News

Central Budget ಗೋಧಿ ರಫ್ತು ನಿರ್ಬಂಧ ಸಡಿಲಿಸಿ: ಕೇಂದ್ರ ಸರ್ಕಾರಕ್ಕೆ ರೈತರ ಮನವಿ

23 November, 2022 1:58 PM IST By: Hitesh
Nirmala Sitharaman

ಕೇಂದ್ರ ಸರ್ಕಾರವು ಗೋಧಿ ಮತ್ತು ನುಚ್ಚಕ್ಕಿಯ ಮೇಲೆ ವಿಧಿಸಿರುವ ರಫ್ತು ಮೇಲಿನ ನಿಷೇಧ ಹಿಂಪಡೆಯಬೇಕು ಎಂದು ಕೇಂದ್ರ ಹಣಕಾಸು ಸಚಿವಾಲಯಕ್ಕೆ ವಿವಿಧ ರೈತಪರ ಸಂಘಟನೆಗಳು ಮನವಿ ಸಲ್ಲಿಸಿವೆ.

ಸಾರ್ವಜನಿಕರಿಗೆ ರಾಷ್ಟ್ರಪತಿ ಭವನ ವೀಕ್ಷಿಸಲು ಡಿಸೆಂಬರ್‌ 1ರಿಂದ ಅವಕಾಶ!  

ಅಲ್ಲದೇ ಎಣ್ಣೆಕಾಳುಗಳು ಸೇರಿದಂತೆ ದೇಶೀಯ ಕೃಷಿ ಉತ್ಪಾದನೆ ಹೆಚ್ಚಿಸಲು ಸಹಕಾರ ನೀಡಬೇಕು ಎಂದು ಕೋರಲಾಗಿದೆ.

ಕೇಂದ್ರ ಸರ್ಕಾರದ 2023-24ನೇ ಸಾಲಿನ central budget ಬಜೆಟ್‌ನ ಪೂರ್ವ ಸಮಾಲೋಚನೆ ಮೂರನೇ ಸಭೆಯಲ್ಲಿ

ರೈತ ಸಂಘಟನೆಗಳ ಮುಖಂಡರು, ಕೃಷಿ ತಜ್ಞರು ಹಾಗೂ ಕೃಷಿ ಸಂಸ್ಕರಣಾ ಉದ್ಯಮದ ಪ್ರತಿನಿಧಿಗಳು ಭಾಗವಹಿಸಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (nirmala Sitharaman) ಅವರೊಂದಿಗೆ ಚರ್ಚಿಸಿದರು.  

ಅಡಿಕೆ ಬೆಳೆಗೆ ಎಲೆಚುಕ್ಕಿ ರೋಗ: ಕ್ರಿಮಿನಾಶಕ ಸಿಂಪಡಣೆಗೆ 10 ಕೋಟಿ ಅನುದಾನ; ಸಿ.ಎಂ ಬೊಮ್ಮಾಯಿ

ಸಭೆಯಲ್ಲಿ ರೈತರು ತಮ್ಮ ಅಭಿಪ್ರಾಯ ಹಂಚಿಕೊಂಡರು. ಗೋಧಿಯಂತಹ ಕೃಷಿ ಉತ್ಪನ್ನಗಳ ರಫ್ತು ಮೇಲೆ ವಿಧಿಸಲಾಗಿರುವ ನಿಷೇಧವನ್ನು ಹಿಂಪಡೆಬೇಕು.

ಮುಖ್ಯವಾಗಿ ಕನಿಷ್ಠ ಬೆಂಬಲ ಬೆಲೆ (MSP) ಗಿಂತ ಕಡಿಮೆ ಬೆಲೆಯ ಉತ್ಪನ್ನಗಳ ಆಮದ ಮಾಡಿಕೊಳ್ಳುವುದನ್ನು ನಿರ್ಬಂಧಿಸಬೇಕು.

ಅಲ್ಲದೇ  ಎಣ್ಣೆಕಾಳುಗಳಾದ ಸೋಯಾಬೀನ್, ಸಾಸಿವೆ, ಕಡಲೆಕಾಯಿ ಮತ್ತು ಸೂರ್ಯಕಾಂತಿ ಎಣ್ಣೆಯಂತಹ ದೇಶೀಯ ಉತ್ಪಾದನೆಗೆ ಆದ್ಯತೆ

ನೀಡಬೇಕು ಎಂದು ರೈತ ಮುಖಂಡರು ಮನವಿ ಮಾಡಿದರು.  

