News

weather report ಕರ್ನಾಟಕದ ಎರಡು ದಿನದ ಹವಾಮಾನ ವರದಿ ನೋಡಿ !

19 January, 2024 5:57 PM IST By: Hitesh
ಕರ್ನಾಟಕದ ವೆದರ್‌ ರಿಪೋರ್ಟ್‌ ನೋಡಿ

ಕೃಷಿ ಜಾಗರಣ ಕನ್ನಡ ಅಗ್ರಿನ್ಯೂಸ್‌ಗೆ ಸ್ವಾಗತ ಇಂದಿನ ಪ್ರಮುಖ ಸುದ್ದಿಗಳು ಈ ರೀತಿ ಇವೆ.

ಈಗ ಎಲ್ಲ ಕಡೆಯೂ ಶ್ರೀರಾಮನ ಜಪ ನಡೆದಿದೆ. ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ.

ಇದೇ ಸಂದರ್ಭದಲ್ಲಿ ಜನವರಿ 22ಕ್ಕೆ ಕೇಂದ್ರ ಸರ್ಕಾರವು ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಿದೆ.

ಗೃಹಜ್ಯೋತಿ ವಿದ್ಯುತ್‌ ಬಳಕೆ ಬಗ್ಗೆ ಸರ್ಕಾರ ಗುಡ್‌ನ್ಯೂಸ್‌ ಕೊಟ್ಟಿದೆ ಈ ಎಲ್ಲ ಸುದ್ದಿಗಳನ್ನು ನೋಡೋಣ ಮೊದಲಿಗೆ ಮುಖ್ಯಾಂಶಗಳು. 

1. ಫೆಬ್ರವರಿ 12ರಿಂದ 23ರ ವರೆಗೆ ರಾಜ್ಯ ಬಜೆಟ್‌ ಅಧಿವೇಶನ

2. ಜನವರಿ 28ರವರೆಗೆ ಲಾಲ್‌ಬಾಗ್‌ನಲ್ಲಿ 215ನೇ ಫಲಪುಷ್ಪ ಪ್ರದರ್ಶನ

3. ಗೃಹಜ್ಯೋತಿ ವಿದ್ಯುತ್‌ ಬಳಕೆ: ಸರ್ಕಾರದಿಂದ ಬಿಗ್‌ಅಪ್ಡೇಟ್ಸ್‌

4. ರಾಮಲಲ್ಲಾ ಪ್ರತಿಷ್ಠಾಪನೆ; ಜನವರಿ 22ಕ್ಕೆ ಸರ್ಕಾರಿ ರಜೆ!

5. ಜಗಜ್ಯೋತಿ ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕ

6. ರಾಜ್ಯದಲ್ಲಿ ಎರಡು ದಿನದ ಹವಾಮಾನ ವರದಿ

ಸುದ್ದಿಗಳ ವಿವರ ಈ ರೀತಿ ಇದೆ.

ಲಾಲ್‌ಬಾಗ್‌ನಲ್ಲಿ 215ನೇ ಫಲಪುಷ್ಪ ಪ್ರದರ್ಶನ

1. ಕರ್ನಾಟಕ ವಿಧಾನ ಮಂಡಲ ಬಜೆಟ್‌ ಅಧಿವೇಶನ ಫೆಬ್ರವರಿ 12 ರಿಂದ 23ರವರೆಗೆ  ನಡೆಯಲಿದೆ.

ಗುರುವಾರ ರಾಜ್ಯ ಸಚಿವ ಸಂಪುಟ ಸಭೆಯ ನಂತರ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ

ಎಚ್.ಕೆ.ಪಾಟೀಲ್ ಅವರು ಫೆಬ್ರವರಿಯಲ್ಲಿ ಬಜೆಟ್‌ ಅಧಿವೇಶನ ನಡೆಯಲಿದೆ ಎಂದಿದ್ದಾರೆ.
-----------------------
2. ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ತೋಟಗಾರಿಕೆ ಇಲಾಖೆಯ ವತಿಯಿಂದ ಜನವರಿ 18ರಿಂದ 28 ರವರೆಗೆ ಲಾಲ್‌ಬಾಗ್‌ನಲ್ಲಿ

215ನೇ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ. ಈ ಬಾರಿ ಫಲಪುಷ್ಪ ಪ್ರದರ್ಶನದಲ್ಲಿ  

ಬಸವಣ್ಣ ಮತ್ತು ವಚನ ಸಾಹಿತ್ಯದ ಅಂಶವನ್ನು ಒಳಗೊಂಡಿದ್ದು    ಗಾಜಿನ ಮನೆಯ ಒಳಗಡೆ ಹೂವುಗಳಲ್ಲಿ 12ನೇ ಶತಮಾನದ

