಯಾವುದಾದರೊಂದನ್ನು ಆಯ್ಕೆ ಮಾಡಿಕೊಳ್ಳಬೇಕು. ಉದಾಹರಣೆಗೆ  ಮೊಬೈಲ್ ನಂಬರ್ ಆಯ್ಕೆ ಮಾಡಿಕೊಂಡರೆ ಅಲ್ಲಿ ನಿಮ್ಮ ಮೊಬೈಲ್ ನಂಬರ್ ನಮೂದಿಸಿದ ನಂತರ  ಗೋ ಡಾಟಾ ಮೇಲೆ ಕ್ಲಿಕ್ ಮಾಡಿದರೆ ಸಾಕು ಸ್ಟೇಟಸ್ ನೋಡಬಹುದು.

ಇಲ್ಲಿಯವರೆಗೆ ನಿಮ್ಮ ಖಾತೆಗೆ ಎಷ್ಟು ಕಂತಿನ ಹಣ ಜಮಯಾಗಿದೆ. ಯಾವ ದಿನಾಂಕದಂದು ಜಮೆಯಾಗಿದೆ. ಹಾಗೂ 9ನೇ ಕಂತಿನ ಸ್ಟೇಟಸ್ ಸಹ ತಿಳಿಯುತ್ತದೆ.

ಪಿಎಂ ಕಿಸಾನ್ ಯೋಜನೆಯಡಿ ನಿಮ್ಮ ಹೆಸರು ನೋಂದಾಯಿಸಿದ್ದರೆ ಕೂಡಲೇ ನೋಂದಾಯಿಸಿಕೊಳ್ಳಿ.

ಪಿಎಂ ನೋಂದಾಯಿಸುವುದು ಹೇಗೆ ?

ಪ್ರಧಾನಿ ಕಿಸಾನ್ ಸಮ್ಮಾನ್  ನಿಧಿ ಯೋಜನೆಗೆ ನೋಂದಣಿ ಪ್ರಕ್ರಿಯೆ ಸಾಕಷ್ಟು ಸುಲಭವಾಗಿದೆ. ನೋಂದಣಿ ಪಕ್ರಿಯೆ ಹೀಗಿದೆ : https://pmkisan.gov.in/RegistrationForm.aspx ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. ನಿಮ್ಮ  ಆಧಾರ್ ಸಂಖ್ಯೆಯನ್ನು ನಮೂದಿಸಿದ ನಂತರ ಕ್ಯಾಪ್ಚಾ ಕೋಡ್ ಬರೆದು  ರಾಜ್ಯ ಸೆಲೆಕ್ಟ್ ಮಾಡಿಕೊಂಡು ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಬೇಕು. ಬ್ಯಾಂಕ್ ಖಾತೆ ಮಾಹಿತಿ ಮತ್ತು ಕೃಷಿ ಮಾಹಿತಿಯನ್ನು ಭರ್ತಿ ಮಾಡಿದ ನಂತರ ಸೇವ್ ಕೊಳ್ಳಬೇಕು.

ಏನಾದರೂ ಸಮಸ್ಯೆಯುಂಟಾದರೆ ಟೋಲ್ ಫ್ರೀ ನಂಬರ್ : 18001155266, ಪಿಎಂ ಕಿಸಾನ್ ಹೆಲ್ಪ್ ಲೈನ್ ನಂಬರ್ : 155261, ಪಿಎಂ ಕಿಸಾನ್ ಲ್ಯಾಂಡಲೈನ್ ನಂಬರ್ : 011—23381092, 23382401, PM Kisan helpline: 0120-6025109, 011-24300606 ಅಥವಾ ಈ Email ID: pmkisan-ict@gov.in ಗೆ ಮೇಲ್ ಮಾಡಬಹುದು