ರಸಗೊಬ್ಬರ ಕೊರತೆಯಿಂದ ಆಹಾರ ಬಿಕ್ಕಟ್ಟು: ಪ್ರಧಾನಿ ಮೋದಿ ಎಚ್ಚರಿಕೆ   

ಭಾರತ್ ಕೃಷಿಕ್ ಸಮಾಜದ ಅಧ್ಯಕ್ಷ ಅಜಯ್ ವೀರ್ ಮಾತನಾಡಿ, 2023-24ರ ಕೇಂದ್ರ ಬಜೆಟ್ ಪಟ್ಟಿಯಲ್ಲಿ ಕನಿಷ್ಠ ಬೆಂಬಲ

ಬೆಲೆ (MSP)ಗಿಂತ ಕೆಳಗಿರುವ ಉತ್ಪನ್ನಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳಲು ಸರ್ಕಾರ ಅನುಮತಿ ನೀಡಬಾರದು ಎಂದು ಒತ್ತಾಯಿಸಿದರು.

ಕೃಷಿ ಕ್ಷೇತ್ರದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿಪಡಿಸಲು, ನಿರುದ್ಯೋಗಿಗಳನ್ನು ಕೃಷಿ ಕ್ಷೇತ್ರದತ್ತ ಸೆಳೆಯಲು ಕ್ರಮ ವಹಿಸಬೇಕು ಎಂದರು.

ಅಡಿಕೆ ಬೆಳೆಗೆ ಎಲೆಚುಕ್ಕಿ ರೋಗ: ಕ್ರಿಮಿನಾಶಕ ಸಿಂಪಡಣೆಗೆ 10 ಕೋಟಿ ಅನುದಾನ; ಸಿ.ಎಂ ಬೊಮ್ಮಾಯಿ

Nirmala Sitharaman

ಭಾರತೀಯ ರೈತ ಸಂಘ ಒಕ್ಕೂಟದ ಅಧ್ಯಕ್ಷ ರಘುನಾಥ್ ದಾದಾ ಪಾಟೀಲ್ ಮಾತನಾಡಿ, ರೈತರು ಹೆಚ್ಚಿನ ಆದಾಯ ಗಳಿಸಲು

ಪೂರಕವಾದ ವಾತಾವರಣವನ್ನು ನಿರ್ಮಿಸಬೇಕು. ಅಲ್ಲದೇ  ಜಾಗತಿಕ ಮಟ್ಟದಲ್ಲಿ ವ್ಯಾಪಾರ ಮಾಡಲು ಇರುವ ಮಾರ್ಗಗಳನ್ನು ಪರಿಚಯಿಸಬೇಕು ಎಂದು ಮನವಿ ಮಾಡಿದರು.  

ಗೋಧಿ ಮತ್ತು ನುಚ್ಚಕ್ಕಿ ಇತರ ಕೃಷಿ ಉತ್ಪನ್ನಗಳ ರಫ್ತಿನ ಮೇಲಿನ ನಿರ್ಬಂಧದಿಂದಾಗಿ ರೈತರ ಆದಾಯ ಸೋರಿಕೆ ಆಗುತ್ತಿದೆ.

ಕೃಷಿ ಉತ್ಪನ್ನಗಳ ರಫ್ತಿಗೆ ಸರ್ಕಾರ ನಿರ್ಬಂಧ ವಿಧಿಸಬಾರದು. ದೇಶೀಯ ಪೂರೈಕೆಯನ್ನು ಹೆಚ್ಚಿಸಲು ಮತ್ತು ಹಣದುಬ್ಬರವನ್ನು

ನಿಯಂತ್ರಿಸಲು ಸರ್ಕಾರ ಗೋಧಿ ಮತ್ತು ನುಚ್ಚಕ್ಕಿ ರಫ್ತುಗಳನ್ನು ನಿರ್ಬಂಧಿಸುವ ಲಾಭದ ಬಗ್ಗೆ ತಿಳಿದುಕೊಳ್ಳಬೇಕು ಎಂದು ಹೇಳಿದರು.

