News

New Parliment: ಹೇಗಿದೆ ಹೊಸ ಸಂಸತ್‌ ಭವನ? ಇಲ್ಲಿದೆ ವಿಡಿಯೋ

27 May, 2023 9:48 AM IST By: Maltesh
Central Vista: How is the new parliament building? Here is the video

ಆಧುನಿಕ ಸೌಕರ್ಯಗಳು ಮತ್ತು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ನಿರ್ಮಿಸಲಾದ ನೂತನ ಸಂಸತ್ ಭವನ (Central Vista)  ಉದ್ಘಾಟನೆಗೆ ಸಿದ್ಧವಾಗಿದೆ. ಪ್ರಧಾನಿ ನರೇಂದ್ರ ಮೋದಿ ( Narendra Modi )ಅವರು ನಾಳೆ ನೂತನ ಸಂಸತ್ ಕಟ್ಟಡವನ್ನು (Central Vista) ಉದ್ಘಾಟಿಸಲಿದ್ದಾರೆ.

ಈ ಸಂದರ್ಭದಲ್ಲಿ ನೂತನ ಸಂಸತ್ತಿನ ಫಸ್ಟ್ ಲುಕ್ ವಿಡಿಯೋ ಬಿಡುಗಡೆ ಮಾಡಲಾಗಿದೆ. 1.48 ನಿಮಿಷದ ಈ  ವೀಡಿಯೊ (Video) ಹೊಸ ಸಂಸತ್ತಿನ ಭವ್ಯ ವಿನ್ಯಾಸವನ್ನು ತೋರಿಸುತ್ತದೆ. ಮುಖ್ಯ ದ್ವಾರದಿಂದ ಪ್ರವೇಶದಿಂದ ಈ ಫಸ್ಟ್ ಲುಕ್ ವಿಡಿಯೋ ಶುರುವಾಗಿದೆ. ಸಂಸತ್ ಭವನದ ಒಳ ಮತ್ತು ಹೊರಾಂಗಣ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಲೋಕಸಭೆ, ರಾಜ್ಯಸಭೆ.. ಈ ಎರಡು ಸದನಗಳಲ್ಲಿ ಸದಸ್ಯರ ಆಸನದ ವ್ಯವಸ್ಥೆಯನ್ನು ತೋರಿಸಲಾಗಿದೆ.

ಕಟ್ಟಡವು 150 ವರ್ಷಗಳಿಗಿಂತ ಹೆಚ್ಚು ಜೀವಿತಾವಧಿಯನ್ನು ಹೊಂದಿದೆ ಮತ್ತು ಭೂಕಂಪವನ್ನು ತಡೆದುಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ಸಂಸತ್ತು ಭಾರತದ ವಿವಿಧ ಪ್ರದೇಶಗಳ ವಾಸ್ತುಶಿಲ್ಪದ ಶೈಲಿಗಳನ್ನು ಸಾಕಾರಗೊಳಿಸುತ್ತದೆ.

ಲೋಕಸಭೆಯು ಹೊಸ ಸಂಕೀರ್ಣದಲ್ಲಿ 888 ಜನರು ಕುಳಿತುಕೊಳ್ಳಬಹುದು. ರಾಜ್ಯಸಭೆಯಲ್ಲಿ 384 ಜನರು ಕುಳಿತುಕೊಳ್ಳಬಹುದು. ಆದರೆ ಹಳೆಯ ರಾಜ್ಯಸಭೆಯಲ್ಲಿ 245 ಮಂದಿ ಮಾತ್ರ ಕುಳಿತುಕೊಳ್ಳಬಹುದಿತ್ತು. ಎರಡೂ ಸಭಾಂಗಣಗಳಲ್ಲಿ ಒಟ್ಟು 1,272 ಜನರು ಕುಳಿತುಕೊಳ್ಳಬಹುದು. 

ಮೇ 28ರಂದು ನೂತನ ಸಂಸತ್ ಭವನವನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಇನ್ನು ಪ್ರಧಾನು ಉದ್ಘಾಟನೆ ಮಾಡುತ್ತಿರುವುದು ತೀವ್ರ ಚರ್ಚೆಗೆ ಕಾರಣವಾಘಿದ್ದು,  25 ಪಕ್ಷಗಳು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವುದಾಗಿ ಘೋಷಿಸಿವೆ. ಮತ್ತೊಂದೆಡೆ, ಪ್ರಧಾನಿ ಮೋದಿಯವರ ನೂತನ ಸಂಸತ್ ಭವನದ ಉದ್ಘಾಟನಾ ಸಮಾರಂಭವನ್ನು ಬಹಿಷ್ಕರಿಸುವುದಾಗಿ 20 ವಿರೋಧ ಪಕ್ಷಗಳು ಘೋಷಿಸಿವೆ.

ಕೋವಿಡ್‌ನಿಂದ ಕಾಮಗಾರಿ ವಿಳಂಬ

ಪ್ರಧಾನಿ ಮೋದಿಯವರು 10ನೇ ಡಿಸೆಂಬರ್ 2020 ರಂದು ಈ ರಚನೆಯ ಅಡಿಗಲ್ಲು ಹಾಕಿದರು. ಆದರೆ. ಕೋವಿಡ್‌ನಿಂದಾಗಿ ಕೆಲಸಗಳು ತಡವಾದವು. ಜನವರಿ 2021 ರಲ್ಲಿ ನಿರ್ಮಾಣ ಪ್ರಾರಂಭವಾಯಿತು. ಅಹಮದಾಬಾದ್ ಮೂಲದ HCP ವಿನ್ಯಾಸ ಯೋಜನೆ ಮತ್ತು ನಿರ್ವಹಣೆಯು ಕಟ್ಟಡವನ್ನು ವಿನ್ಯಾಸಗೊಳಿಸಿದೆ. ವಾಸ್ತುಶಿಲ್ಪಿ ಬಿಮಲ್ ಪಟೇಲ್ ಇದನ್ನು ವಿನ್ಯಾಸಗೊಳಿಸಿದ್ದಾರೆ. ಅಸ್ತಿತ್ವದಲ್ಲಿರುವ ಸಂಸತ್ತಿನ ಪಕ್ಕದಲ್ಲಿ ಟಾಟಾ ಪ್ರಾಜೆಕ್ಟ್ಸ್ ಲಿಮಿಟೆಡ್ ಈ ನಿರ್ಮಾಣವನ್ನು ಕೈಗೆತ್ತಿಕೊಂಡಿದೆ.