ಕೇಂದ್ರ ಸಶಸ್ತ್ರ ಪಡೆ ಹುದ್ದೆಗೆ ಅರ್ಜಿ ಆಹ್ವಾನವಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ: ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಸಬ್-ಇನ್ಸ್‌ಪೆಕ್ಟರ್ ಹುದ್ದೆಗಳ ಸಂಖ್ಯೆ -3068
ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಸಬ್-ಇನ್ಸ್‌ಪೆಕ್ಟರ್ ಹುದ್ದೆಗಳು ಸಿಆರ್‌ಪಿಎಫ್, ಬಿಎಸ್‌ಎಫ್, ಐಟಿಬಿಪಿ, ಸಿಐಎಸ್‌ಎಫ್, ಎಸ್‌ಎಸ್‌ಬಿ ಎಲ್ಲಾ ಪಡೆಗಳನ್ನು ಒಳಗೊಂಡಿರುತ್ತದೆ. ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ ಸಬ್‌ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಆಯ್ಕೆ ಆದವರು ಭಾರತದ ಯಾವುದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸಲು ಸಿದ್ಧರಿರಬೇಕು.
ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 16-07-2020
ಅರ್ಜಿ ಶುಲ್ಕ ಪಾವತಿಸಲು ಕೊನೆ ದಿನಾಂಕ: 18-07-2020
ಆಫ್‌ಲೈನ್ ಚಲನ್ ಜೆನೆರೇಟ್ ಮಾಡಲು ಕೊನೆ ದಿನಾಂಕ: 20-07-2020
ಆಫ್‌ಲೈನ್ ಮೂಲಕ ಶುಲ್ಕ ಪಾವತಿ ಮಾಡಲು ಕೊನೆ ದಿನಾಂಕ: 22-07-2020
ಕಂಪ್ಯೂಟರ್ ಆಧಾರಿತ ಪರೀಕ್ಷೆ (ಪೇಪರ್-1) ದಿನಾಂಕ: 29-09-2020 ರಿಂದ 05-10-2020
ಪೇಪರ್-2 ಕಂಪ್ಯೂಟರ್ ಆಧಾರಿತ ಪರೀಕ್ಷೆ ದಿನಾಂಕ: 01-03-2021
ವೇತನ ಶ್ರೇಣಿ: ಸಿಎಪಿಎಫ್ ಸಬ್-ಇನ್ಸ್‌ಪೆಕ್ಟರ್ (ಜೆನರಲ್ ಡ್ಯೂಟಿ) - ವೇತನ ಶ್ರೇಣಿ ಲೆವೆಲ್-6 (ರೂ.35,400- 1,12,400),
ವಯೋಮಿತಿ: ದಿನಾಂಕ 01-01-2021 ಕ್ಕೆ ಸರಿಯಾಗಿ ಕನಿಷ್ಠ 20 ವರ್ಷ ಆಗಿರಬೇಕು, ಗರಿಷ್ಠ 25 ವರ್ಷ ವಯೋಮಿತಿ ಮೀರಿರಬಾರದು. ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.
ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಪಾಸ್ ಮಾಡಿರಬೇಕು.
ಅರ್ಜಿ ಸಲ್ಲಿಕೆ ಹೇಗೆ?
ಅರ್ಹ ಮತ್ತು ಆಸಕ್ತಿ ಅಭ್ಯರ್ಥಿಗಳು ಸಿಬ್ಬಂದಿ ನೇಮಕಾತಿ ಆಯೋಗದ ಅಧಿಕೃತ ವೆಬ್‌ಸೈಟ್ https://ssc.nic.in/ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು. ಅರ್ಜಿ ಶುಲ್ಕ ರೂ.100 ಅನ್ನು ಆನ್‌ಲೈನ್ ಮೂಲಕ ಪಾವತಿಸಬಹುದು. ಅಥವಾ ಆಫ್‌ಲೈನ್ ಮೂಲಕವು ಪಾವತಿಸಬಹುದು.