“ಅನುಭವ ಮಂಟಪ” ಅರಳಿದೆ. ಫಲಪುಷ್ಪ ಪ್ರದರ್ಶನಕ್ಕೆ 32 ಲಕ್ಷ ಹೂವುಗಳನ್ನು ಬಳಕೆ

ಮಾಡಲಾಗಿದ್ದು, ರಾಜ್ಯ ಸರ್ಕಾರವು    2.85 ಕೋಟಿ ಅನುದಾನ ನೀಡಿದೆ.  
-----------------------
3. ರಾಜ್ಯ ಸರ್ಕಾರವು ಗೃಹಜ್ಯೋತಿ ಯೋಜನೆಗೆ ಸಂಬಂಧಿಸಿದಂತೆ ಸಿಹಿಸುದ್ದಿಯೊಂದನ್ನು ನೀಡಿದೆ.

ಗೃಹ ಜ್ಯೋತಿ ಯೋಜನೆ ಜಾರಿಯಲ್ಲಿ ಬಿಗ್‌ ಅಪ್ಡೇಟ್ಸ್‌ ನೀಡಿದೆ.

ಗೃಹಜ್ಯೋತಿ ಯೋಜನೆಯಡಿ ಬಳಸುವ ವಿದ್ಯುತ್‌ನ ಶೇಕಡ 10ರಷ್ಟು ಬದಲಿಗೆ 10ಯೂನಿಟ್ ರಿಯಾಯಿತಿಯ

ಮೊತ್ತವನ್ನು ರಾಜ್ಯ ಸರ್ಕಾರವೇ ಭರಿಸಲು ನಿರ್ಧರಿಸಲಾಗಿದೆ.   
-----------------------
4. ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಜನವರಿ 22ರಂದು ರಾಮಲಲ್ಲಾ ಪ್ರತಿಷ್ಠಾನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ

ಎಲ್ಲ ಕಚೇರಿಗಳಿಗೆ ಅರ್ಧ ದಿನ ರಜೆ ನೀಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಕೇಂದ್ರ ಕೈಗಾರಿಕಾ

ನಿಯಮದ ಅನುಸಾರ ದೇಶದಾದ್ಯಂತ ಎಲ್ಲ ಕೇಂದ್ರ ಸರ್ಕಾರಿ ಕಚೇರಿಗಳಿಗೂ

ಈ ರಜೆ ಅನ್ವಯವಾಗಲಿದೆ ಎಂದು ಕೇಂದ್ರ ಸಿಬ್ಬಂದಿ ಸಚಿವಾಲಯ ತಿಳಿಸಿದೆ.
 ----------------------- 

5. ಜಗಜ್ಯೋತಿ ಬಸವಣ್ಣಅವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕರೆಂದು ರಾಜ್ಯ ಸರ್ಕಾರ ಘೋಷಿಸಿದೆ.

ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ.  
-----------------------
6. ರಾಜ್ಯದ ಬಹುತೇಕ ಪ್ರದೇಶದಲ್ಲಿ ಸಾಮಾನ್ಯ ವಾತಾವರಣ ಇದೆ. ಕಳೆದ 24 ಗಂಟೆಯ ಅವಧಿಯಲ್ಲಿ ರಾಜ್ಯದಲ್ಲಿ ಬಹುತೇಕ ಒಣಹವೆ ಇತ್ತು.

ಶನಿವಾರ ಹಾಗೂ ಭಾನುವಾರವೂ ರಾಜ್ಯದಲ್ಲಿ ಬಹುತೇಕ ಒಣಹವೆ ಮುಂದುವರಿಯಲಿದೆ ಎಂದು

ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನು ಗುರುವಾರ ರಾಜ್ಯದಲ್ಲಿ ಅತೀ ಕಡಿಮೆ ಚಳಿ

ವಾತಾವರಣ 12.2 ಡಿಗ್ರಿ ಸೆಲ್ಸಿಯಸ್‌ ವಿಜಯಪುರದಲ್ಲಿ ದಾಖಲಾಗಿತ್ತು. ಮುಂದಿನ 2 ದಿನಗಳ ಅವಧಿಯಲ್ಲೂ ಬಹುತೇಕ ಒಣಹವೆ

ಮುಂದುವರಿಯಲಿದ್ದು, ಚಳಿ ಇರಲಿದೆ. ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ

ಇರಲಿದ್ದು, ಬೆಳಗಿನ ಜಾವ ದಟ್ಟ ಮಂಜು ಆವರಿಸಿರಲಿದೆ. ಗರಿಷ್ಠ ಉಷ್ಣಾಂಶವು 30 ಡಿಗ್ರಿ ಸೆಲ್ಸಿಯಸ್‌

ಹಾಗೂ ಕನಿಷ್ಠ ಉಷ್ಣಾಂಶವು 17 ಡಿಗ್ರಿ ಸೆಲ್ಸಿಯಸ್‌ ಇರಲಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.