News

ಜುಲೈನಲ್ಲಿ ನಡೆಯಬೇಕಿದ್ದ ಸಿಇಟಿ ಪರೀಕ್ಷೆ ಮುಂದೂಡಿಕೆ0 ಹೊಸ ದಿನಾಂಕ ಪ್ರಕಟ

12 May, 2021 7:26 PM IST By:

ಪ್ರಸಕ್ತ ಸಾಲಿನ ದ್ವಿತೀಯ ಪಿಯು ಪರೀಕ್ಷೆಗಳನ್ನು ಸರ್ಕಾರ ಕೋವಿಡ್ ಕಾರಣದಿಂದ ಮುಂದೂಡಿದ್ದರಿಂದ, ಸಿಇಟಿ 2021 ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ. ಜುಲೈ 7 ಮತ್ತು ಜುಲೈ  ರಂದು ನಿಗದಿಯಾಗಿದ್ದ 2021 ನೇ ಸಾಲಿನ ಪ್ರವೇಶ ಪರೀಕ್ಷೆಯನ್ನು ಮತ್ತು ಜುಲೈ 9 ರಂದು ನಡೆಯಬೇಕಿದ್ದ ಕನ್ನಡ ಭಾಷಾ ಪರೀಕ್ಷೆಯನ್ನು ಮುಂದೂಡಲಾಗಿದೆ.

ಕೊರೊನ್ ಸೋಂಕು ಅಧಿಕವಾಗುತ್ತಿದ್ದು ಸಾವಿನ ಪ್ರಕರಣಗಳು ಕೂಡ ಸಂಭವಿಸುತ್ತಿವೆ. ಕೊರೊನ್ ಸೋಂಕಿಗೆ ಸಿಕ್ಕು ಎಲ್ಲರೂ ನಲುಗಿ ಹೋಗಿದ್ದಾರೆ. ಈಗಾಗಲೇ 2021ನೇ ಸಾಲಿನ ವಾರ್ಷಿಕ ದ್ವೀತಿಯ ಪಿಯು ಪರೀಕ್ಷೆಯನ್ನು ಮುಂದೂಡಲಾಗಿತ್ತು, ಕೊರೊನ್ ಪ್ರಕರಣಗಳು ಹೆಚ್ಚಾಗುತ್ತಿದ್ದು ಇದರ ಬೆನ್ನಲ್ಲೇ ಸಿಇಟಿ ಪರೀಕ್ಷಾ ದಿನಾಂಕವನ್ನು ಮುಂದೂಡಿದ್ದು, ದಿನಾಂಕವನ್ನು ಮರು ನಿಗದಿಮಾಡಲಾಗಿದೆ.

ಪ್ರಸ್ತುತ ಸಿಇಟಿ -2021 ಅನ್ನು ದಿನಾಂಕ 28-08-2021 ಮತ್ತು 29-08-2021 ರಂದು ಮತ್ತು ಕನ್ನಡ ಭಾಷಾ ಪರೀಕ್ಷೆಯನ್ನು ದಿನಾಂಕ 30-08-2021 ರಂದು ನಡೆಸಲಾಗುವುದು ಹಾಗು ಸದ್ಯದಲ್ಲಿಯೇ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.

ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಕೊರೊನ್ ಸೋಂಕು ಹೆಚ್ಚಾಗುತ್ತಿದೆ. ಈ ಕಾರಣದಿಂದ ಜುಲೈ 7ರಂದು ನಡೆಯ ಬೇಕಿದ್ದ ಸಿಇಟಿ ಪರೀಕ್ಷೆಗಳನ್ನು ಮರುನಿಗದಿಪಡಿಸಿ ಅಗಸ್ಟ್ 28, 29, 30ರಂದು ನಡೆಸಲಾಗುವುದು.

ಸಿಇಟಿ ಪರೀಕ್ಷೆಗಳು ಕೆಳಗಿನಂತಿವೆ

*ಅಗಸ್ಟ್ 28 - ಜೀವಶಾಸ್ತ್ರ ಮತ್ತು ಗಣಿತ,

*ಅಗಸ್ಟ್ 29 - ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ,

ಅಗಸ್ಟ್ 30ರಂದು ಹೊರನಾಡು ಹಾಗೂ ಗಡಿನಾಡು ಕನ್ನಡಿಗರಿಗೆ ಕನ್ನಡ ವಿಷಯಗಳ ಪರೀಕ್ಷೆ ನಡೆಸಲಾಗುವುದು. ದ್ವೀತಿಯ ಪಿಯು ಪರೀಕ್ಷೆಗಳನ್ನು ಮುಂದೂಡಿರುವ ಕಾರಣ ಮುಂದಿನ ಕೋರ್ಸ ಆಯ್ಕೆಗಳಿಗಾಗಿ ನಡೆಯಬೇಕಿದ್ದ ಸಿಇಟಿ ಪರೀಕ್ಷೆಗಳನ್ನು ಕೂಡ ಮುಂದೂಡಲಾಗಿದೆ.