News

ಕೆನರಾ ಬ್ಯಾಂಕಿನಲ್ಲಿ 220 Specialist officer ಹುದ್ದೆಗಳಿಗೆ ಅರ್ಜಿ ಆಹ್ವಾನ

23 November, 2020 6:20 AM IST By:

ಕೆನರಾ ಬ್ಯಾಂಕ್  ವಿಶೇಷ ಅಧಿಕಾರಿ (Specialist officer) ಹುದ್ದೆಗಳಿಗಾಗಿ ಅಧಿಸೂಚನೆ ಹೊರಡಿಸಿದ್ದು, ಆನ್ಲೈನ್ ಮೂಲಕ ಅರ್ಜಿಯನ್ನು ಸ್ವೀಕರಿಸಲಾಗುವುದು. ಪರೀಕ್ಷೆಯು ಜನವರಿ ಅಥವಾ ಫೆಬ್ರವರಿ ಇರುವ ಕಾರಣ ನಂಬರ್ 25ರಿಂದ ಅರ್ಜಿಯನ್ನು ಸ್ವೀಕರಿಸಲಾಗುವುದು, ಅಭ್ಯರ್ಥಿಗಳು ಕೆನರಾ ಬ್ಯಾಂಕ್ ನ ಅಫೀಷಿಯಲ್ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು. ಹಾಗೂ ಅರ್ಜಿ ಸಲ್ಲಿಸಲು ಕೊನೆಯ ದಿನ ಡಿಸೆಂಬರ್ 15.

ಅರ್ಹತೆ:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದಾದರೂ ವಿಶ್ವವಿದ್ಯಾಲಯಗಳಿಂದ ಡಿಗ್ರಿ ಪದವಿಯನ್ನು ಹೊಂದಿರಬೇಕು ಹಾಗೂ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು, ಉದ್ಯೋಗ ಭಾರತದ ಯಾವುದೇ ಮೂಲೆಯಲ್ಲಿ ಕೂಡ ಸಿಗಬಹುದು ಆದಕಾರಣ ಅಭ್ಯರ್ಥಿಗಳಿಗೆ ಹಿಂದಿ ಭಾಷೆಯ ಕೂಡ ಗೊತ್ತಿರಬೇಕು.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ವಯೋಮಿತಿ 20 ರಿಂದ 35 ವರ್ಷದ ಒಳಗಡೆ ಇರಬೇಕು, ಹಾಗೂ ಸರ್ಕಾರದ ನಿಯಮಗಳ ಪ್ರಕಾರ ಕಾಯ್ದಿರಿಸಿದ್ದ ವರ್ಗಗಳ ಮೇಲೆ ವಯಸ್ಸಿನ  ವಿಶ್ರಾಂತಿ ಇರುತ್ತದೆ.

 ಆಯ್ಕೆ ಪ್ರಕ್ರಿಯೆ:

 ಅರ್ಜಿ ಸಲ್ಲಿಸಿದ ನಂತರ ಅಭ್ಯರ್ಥಿಗಳಿಗೆ  ಪರೀಕ್ಷೆ ದಿನಾಂಕವನ್ನು ತಿಳಿಸಲಾಗುವುದು, ಮೊದಲಿಗೆ ಅಭ್ಯರ್ಥಿಗಳು ರಿಟರ್ನ್ ಪರೀಕ್ಷೆಯನ್ನು ಬರೆಯಬೇಕು, ಇದಾದನಂತರ ಗುಂಪು ಚರ್ಚೆ ಹಾಗೂ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.

ಪ್ರಶ್ನೆಪತ್ರಿಕೆ:

 ಪ್ರಶ್ನೆಪತ್ರಿಕೆಯು 150 ಪ್ರಶ್ನೆಗಳನ್ನು ಹೊಂದಿದ್ದು ಎಲ್ಲವೂ ಬಹು ಆಯ್ಕೆ ಪ್ರಶ್ನೆಗಳು ಇರುತ್ತವೆ, ಇದು ಎರಡುನೂರು ಅಂಕಗಳಿಗಾಗಿ ಪರೀಕ್ಷೆ ನಡೆಸಲಾಗುವುದು ಹಾಗೂ ಪ್ರತಿಯೊಂದು ತಪ್ಪು ಉತ್ತರಕ್ಕೆ . 25 ಅಂಕಗಳನ್ನು ಕಡಿತಗೊಳಿಸಲಾಗುವುದು.

 ಅರ್ಜಿ ಶುಲ್ಕ:  ಜನರಲ್ ಅಥವಾ ಓಬಿಸಿ ವಿದ್ಯಾರ್ಥಿಗಳಿಗೆ-600 ರೂಪಾಯಿ,  ಪರಿಶಿಷ್ಟ ಜಾತಿ ಹಾಗೂ  ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ -100 ರೂಪಾಯಿ

 ಅರ್ಜಿ ಸಲ್ಲಿಸುವುದು ಹೇಗೆ?

  1. ಅಭ್ಯರ್ಥಿಗಳು ಕೆನರಾ ಬ್ಯಾಂಕ್ ನ ಆಫೀಸಲ್ ವೆಬ್ಸೈಟ್ ಆದ www.canarabank.com ಗೆ ಭೇಟಿ ನೀಡಿ, ಹಾಗೂ ಮುಖಪುಟದಲ್ಲಿ (careers) ವೃತ್ತಿ ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
  2. ನೇಮಕಾತಿ ಲಿಂಕ್ ಮೇಲೆ ಕ್ಲಿಕ್ ಮಾಡಿ, ಹಾಗೂ ಕೆನರಾ ಬ್ಯಾಂಕ್ 2020 ನೇಮಕಾತಿ, so ಮೇಲೆ ಕ್ಲಿಕ್ ಮಾಡಿ.
  3. ಆನ್ಲೈನ್ ಮೂಲಕ ಎಲ್ಲ ಮಾಹಿತಿಯನ್ನು ಸರಿಯಾಗಿ ತುಂಬಿ, ಹಾಗೂ ತಮ್ಮ ಸಹಿ ಹಾಗೂ ಛಾಯಾಚಿತ್ರವನ್ನು ಆನ್ಲೈನ್ ಮೂಲಕ ಅಪ್ಲೋಡ್ ಮಾಡಿ.
  4. ಅರ್ಜಿ ಶುಲ್ಕವನ್ನು ಪಾವತಿಸಿ ಹಾಗೂ ಮುಗಿಸಿ ಬಟನ್ ಮೇಲೆ ಕ್ಲಿಕ್ ಮಾಡಿ.

 ಅಭ್ಯರ್ಥಿಗಳು ಆದಷ್ಟು ಬೇಗ ಅರ್ಜಿಯನ್ನು ಸಲ್ಲಿಸಬೇಕು ಹಾಗೂ ಈ ವಿಷಯ ಗೊತ್ತಿರದ ತಮ್ಮ ಸ್ನೇಹಿತರಿಗೂ ತಿಳಿಸಬೇಕು, ಹಾಗೂ ಹೆಚ್ಚಿನ ಮಾಹಿತಿಗಾಗಿ ಕೆನರಾ ಬ್ಯಾಂಕ್ ನ ಅಫಿಶಿಯಲ್ ವೆಬ್ ಸೈಟ್ ಗೆ ಭೇಟಿ ನೀಡಿ.

ಲೇಖಕರು: ಚಿನ್ನಪ್ಪ ಎಸ್. ಅಂಗಡಿ