ಪಶ್ಚಿಮ ಆಸ್ಟ್ರೇಲಿಯಾದ ಗ್ರೀನ್ ಹೆಡ್ ಪಟ್ಟಣದ ಕರಾವಳಿಯಲ್ಲಿ ನಿಗೂಢ ವಸ್ತುವೊಂದು ಪತ್ತೆಯಾಗಿ ಸಂಚಲನ ಮೂಡಿಸಿದೆ.
ತಾಮ್ರದಿಂದ ಮಾಡಲ್ಪಟ್ಟ ಡೋಲು ಆಕಾರದ ವಸ್ತು ಕಂಡು ಬಂದಿದ್ದರಿಂದ ಇದು ಏನು ಎಂದು ಸ್ಥಳೀಯರು ಸಾಕಷ್ಟು ಚರ್ಚಿಸುತ್ತಿದ್ದಾರೆ.
ಇತ್ತೀಚೆಗಷ್ಟೇ ಭಾರತದ ಚಂದ್ರಯಾನ-3 ಯಶಸ್ವಿಯಾಗಿ ಉಡಾವಣೆಯಾಗಿದೆ. ಇದು ಆಸ್ಟ್ರೇಲಿಯಾದ ವಾಯು ಮಾರ್ಗದಲ್ಲಿ ಹಾರಾಟ ನಡೆಸಿದ್ದು, ಆ ರಾಕೆಟ್‌ನಿಂದ ತುಂಡಾಗಿ ಬಿದ್ದ ಚೂರು ಇರಬಹುದು ಎಂಬ ಚರ್ಚೆ ಅಲ್ಲಲ್ಲಿ ಶುರುವಾಗಿದೆ. ಆದರೆ ಸ್ಥಳೀಯ ಅಧಿಕಾರಿಗಳು ಈ ವಸ್ತುವಿನಿಂದ ದೂರ ಉಳಿಯುವಂತೆ ಸ್ಥಳೀಯರಿಗೆ ಎಚ್ಚರಿಕೆ ನೀಡಿದ್ದಾರೆ.
ಆದರೆ ಅದೃಶ್ಯ ವಸ್ತು ಯಾವುದು? ಎಲ್ಲಿಂದ ಬಂತು? ಇದನ್ನು ಕಂಡುಹಿಡಿಯಲು ಆಸ್ಟ್ರೇಲಿಯಾದ ಬಾಹ್ಯಾಕಾಶ ಸಂಸ್ಥೆ ಮುಂದಾಗಿದೆ. ಪ್ರಾಥಮಿಕವಾಗಿ ಇದು ಬಾಹ್ಯಾಕಾಶ ಉಡಾವಣೆಗೆ ಸಂಬಂಧಿಸಿದ ವಸ್ತು ಎಂದು ಅಂದಾಜಿಸಲಾಗಿದೆ. ಮೇಲಾಗಿ ಈ ನಿಟ್ಟಿನಲ್ಲಿ ಹಲವು ದೇಶಗಳೊಂದಿಗೆ ವಿಜ್ಞಾನಿಗಳು ಸಮಾಲೋಚನೆ ನಡೆಸುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವರದಿಗಳಾಗಿವೆ.
ಚಂದ್ರಯಾನ-3 ಆಗಸ್ಟ್ 23 ರಂದು ಚಂದ್ರನ ಮೇಲೆ ಇಳಿಯಲಿದೆ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಪುಕಾರ, ಚಂದ್ರಯಾನ-3 ರ 'ಸಾಫ್ಟ್ ಲ್ಯಾಂಡಿಂಗ್' ಅನ್ನು ಆಗಸ್ಟ್ 23 ರಂದು ಸಂಜೆ 5.47 ಕ್ಕೆ ಮಾಡಲು ಯೋಜಿಸಲಾಗಿದೆ.
ಗಮನಾರ್ಹ ಅಂಶವೆಂದರೆ ಜುಲೈ 14 ರಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ LVM3-M4 ರಾಕೆಟ್ ಮೂಲಕ 'ಚಂದ್ರಯಾನ-3' ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿತು. ಜುಲೈ 14 ರಂದು ಮಧ್ಯಾಹ್ನ 2.35 ಕ್ಕೆ ಉಡಾವಣೆಯಾದ 17 ನಿಮಿಷಗಳ ನಂತರ ಉಪಗ್ರಹವನ್ನು ನಿಗದಿತ ಕಕ್ಷೆಗೆ ಸೇರಿಸಲಾಗಿದೆ.