News

Amazon, Flifkartಗೆ ಠಕ್ಕರ್‌..!ನಂದನ್‌ನಿಲೇಕಣಿ ನೇತೃತ್ವದಲ್ಲಿ ಕೆಂದ್ರ ಸರ್ಕಾರ ಹೊಸ ಪ್ಲಾನ್‌..ಏನದು?

29 April, 2022 2:33 PM IST By: Maltesh
Nandan Nillekani

ಇತ್ತೀಚಿನ ದಿನಗಳಲ್ಲಿ ಆಧುನಿಕತೆಯ ಆವಿಷ್ಕಾರಗಳು ಹೆಚ್ಚಿದಂತೆ ಎಲ್ಲವೂ ಅಂಗೈನಲ್ಲೆ ಎಂಬಂತಾಗಿದೆ. ಹೌದು ಇಂದು ಬೆಳೆಯುತ್ತಿರುವ ತಂತ್ರಜ್ಞಾನ ಈಡೀ ಜಗತ್ತನ್ನು ಸಂಕುಚಿತಗೊಳಿಸಿದೆ. ಮೊಬೈಲ್‌ಮತ್ತು ಇಂಟರ್‌ನೆಟ್‌ಗಳ ಬಳಕೆಯಿಂದ ಯಾವ ಕೆಲಸವು ಇಂದು ಕಠಿಣವಲ್ಲ ಎಂಬಾತಾಗಿದೆ.

ಎಲ್ಲವೂ ಅಂಗೈ ಅಳತೆಯ ಮೊಬೈಲ್‌ನಿಂದು ಸಾಧ್ಯವಾಗುತ್ತದೆ. ಇನ್ನು ಈ ಈ ಕಾಮರ್ಸ್‌ ಆರಂಭವಾದ ದಿನಗಳಿಂದಲೂ ಕೂಡ ಭೌತಿಕ ವ್ಯಾಪಾರ ವಹಿವಾಟುಗಳನ್ನು  ಅನೇಕರು ಮೊಬೈಲ್‌ನಲ್ಲೆ ಮಾಡುತ್ತಿದ್ದಾರೆ. ಅರ್ಥಾತ್‌ ಇದೀಗ ಏನ್‌ ಕೇಳಿದರು ಎಲ್ಲವೂ ಆನ್‌ಲೈನ್‌ ಎಂಬ ಮಾತುಗಳು ಹರಿದಾಡುತ್ತಿವೆ.

ಪಿಎಂ ಕಿಸಾನ್: 11ನೇ ಕಂತು ಶೀಘ್ರದಲ್ಲೆ ಬಿಡುಗಡೆ! ಫಲಾನುಭವಿಗಳ ಪಟ್ಟಿಯಲ್ಲಿ ಈಗಲೇ ನಿಮ್ಮ ಹೆಸರು ಪರಿಶೀಲಿಸಿ

7th Pay Commision: ಈ ತಿಂಗಳ ಅಂತ್ಯದೊಳಗೆ ಹೆಚ್ಚುತ್ತಾ ಕೇಂದ್ರ ಸರ್ಕಾರಿ ನೌಕರರ HRA..?

ಯೆಸ್‌ ಇದನ್ನು ಮನಗಂಡ  ಕೇಂದ್ರ ಸರ್ಕಾರವು  ಚಿಲ್ಲರೆ ವ್ಯಾಪರಿಗಳಿಗೆ ಬೆಂಬಲ ನೀಡಲು ಹಾಗೂ ಈ ಕಾಮರ್ಸ್‌ ತಾಣಗಳಿಂದ ಅವರನ್ನು ರಕ್ಷಿಸಿ ನೆರವು ನೀಡಲು ಮುಂದಾಗಿದ್ದಾರೆ. ಖ್ಯಾತ ಉದ್ಯಮಿ ಹಾಗೂ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ ರೂವಾರಿಯಾಗಿರುವ ನಂದನ್‌ ನಿಲೇಕಣಿ (Nandan Nilekani)ಅವರ ಜೊತೆಗೂಡಿ ಚಿಲ್ಲರೆ ವ್ಯಾಪಾರಿಗಳ ನೆರವಿಗಾಗಿ ವಿಶಿಷ್ಟವಾದ ಆಪ್‌ ಹಾಗೂ ವೆಬ್‌ಸೈಟ್‌ ರೂಪಿಸಲು ಯೋಜನೆ ರೂಪಿಸುತ್ತಿದ್ದಾರೆ ಎನ್ನಲಾಗಿದೆ.

ಬಿಡುಗಡೆ ಅಮೆಜಾನ್,(Amazon) ಫ್ಲಿಪ್‌ಕಾರ್ಟ್‌(Flifkart) ಜತೆ ಚಿಲ್ಲರೆ ವ್ಯಾಪಾರಿಗಳ ಪೈಪೋಟಿಗೆ ಕೇಂದ್ರವೇ ವೇದಿಕೆ  ರೂಪಿಸುತ್ತಿದೆ ಸೋಪ್‌ನಿಂದ ಹಿಡಿದು ದಿನಸಿ, ಹೋಟೆಲ್‌ ವಿಮಾನ, ರೈಲು, , ಟಿಕೆಟ್‌ವರೆಗೆ ಎಲ್ಲವೂ ಆ್ಯಪ್‌ನಲ್ಲಿ ಲಭ್ಯವಾಗಲಿದೆ.

