News

ಅಲ್ಲಿ ರಾಮನ ಜಪ; ಇಲ್ಲಿ ಎಲ್ಲ ದೇವಾಲಯಗಳಲ್ಲಿ ವಿಶೇಷ ಪೂಜೆ!

08 January, 2024 2:16 PM IST By: Hitesh
ಕರ್ನಾಟಕದ ಎಲ್ಲ ದೇವಾಲಯಗಳಲ್ಲಿ ವಿಶೇಷ ಪೂಜೆ

ಕೃಷಿ ಜಾಗರಣ ಕನ್ನಡವು ರೈತರಿಗೆ ಪ್ರಮುಖ ಸುದ್ದಿಗಳನ್ನು ತಲುಪಿಸುವ ಉದ್ದೇಶದಿಂದ ಹಲವು ವಿನೂತನ ಪ್ರಯತ್ನವನ್ನು ಮಾಡುತ್ತಿದೆ.

ಇದಕ್ಕಾಗಿ ಕೃಷಿ ಜಾಗರಣ ಕನ್ನಡ ಯೂಟ್ಯೂಬ್‌ ಚಾನಲ್‌ನ ಮೂಲಕ ಸುದ್ದಿಗಳನ್ನು ಪ್ರಸಾರ ಮಾಡುತ್ತಿದೆ.  

ಇನ್ನು ರಾಜ್ಯದಲ್ಲಿ ಸಿರಿಧಾನ್ಯಗಳ ಉತ್ಪಾದನೆ ಹಾಗೂ ಉತ್ತೇಜನಕ್ಕೆ ಸರ್ಕಾರ ಮುಂದಾಗಿದ್ದು, ಇನ್ಮುಂದೆ ರೇಷನ್‌ ಕಾರ್ಡ್‌ನಲ್ಲೂ

ಸಿರಿಧಾನ್ಯ ನೀಡಲು ಚಿಂತನೆ ನಡೆದಿದೆ. ಎಲ್ಲ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಸಲು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.

ಉತ್ತರ ಭಾರತದಲ್ಲಿ ಮೈಕೊರೆಯುವ ಚಳಿ ಇದ್ದು, ಆರೆಂಜ್‌ ಅಲರ್ಟ್‌ ನೀಡಲಾಗಿದೆ.

ಈ ಎಲ್ಲ ಸುದ್ದಿಗಳನ್ನು ನೋಡೋಣ ಮೊದಲಿಗೆ ಮುಖ್ಯಾಂಶಗಳು. 

ಧಾನ್ಯಗಳ ಉತ್ಪಾದನೆಯಲ್ಲಿ ಶೀಘ್ರ ಭಾರತ ಸ್ವಾವಲಂಬಿ: ಕೇಂದ್ರ ಕೃಷಿ ಕಲ್ಯಾಣ ಸಚಿವ ಅರ್ಜುನ್ ಮುಂಡ
2. ಮಿಲಿಯನೇರ್‌ ಫಾರ್ಮರ್‌ ಆಫ್‌ ಇಂಡಿಯಾ 2024ರಲ್ಲಿ ಭಾಗವಹಿಸಲು ಕೀನ್ಯಾ ಉತ್ಸುಕ
3. ರೇಷನ್‌ ಕಾರ್ಡ್‌ನಲ್ಲೂ ಇನ್ಮುಂದೆ ಸಿರಿಧಾನ್ಯ
4. ಉತ್ತರ ಭಾರತದಲ್ಲಿ ಮೈಕೊರೆವ ಚಳಿ: ಆರೆಂಜ್‌ ಅರ್ಲಟ್‌ ಘೋಷಣೆ
5. ರಾಷ್ಟ್ರೀಯ ಪಿಎಸಿಎಸ್ ಸಮಾವೇಶ ಇಂದು
6. ರಾಜ್ಯದ ಎಲ್ಲ ದೇವಾಲಯಗಳಲ್ಲಿ ವಿಶೇಷ ಪೂಜೆ: ಸರ್ಕಾರ

 ಸುದ್ದಿಗಳ ವಿವರ ಈ ರೀತಿ ಇದೆ.

1. ಭಾರತವನ್ನು ದ್ವಿದಳ ಧಾನ್ಯಗಳ ಉತ್ಪಾದನೆಯಲ್ಲಿ   ಸ್ವಾವಲಂಬಿಯಾಗಿ ಮಾಡಲು ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.

ಈಗಾಗಲೇ ತೊಗರಿ ಬೆಳೆ ಉತ್ಪಾದನೆಯಲ್ಲಿ ಸ್ವಾವಲಂಬನೆಯಾಗುತ್ತಿದ್ದೇವೆ ಎಂದು ಕೇಂದ್ರ ಕೃಷಿ ಕಲ್ಯಾಣ ಸಚಿವ ಅರ್ಜುನ್ ಮುಂಡ ತಿಳಿಸಿದ್ದಾರೆ.

 ಬೆಂಗಳೂರಿನಲ್ಲಿ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಗೆ ಭೇಟಿ ನೀಡಿ ರೈತರೊಂದಿಗೆ ಸಂವಾದ ನಡೆಸಿದರು.

