News

ವಾಹನ ಸವಾರರಿಗೆ ಗುಡ್ ನ್ಯೂಸ್ -ಡಿಎಲ್‌ ಮತ್ತು ಪರ್ಮಿಟ್ ಮಾನ್ಯತೆ ಅವಧಿ ಡಿ. 31 ರವರೆಗೆ ವಿಸ್ತರಣೆ

25 August, 2020 9:30 AM IST By:

ಕೊರೊನಾ ಲಾಕ್‌ಡೌನ್‌ನಿಂದಾಗಿ ಚಾಲನಾ ಪರವಾನಗಿ, ಪರ್ಮಿಟ್‌ ಅವಧಿ ಮುಗಿದಿದ್ದರೂ, ನವೀಕರಣ ಮಾಡಿಸಿಕೊಳ್ಳಲಾಗದೇ ಪರಿತಪಿಸುತ್ತಿದ್ದ ವಾಹನ ಸವಾರರಿಗೆ ಕೇಂದ್ರ ಸರಕಾರ ಮತ್ತೆ ರಿಲೀಫ್‌ ನೀಡಿದೆ. ಚಾಲನಾ ಪರವಾನಗಿ ಮತ್ತು ಮೋಟಾರು ವಾಹನ ದಾಖಲೆಗಳ (Motor vehicle documents) ಮಾನ್ಯತೆ ಅವಧಿಯನ್ನು ಅವಧಿಯನ್ನು  ಮತ್ತೆ ಡಿಸೆಂಬರ್ 31 ರವರೆಗೆ ವಿಸ್ತರಿಸಿ ವಾಹನ ಸವಾರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ.

 ಒಂದು ವೇಳೆ ನಿಮ್ಮ ಚಾಲನಾ ಪರವಾನಗಿ (Driving licence), ಪರವಾನಗಿ ಇತ್ಯಾದಿಗಳ ಅವಧಿ ಮುಗಿದಿದ್ದರೆ, ನಿಮಗೆ ಈ ಕೆಲಸ ಪೂರ್ಣಗೊಳಿಸಲು ಡಿಸೆಂಬರ್ 31 ರವರೆಗೆ ಅನುಮತಿ ನೀಡಲಾಗಿದೆ. ಈ ಮೊದಲು ಈ ಗಡುವು ಸೆಪ್ಟೆಂಬರ್ ವರೆಗೆ ಮಾತ್ರ ಇತ್ತು.

ಕಳೆದ ಫೆಬ್ರವರಿಯಲ್ಲಿ ಡಿಎಲ್‌ ಮತ್ತು ವಾಹನಗಳ ಪರ್ಮಿಟ್‌ ಹಾಗೂ ನೋಂದಣಿ (Registration) ಅವಧಿ ಮುಗಿದಿದ್ದರೆ, ಅಂತಹ ದಾಖಲೆಗಳ ಮಾನ್ಯತೆಯನ್ನು ಈ ಹಿಂದೆಯೇ ಜೂನ್‌ 30ರವರೆಗೆ ವಿಸ್ತರಿಸಲಾಗಿತ್ತು. ಇದಾದ ನಂತರ ಮತ್ತೊಮ್ಮೆ ಸೆಪ್ಟೆಂಬರ್ 30ರವರೆಗೆ ಅವಧಿ ವಿಸ್ತರಿಸಲಾಗಿತ್ತು. ಇದೀಗ ಡಿಸೆಂಬರ್‌ 30ರವರೆಗೆ ಅವಧಿ ವಿಸ್ತರಿಸಿದ್ದು, ವಾಹನ ಮಾಲೀಕರಿಗೆ ರಿಲೀಫ್‌ ನೀಡಲಾಗಿದೆ.