News

ಮೊಬೈಲಿನಲ್ಲಿಯೇ ಪಿಎಂ ಕಿಸಾನ್ ಸ್ಟೇಟಸ್ ಚೆಕ್ ಮಾಡಿ

10 April, 2021 10:08 AM IST By:
PM Kisan scheme

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (Pradhana mantra kisan samman scheme) ಯೋಜನೆಯ 7 ನೇ ಕಂತಿನ ಹಣ ಈಗಾಗಲೇ ರೈತರ ಖಾತೆಗೆ ಜಮೆಯಾಗಿದೆ. ಈ ಯೋಜನೆಯಡಿ 10 ಕೋಟಿಗೂ ಹೆಚ್ಚು ರೈತರು ಈಗಾಗಲೇ ನೋಂದಣಿ ಮಾಡಿಸಿಕೊಂಡು ಲಾಭ ಪಡೆಯುತ್ತಿದ್ದಾರೆ. ಆದರೆ ನಿಮ್ಮ ಖಾತೆಗೆ ಹಣ ಜಮೆಯಾಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಬ್ಯಾಂಕಿಗೆ ಹೋಗಬೇಕಿಲ್ಲ. ಮನೆಯಲ್ಲಿಯೇ ಕುಳಿತು ಮೊಬೈಲಿನಲ್ಲಿಯೇ ಚೆಕ್ ಮಾಡಿಕೊಳ್ಳಬಹುದು. ಇಲ್ಲಿದೆ ಮಾಹಿತಿ.

ಈ ಮುಂದಿ ಲಿಂಕ್ ಕ್ಲಿಕ್ ಮಾಡಿ ನಿಮ್ಮ ಸ್ಟೇಟಸ್ ತಿಳಿದುಕೊಳ್ಳಬಹುದು. https://pmkisan.gov.in/beneficiarystatus.aspx  ಅಥವಾ ಗೂಗಲ್ ನಲ್ಲಿ pm kisan status ಅಂತ ಟೈಪ್ ಮಾಡಿ Beneficiary status-pm kisan ಮೇಲೆ ಕ್ಲಿಕ್ ಮಾಡಿ ನಿಮ್ಮ ಆಧಾರ್ ನಂಬರ್, ಅಥವಾ ಬ್ಯಾಂಕ್ ಅಕೌಂಟ್ ಅಥವಾ ಮೊಬೈಲ್ ನಂಬರ್ ಈ ಮೂರರಲ್ಲಿ ಯಾವುದಾದರೊಂದನ್ನು ಆಯ್ಕೆ ಮಾಡಿಕೊಳ್ಳಬೇಕು.

ಉದಾಹರಣೆ ಮೊಬೈಲ್ ನಂಬರ್ ಆಯ್ಕೆ ಮಾಡಿಕೊಂಡರೆ ನಿಮ್ಮ ಮೊಬೈಲ್ ನಂಬರ್ ಟೈಪ್ ಮಾಡಿ ಗೆಟ್ ಡಾಟಾ ಮೇಲೆ ಕ್ಲಿಕ್ ಮಾಡಿದರೆ ಸಾಕು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಎಷ್ಟು ಕಂತಿನ ಹಣ ಜಮೆಯಾಗಿದೆ. ಡಿಸೆಂಬರ್ ತಿಂಗಳ 7ನೇ ಕಂತಿನ ಹಣದ ಸ್ಟೇಟಸ್ ಕ್ಷಣಾರ್ಧದಲ್ಲಿ ತಿಳಿದುಕೊಳ್ಳಬಹುದು.

ಇದನ್ನೂ ಓದಿ: PM KISSAN ಯೋಜನೆಯ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯೇ..ಚೆಕ್ ಮಾಡಿ

ಕೇಂದ್ರ ಸರ್ಕಾರ ವಾರ್ಷಿಕವಾಗಿ  ಘೋಷಿಸಿದ  ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ 6,000 ರೂಪಾಯಿ ಸಹಾಯ ಧನ ನಿಮ್ಮ ಖಾತೆಯಲ್ಲಿ ಜಮಾವಾಗಿದೆಯೇ ಎಂಬುದನ್ನು ನೋಡಿಕೊಳ್ಳಲು ಬ್ಯಾಂಕಿಗೆ ಹೋಗುವ ಅವಶ್ಯಕತೆಯಿಲ್ಲ. ನೋಂದಣಿ ಮಾಡಿಸಿಕೊಂಡ ರೈತರು ಇನ್ನುಮುಂದೆ ಮನೆಯಲ್ಲಿಯೇ ಕುಳಿತು ನೋಡಿಕೊಳ್ಳಬಹುದು.

 ಅಕೌಂಟಿಗೆ ಹಣ ಜಮೆಯಾಗದಿದ್ದರೆ ಅಕೌಂಟಿಗೆ ಜಮೆಯಾಗಲು ಯಾವ ಸ್ಥಿತಿಯಲ್ಲಿದೆ ಎಂಬುದನ್ನು ಮೇಲಿನ ಲಿಂಕ್ ಮೂಲಕ ಪರಿಶೀಲಿಸಬಹುದು.

ಒಂದು ವೇಳೆ ನಿಮ್ಮ ಖಾತೆಗೆ ಹಣ ಜಮೆಯಾಗದಿದ್ದರೆ ಈ ಕೆಳಗೆ ಸಹಾಯವಾಣಿ ನಂಬರಿಗೆ ಸಂಪರ್ಕಿಸಿ

ಟೋಲ್ ಫ್ರೀ ನಂಬರ್ : 18001155266, ಪಿಎಂ ಕಿಸಾನ್ ಹೆಲ್ಪ್ ಲೈನ್ ನಂಬರ್ : 155261, ಪಿಎಂ ಕಿಸಾನ್ ಲ್ಯಾಂಡಲೈನ್ ನಂಬರ್ : 011—23381092, 23382401, PM Kisan helpline: 0120-6025109, 011-24300606 ಅಥವಾ ಈ Email ID: pmkisan-ict@gov.in ಗೆ ಮೇಲ್ ಮಾಡಬಹುದು.