ತೋಟಗಾರಿಕೆ ಬೆಳೆಗಳು ಹಾಗೂ ಫಲಪುಷ್ಪ ಉತ್ಪಾದನೆಯಲ್ಲಿ ಭಾರತವನ್ನು ಸ್ವಾವಲಂಬಿಯತ್ತ ಸಾಗುತ್ತಿದೆ ಎಂದರು.    
-------------------------- 

2. ದೇಶದಲ್ಲಿ ರೈತರನ್ನು ಗುರುತಿಸಿ ಗೌರವಿಸುವ ವಿನೂತನ ಪ್ರಯತ್ನವನ್ನು ಕೃಷಿ ಜಾಗರಣ ಮಾಡುತ್ತಿದ್ದು, ಇದಕ್ಕೆ

ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈಗಾಗಲೇ ಕೃಷಿ ಜಾಗರಣವು ಮಿಲಿಯನೇರ್‌ ಫಾರ್ಮರ್‌ ಆಫ್‌ ಇಂಡಿಯಾ-2023 ಅನ್ನು

ಯಶಸ್ವಿಯಾಗಿ ಪೂರೈಸಿದ್ದು, ಇದೀಗ ಮಿಲಿಯನೇರ್‌ ಫಾರ್ಮರ್‌ ಆಫ್‌ ಇಂಡಿಯಾ -2024ಕ್ಕೆ ಭರದ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಇದೀಗ ಎಂಎಫ್‌ಓಐಗೆ ದೇಶ ವಿದೇಶದಿಂದಲೂ ಮೆಚ್ಚುಗೆ ಹಾಗೂ ಬೆಂಬಲ ವ್ಯಕ್ತವಾಗಿದೆ.

ಕೃಷಿ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ತಜ್ಞರನ್ನು ಕೃಷಿ ಜಾಗರಣಕ್ಕೆ ಆಹ್ವಾನಿಸಿ ಕೃಷಿ ಕುರಿತು ಚರ್ಚಿಸಲಾಗುತ್ತದೆ.

ಆದಾಗ್ಯೂ, ಸೋಮವಾರ, ಕೃಷಿ ಜಾಗರಣದ ಚೌಪಾಲ್ಗೆ Mr. Isaac Mainye Mariera,Director, Environment County Government, Ministry of Agriculture, Republic of Kenya  ಬಂದಿದ್ದರು.

ಕೃಷಿ ಜಾಗರಣ ಸಂಸ್ಥೆಯ ಸಂಸ್ಥಾಪಕ ಹಾಗೂ ಪ್ರಧಾನ ಸಂಪಾದಕ ಎಂ.ಸಿ.ಡೊಮಿನಿಕ್ ಅವರನ್ನು ಸ್ವಾಗತಿಸಿದರು.

ಅಗ್ರಿಕಲ್ಚರ್ ಬಗ್ಗೆ ಮ್ಮ ಅಮೂಲ್ಯವಾದ  ಸಲಹೆ ಮತ್ತು ಅನುಭವವನ್ನು ಕೃಷಿ ಜಾಗರಣದೊದಿಗೆ ಹಂಚಿಕೊಂಡರು.

ಕೀನ್ಯಾವು ಸಹ ಕೃಷಿ ಮಾಹಿತಿ ಹಾಗೂ ಕೃಷಿ ಪದ್ಧತಿಗಳನ್ನು ಭಾರತದಿಂದ ತಿಳಿಯಲು ಉತ್ಸುಕವಾಗಿದೆ.

ಇದೇ ಸಂದರ್ಭದಲ್ಲಿ ಕೃಷಿ ಜಾಗರಣ ಆಯೋಜಿಸುತ್ತಿರುವ ಮಿಲಿಯನೇರ್‌ ಫಾರ್ಮರ್‌ ಆಫ್‌ ಇಂಡಿಯಾ

2024ರಲ್ಲಿ ಭಾಗವಹಿಸಲು ಹರ್ಷವಾಗುತ್ತಿದೆ ಎಂದಿದ್ದಾರೆ.  
--------------------------

3. ರಾಜ್ಯದಲ್ಲಿ ಸಿರಿಧಾನ್ಯ ಉತ್ಪಾದನೆ ಹಾಗೂ ಮಾರಾಟಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.

ಸಿರಿಧಾನ್ಯಗಳನ್ನು ಪರ್ಯಾಯ ಬೆಳೆಯಾಗಿ ರೈತರು ಬರಗಾಲದಲ್ಲಿಯೂ ಬೆಳೆಯಬಹುದಾಗಿದೆ ಎಂದು ಕೃಷಿ ಖಾತೆ ಸಚಿವ ಚೆಲುವರಾಯಸ್ವಾಮಿ ತಿಳಿಸಿದ್ದಾರೆ.

ರಾಜ್ಯದಲ್ಲಿ ರೈತರ ಆದಾಯ ದ್ವಿಗುಣಗೊಳಿಸಲು ಯೋಜನೆ ರೂಪಿಸಲಾಗುತ್ತಿದೆ.