ಓಪನ್ ನೆಟ್‌ವರ್ಕ್ ಫಾರ್ ಡಿಜಿಟಲ್ ಕಾಮರ್ಸ್

“ಓಪನ್ ನೆಟ್‌ವರ್ಕ್ ಫಾರ್ ಡಿಜಿಟಲ್ ಕಾಮರ್ಸ್' ಹೆಸರಿನ ಆಪ್‌ಹಾಗೂ ವೆಬ್‌ಸೈಟ್‌ ಅನ್ನು ರೂಪಿಸಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಇದು ಸೇವೆಗೆ ಲಭ್ಯವಾಗಲಿದೆ ಎನ್ನಲಾಗಿದೆ. ಇದು ಸಾರ್ವಜನಿಕ ಸ್ವಾಮ್ಯದ ಆಪ್‌ ಆಗಿದ್ದು ಯಾರು ಬೇಕಾದರು ಈ ಆಪ್‌ನಲ್ಲಿ ಮಾರಾಟ ಮಾಡಬಹುದು ಹಾಗೂ ಖರೀದಿಸಬಹುದು. ಇಲ್ಲಿ ಯಾವ ವ್ಯಾಪಾರಿಗೂ ನಿರ್ಭಂಧ ಇರುವುದಿಲ್ಲ ಎನ್ನಲಾಗಿದೆ. ಹಾಗೂ ಮುಖ್ಯವಾಗಿ ಈ ಸೇವೆಯು ಸಂಪೂರ್ಣ ಲಾಭರಹಿತವಾಗಿ ವ್ಯಾಪರಿಗಳಿಗೆ ಲಭ್ಯವಾಗಲಿದೆ ಎಂದು ಮಾಹಿತಿ ಇದೆ.

SBI ಅಲರ್ಟ್‌:  ಈ ಸಂಖ್ಯೆಗಳಿಂದ ಕರೆ ಬಂದರೆ, ಯಾವುದೇ ಕಾರಣಕ್ಕೆ ಪ್ರತಿಕ್ರಿಯಿಸ ಬೇಡಿ ಎಂದ SBI

SBI ಹಾಗೂ Axis ಬ್ಯಾಂಕ್‌ ಗ್ರಾಹಕರಿಗೆ ಬಿಗ್‌ ಶಾಕ್..! ಬಡ್ಡಿ ದರಗಳಲ್ಲಿ ಹೆಚ್ಚಳ

ಸಂಪೂರ್ಣವಾಗಿ ಸಣ್ಣ ಹಾಗೂ ಚಿಲ್ಲರೆ ವ್ಯಾಪಾರಿಗಳ ನೆರವಿಗಾಗಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಇದು ಒಂದು ವಿನೂತನ ಪ್ರಯೋಗವಾಗಲಿದೆ. ಮತ್ತು ಇನ್ನು ಕೆಲವೇ ತಿಂಗಳುಗಳಲ್ಲಿ ಪ್ರಾಯೋಗಿಕವಾಗಿ ಈ ಆಪ್‌ ಹಾಗೂ ವೆಬ್‌ಸೈಟ್‌ ಬೆಂಗಳೂರು, ಮುಂಬೈ, ಚೆನ್ನೈ, ದೆಹಲಿ, ಭೂಪಾಲ್‌, ಶಿಲ್ಲಾಂಗ್‌ನಲ್ಲಿ ಆರಂಭವಾಗಲಿದೆ  ಎನ್ನಲಾಗಿದೆ.

ಇದರ ಜೊತೆ ದೇಶದಲ್ಲೆ ಈ ಕಾಮರ್ಸ್‌ನಲ್ಲಿ ತಮ್ಮದೆಯಾದ ಹಿಡಿತ ಸಾಧಿಸಿರುವ ಖ್ಯಾತ ಈ ಕಾಮರ್ಸ್‌ ಕಂಪನಿಗಳಾದ ಅಮೇಜಾನ್‌, ಪ್ಲಿಪ್‌ಕಾರ್ಟ್‌ಸೇರಿದಂತೆ ಇನ್ನು ಕೆಲವು ಕಂಪನಿಗಳಿಗೆ ಇದು ಕಡಿವಾಣ ಹಾಕುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗುತ್ತಿದೆ.  ಸದ್ಯ ಇನ್ಫೋಸಿಸ್‌ ಸಹ ಸಂಸ್ಥಾಪಕ ಹಾಗೂ ಆಧಾರ್‌ ರೂವಾರಿಯಾಗಿರುವ ನಂದನ್‌ನಿಲೇಕಣಿ ಇದರ ಸಾರಥ್ಯ ವಹಿಸಿಕೊಂಡಿದ್ದು, ಸಾಕಷ್ಟು ನಿರೀಕ್ಷೆಯನ್ನು ಮೂಡಿಸಿದೆ.

ರಷ್ಯಾದಿಂದ ಅಪಾರ ಬೇಡಿಕೆಯಿದ್ದರೂ 200 ರೂ. ಕುಸಿತ ಕಂಡ ಗೋಧಿ..ಕಾರಣವೇನು..?

Big Announce! ರೈತರ income ಹೆಚ್ಚಿಸಲು 100 ಕೋಟಿ ಮೀಸಲು CM ಬೊಮ್ಮಾಯಿ ಅವರಿಂದ Big GIft, ಬಜೆಟ್‌ನಲ್ಲಿ ಘೋಷಣೆ