ಇತ್ತೀಚೆಗೆ ಟ್ರ್ಯಾಕ್ಟರ್ ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರೈತರ ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು ಸಣ್ಣ ರೈತರೂ ಖರೀದಿಸುವ ಯೋಗ್ಯದರಲ್ಲಿ ಟ್ರ್ಯಾಕ್ಟರ್ ಗಳು ಮಾರುಕಟ್ಟೆಗೆ ಬರುತ್ತಿವೆ. ಕಡಿಮೆ ಬಜೆಟ್ನಲ್ಲಿ ಬಳಕೆಯಾಗುವ ಸಣ್ಣ ಟ್ರ್ಯಾಕ್ಟರ್ ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಹೌದು ಸಣ್ಣ ರೈತರು ಸಹ ಟ್ರ್ಯಾಕ್ಟರ್ ಖರೀದಿಸಲು ಸಾಧ್ಯವಾಗುವಂತಹ ದರದಲ್ಲಿ ಮಹೀಂದ್ರಾ ಮತ್ತು ಸ್ವರಾಜ್ ಟ್ರ್ಯಾಕ್ಟರ್ ಗಳು ಮಾರುಕಟ್ಟೆಯಲ್ಲಿ ಬಂದಿವೆ. ಇಂತಹ ಟ್ರ್ಯಾಕ್ಟರಗಳು ರೈತಾಪಿ ವರ್ಗದವರ ಮನಗೆದ್ದಿವೆ.
ಮಹೀಂದ್ರಾ ಯುವರಾಜ 215 NXT:
ಈ ಮಿನಿ ಟ್ರ್ಯಾಕ್ಟರ್ ಎಲ್ಲಾ ರೀತಿಯ ಕೃಷಿ ಕೆಲಸಗಳನ್ನು ಸುಲಭಗೊಳಿಸುತ್ತದೆ.. ಇದರ ಬೆಲೆ 2.50 ರಿಂದ 2.75 ಲಕ್ಷ.. ಡಬಲ್ ಸಿಲಿಂಡರ್ ಕೂಲ್ ವರ್ಟಿಕಲ್ ಎಂಜಿನ್ ಹೊಂದಿದೆ 15 ಹೆಚ್.ಪಿ,ಯುಳ್ಳದ್ದಾಗಿದೆ
ಸ್ವರಾಜ್ 717 :
ಈ ಕೈಗೆಟುಕುವ ಮಿನಿ ಟ್ರ್ಯಾಕ್ಟರ್ ವಿಶ್ವಾಸಾರ್ಹ, ಬಳಸಲು ಸುಲಭಮತ್ತು 15 HP 2300 rpm ನೊಂದಿಗೆ ಬರುತ್ತದೆ. 780 ಕೆಜಿ ಲಿಫ್ಟ್ ಸಾಮರ್ಥ್ಯ ಮತ್ತು ವೀಲ್ ಡ್ರೈವ್ 2WD ಹೊಂದಿರುವ ಸ್ವರಾಜ್ 717 ಟ್ರ್ಯಾಕ್ಟರ್ ನ ಅತ್ಯುತ್ತಮ ವೈಶಿಷ್ಟ್ಯವೆಂದರೆ ಡ್ರೈ ಡಿಸ್ಕ್ ಬ್ರೇಕ್ ಗಳು. ಇದು 6 ಫಾರ್ವರ್ಡ್ + 3 ರಿವರ್ಸ್ ಗೇರ್ ಬಾಕ್ಸ್ ನಂತೆ ಕೆಲಸ ಮಾಡಲು ಸುಲಭವಾದ ಗೇರ್ ಶಿಫ್ಟ್ ಹೊಂದಿದೆ. ಮಿನಿ ಟ್ರ್ಯಾಕ್ಟರ್ ವಿಭಾಗದಲ್ಲಿ ಕೈಗೆಟುಕುವ ಬೆಲೆ ಅಂದರೆ 2.60 ರಿಂದ 2.85 ಲಕ್ಷ ರೂಪಾಯಿಯಲ್ಲಿ ತಯಾರಾಗಿದೆ.