ದೇಶಿಯ ಎಣ್ಣೆ ಉತ್ಪನ್ನಗಳಾದ ಸೋಯಾಬೀನ್, ಸೂರ್ಯಕಾಂತಿ ಮತ್ತು ಕಡಲೆಕಾಯಿಗಳ ದೇಶೀಯ ಉತ್ಪಾದನೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ನೆರವು ನೀಡಬೇಕು.

ಸರ್ಕಾರ ಈ ಕ್ರಮದಿಂದಾಗಿ ಖಾದ್ಯ ತೈಲಗಳ ಆಮದಿನ ಮೇಲೆ ಭಾರತದ ಅವಲಂಬನೆ ಕಡಿಮೆ ಆಗುತ್ತದೆ ಪಾಟೀಲ್ ಸಲಹೆ ನೀಡಿದರು.

ರೈತರ ಸಂಘಟನೆಗಳ ಮುಖಂಡರು ಹಾಗೂ ಉದ್ಯಮಿಗಳ ಸಲಹೆಗಳನ್ನು ಕೇಂದ್ರ ಹಣಕಾಸು ಸಚಿವೆ ಕೇಳಿದರು.

ರೈತರ ಹಾಗೂ ಉದ್ಯಮಿಗಳ ಸಲಹೆಯನ್ನು 2023ರ ಫೆಬ್ರುವರಿ 1ರಂದು ಕೇಂದ್ರ ಸರ್ಕಾರ ಮಂಡಿಸಲಿರುವ ಬಜೆಟ್‌ನಲ್ಲಿ ಬಳಸಿಕೊಳ್ಳುವ ಸಾಧ್ಯತೆ ಇದೆ.

ಉತ್ತರಾಖಂಡನ ಗೋವಿಂದ್ ಬಲ್ಲಭ್ ಪಂತ್ ಕೃಷಿ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ ನಿರ್ದೇಶಕರು ಎ ಎಸ್‌ ನೈನ್, ಹಿಮಾಚಲದ ರಾಜ್ಯ ಹಣ್ಣು ತರಕಾರಿಗಳು ಮತ್ತು ಹೂವುಗಳ ಬೆಳೆಗಾರರ ​​ಸಂಘದ ರಾಜ್ಯಾಧ್ಯಕ್ಷ ಹರೀಶ್ ಚೌಹಾಣ್, ಕೇರಳದ ಅಖಿಲ ಭಾರತ ಮಸಾಲೆ ರಫ್ತುದಾರರ ವೇದಿಕೆಯ

ಕಾರ್ಯದರ್ಶಿ ವೀರೇನ್ ಕೆ ಖೋನಾ, ತಮಿಳುನಾಡಿನ ಯುಪಿಎಎಸ್ಐ ಅಧ್ಯಕ್ಷ ಜೆಫ್ರಿ ರೆಬೆಲ್ಲೊ ಸೇರಿದಂತೆ ಹಲವರು ಪ್ರಮುಖ ವಿಷಯಗಳನ್ನು ಸಭೆಯಲ್ಲಿ ಪ್ರಸ್ತಾಪಿಸಿದರು.  

ಭಾರತೀಯ ರೈತರ ರಸಗೊಬ್ಬರ ಸಹಕಾರಿ ಸಂಸ್ಥೆ, ಭಾರತೀಯ ಕಿಸಾನ್ ಸಂಘ ಮತ್ತು ದಕ್ಷಿಣ ಭಾರತೀಯ ಕಬ್ಬು ರೈತರ ಸಂಘ

ಹಣ್ಣುಗಳು ಮತ್ತು ತರಕಾರಿಗಳ ಸಂಸ್ಕರಣೆ ಹಾಗೂ ಇಂಟಿಗ್ರೇಟೆಡ್ ಕೋಲ್ಡ್ ಚೈನ್ ಅಸೋಸಿಯೇಷನ್, ಅಸೋಸಿಯೇಟೆಡ್ ಟೀ

ಮತ್ತು ಅಗ್ರೋ ಮ್ಯಾನೇಜ್ಮೆಂಟ್ ಸರ್ವಿಸಸ್ (ಅಸ್ಸಾಂ)ಸೇರಿದಂತೆ ಅನೇಕ ಸಂಘ, ಸಂಸ್ಥೆಗಳ ಸದಸ್ಯರು ಈ ಸಭೆಯಲ್ಲಿ ಭಾಗವಹಿಸಿದ್ದರು.