ಇಂದಿರಾ ಕ್ಯಾಂಟಿನ್, ಶಾಲಾ ಮಕ್ಕಳ ಬಿಸಿಯೂಟ, ಅಂಗನವಾಡಿ ಹಾಗೂ ಪಡಿತರದಲ್ಲಿಯೂ ಸಿರಿಧಾನ್ಯ ನೀಡಲು ಸಿದ್ಧತೆ ನಡೆದಿದೆ ಎಂದಿದ್ದಾರೆ.
-------------------------- 

4. ಉತ್ತರ ಭಾರತದಲ್ಲಿ ಮೈಕೊರೆವ ಚಳಿ ಮುಂದುವರಿದಿದೆ. ಉತ್ತರ ಭಾರತದ ಪಂಜಾಬ್, ಹರಿಯಾಣ, ದೆಹಲಿ,

ಉತ್ತರಪ್ರದೇಶ ಹಾಗೂ ಬಿಹಾರದಲ್ಲಿ ಇನ್ನು ಎರಡು ದಿನಗಳ ಕಾಲ ತೀವ್ರ ಚಳಿ ಮುಂದುವರಿಯಲಿದೆ.

ಹೀಗಾಗಿ, ಈ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಭಾರತೀಯ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ.

ಇನ್ನು ತಮಿಳುನಾಡು, ಆಂಧ್ರಪ್ರದೇಶ, ಕೇರಳ ಹಾಗೂ ಲಕ್ಷದ್ವೀಪ ದಲ್ಲಿ ಮುಂದಿನ ನಾಲ್ಕರಿಂದ ಐದು ದಿನ

ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.
--------------------------
5.  ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೋಮವಾರ  ನವದೆಹಲಿಯ ವಿಜ್ಞಾನ ಭವನದಲ್ಲಿ

“ಪ್ರಾಥಮಿಕ ಕೃಷಿ ಪತ್ತಿನ ಸಂಘಗಳು ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರ” ಕುರಿತು ಆಯೋಜಿಸಲಾಗಿರುವ

“ರಾಷ್ಟ್ರೀಯ ಪಿಎಸಿಎಸ್ ಸಮಾವೇಶ”ದಲ್ಲಿ ಭಾಗವಹಿಸಲಿದ್ದು, ಇದರ ಅಧ್ಯಕ್ಷತೆ  ವಹಿಸಲಿದ್ದಾರೆ.
--------------------------
6.  ಉತ್ತರ ಪ್ರದೇಶದ ಅಯೋಧ್ಯೆಯ ರಾಮಮಂದಿರದಲ್ಲಿ ಜನವರಿ 22ರಂದು ಶ್ರೀರಾಮನ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ.

ಈ ಹಿನ್ನೆಲೆಯಲ್ಲಿ ರಾಜ್ಯದ ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ಎಲ್ಲಾ  ದೇವಸ್ಥಾನಗಳಲ್ಲಿ ವಿಶೇಷ ಪೂಜೆ,

ಪ್ರಾರ್ಥನೆ ನಡೆಸುವಂತೆ ಸರ್ಕಾರ ಸೂಚನೆ ನೀಡಿದೆ.

7. ಕರ್ನಾಟಕದಲ್ಲಿ ನೀರಿನ ಸಮಸ್ಯೆ ಹೆಚ್ಚಳವಾಗಲಿದೆ. ಹೀಗಾಗಿ, ನೀರು ಸಂರಕ್ಷಣೆಗೆ ಜನ ಎಚ್ಚೆತ್ತುಕೊಳ್ಳಬೇಕು

ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಕೃಷ್ಣ ಮೇಲ್ದಂಡೆ ಪ್ರದೇಶಕ್ಕೆ ಭೇಟಿ ನೀಡಿ ಅವರು ಮಾತನಾಡಿದರು.

ನೀರಿನ ಸಂರಕ್ಷಣೆ ಮಾಡುವುದಕ್ಕೆ ಎಲ್ಲ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೈ ಜೋಡಿಸಬೇಕು ಎಂದಿದ್ದಾರೆ.

--------------------------
8. ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತದ ಬಗ್ಗೆ ಅಪಮಾನಕರ ಮಾತನಾಡಿದ ಮಾಲ್ಡೀವ್ಸ್‌ನ ಉಪ ಸಚಿವರಾದ

ಮರಿಯಮ್ ಶಿವ್ನಾ, ಅಬ್ದುಲ್ ಎಂ ಮಾಜಿದ್ ಹಾಗೂ ಮಾಲ್ಯಾ ಶರೀಫ್ ಅವರನ್ನು ಮಾಲ್ಡೀವ್ಸ್‌ ಸರ್ಕಾರ ಅಮಾನತು ಮಾಡಿದೆ.

--------------------------  
9. ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು ನೀಡುವ ನಿಟ್ಟಿನಲ್ಲಿ ಮನೆ ಮನೆಗೆ ಗಂಗೆ ಯೋಜನೆಯನ್ನು ಅನುಷ್ಠಾನ ಮಾಡಲಾಗಿದೆ.

ಈ ಯೋಜನೆಯ ಅಡಿಯಲ್ಲಿ 64 ಸಾವಿರ ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ ಎಂದು

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.