ರಬಿ ಮತ್ತು ಖಾರಿಫ್ ಸೀಸನ್‌ಗಳಿಗೆ ಫಾಸ್ಫೇಟ್ ಮತ್ತು ಪೊಟ್ಯಾಶ್ ರಸಗೊಬ್ಬರಗಳ ಮೇಲೆ ಪೋಷಕಾಂಶ ಆಧಾರಿತ ಸಬ್ಸಿಡಿ ಶೇಕಡಾವಾರು ಪರಿಷ್ಕರಣೆಗೆ ಕ್ಯಾಬಿನೆಟ್ ಅನುಮೋದನೆ ನೀಡಿದೆ. ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು, ನಿನ್ನೆ ರಬಿ ಹಾಗೂ ಖಾರಿಫ್ ಅವಧಿಗೆ ಪೋಷಕಾಂಶ ಆಧಾರಿತ ರಸಗೊಬ್ಬರಗಳಾದ ಸಾರಜನಕ, ರಂಜಕ , ಸಬ್ಸಿಡಿ ಪರಿಷ್ಕರಣೆಗೆ ಕೇಂದ್ರ ರಸಗೊಬ್ಬರ ಇಲಾಖೆ ಕಳುಹಿಸಿದ್ದ ಪ್ರಸ್ತಾವನೆಗೆ ಅನುಮೋದನೆ ನೀಡಿದೆ.
ಫಾಸ್ಫೇಟ್ ಮತ್ತು ಪೊಟ್ಯಾಶ್ ರಸಗೊಬ್ಬರಗಳ ಮೇಲೆ ಪೋಷಕಾಂಶ ಆಧಾರಿತ ಸಬ್ಸಿಡಿ ಯೋಜನೆ (NBS) ದೇಶದಲ್ಲಿ ಏಪ್ರಿಲ್‌ನಿಂದ ಜಾರಿಯಲ್ಲಿದೆ. ಈ ಹಿನ್ನೆಲೆಯಲ್ಲಿ, ಪ್ರಸ್ತುತ ರಬಿ 2022-23 ಮತ್ತು ಖಾರಿಫ್-2023 ಪೋಷಕಾಂಶಗಳ ರಸಗೊಬ್ಬರಗಳ ಮೇಲಿನ 'ಎನ್‌ಬಿಎಸ್' ಸಬ್ಸಿಡಿಯ ಶೇಕಡಾವಾರು ಪರಿಷ್ಕರಣೆಯನ್ನು ಸರ್ಕಾರ ಅನುಮೋದಿಸಿದೆ. ) ಹೀಗಾಗಿ, ದೇಶದಾದ್ಯಂತ ರೈತರಿಗೆ 25 ದರ್ಜೆಯ ಫಾಸ್ಫೇಟ್ ಮತ್ತು ಪೊಟ್ಯಾಶ್ ರಸಗೊಬ್ಬರಗಳು ಸಬ್ಸಿಡಿ ಬೆಲೆಯಲ್ಲಿ ಲಭ್ಯವಿರುತ್ತವೆ.
ಮಾಹಿತಿ ತಂತ್ರಜ್ಞಾನ ಹಾರ್ಡ್‌ವೇರ್ ಉತ್ಪಾದನೆಗೆ ಸಂಬಂಧಿಸಿದ ಉದ್ಯಮಗಳಿಗಳ ಪ್ರೋತ್ಸಾಹಕ ಯೋಜನೆ-2.0 ಗೆ ಕ್ಯಾಬಿನೆಟ್ ಅನುಮೋದಿಸಿದೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಇಂದು ರೂ .17,000 ಕೋಟಿಗಳ ಬಜೆಟ್ ವೆಚ್ಚದೊಂದಿಗೆ ಮಾಹಿತಿ ತಂತ್ರಜ್ಞಾನದ ಯಂತ್ರಾಂಶ ತಯಾರಿಕೆಗೆ ಪ್ರೋತ್ಸಾಹಕ ಯೋಜನೆ 2.0 ಅನ್ನು ಅನುಮೋದಿಸಿದೆ.
ಭಾರತವು ಎಲ್ಲಾ ಜಾಗತಿಕ ಕಂಪನಿಗಳಿಗೆ ವಿಶ್ವಾಸಾರ್ಹ ಪೂರೈಕೆ ಸರಪಳಿ ಪಾಲುದಾರನಾಗಿ ಹೊರಹೊಮ್ಮುತ್ತಿದೆ. ದೊಡ್ಡ ಐಟಿ ಹಾರ್ಡ್‌ವೇರ್ ಕಂಪನಿಗಳು ಭಾರತದಲ್ಲಿ ಉತ್ಪಾದನಾ ಸೌಲಭ್ಯಗಳನ್ನು ಸ್ಥಾಪಿಸಲು ತೀವ್ರ ಆಸಕ್ತಿಯನ್ನು ತೋರಿಸಿವೆ. ದೇಶದೊಳಗೆ ಭಾರೀ ಬೇಡಿಕೆಯನ್ನು ಹೊಂದಿರುವ ಪ್ರಬಲ ಮಾಹಿತಿ ತಂತ್ರಜ್ಞಾನ ಸೇವೆಗಳ ಉದ್ಯಮವು ಇದನ್ನು ಬೆಂಬಲಿಸುತ್ತದೆ. ಹೆಚ್ಚಿನ ಪ್ರಮುಖ ಕಂಪನಿಗಳು ಭಾರತದಲ್ಲಿ ನೆಲೆಗೊಂಡಿರುವ ಸೌಲಭ್ಯದಿಂದ ಭಾರತದೊಳಗೆ ದೇಶೀಯ ಮಾರುಕಟ್ಟೆಗಳನ್ನು ಪೂರೈಸಲು ಮತ್ತು ಭಾರತವನ್ನು ರಫ್ತು ಕೇಂದ್ರವನ್ನಾಗಿ ಮಾಡಲು ಬಯಸುತ್ತವೆ.
ಶೇ.60 ಕ್ಕಿಂತ ಹೆಚ್ಚು ಅಂಕ ಪಡೆದಿರುವ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ 6ನೇ ತರಗತಿಗೆ ಅರ್ಜಿ ಆಹ್ವಾನ
ಸಮಾಜ ಕಲ್ಯಾಣ ಇಲಾಖೆಯಿಂದ 2023-24 ನೇ ಸಾಲಿಗೆ 5ನೇ ತರಗತಿಯಲ್ಲಿ ಶೇ.60 ಕ್ಕಿಂತ ಹೆಚ್ಚು ಅಂಕ ಪಡೆದಿರುವ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ 6ನೇ ತರಗತಿಗೆ ಬಳ್ಳಾರಿಯ ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಅರ್ಹತಾ ಪರೀಕ್ಷೆಯ ಮೂಲಕ ಪ್ರವೇಶ ಕಲ್ಪಿಸಲು ಅರ್ಜಿ ಆಹ್ವಾನಿಸಲಾಗಿದೆ. ಆಯಾ ತಾಲ್ಲೂಕಿನ ಸಹಾಯಕ ನಿರ್ದೇಶಕರ ಕಚೇರಿಗಳಿಂದ ಅರ್ಜಿ ಪಡೆದು, ಭರ್ತಿ ಮಾಡಿದ ಅರ್ಜಿಗಳನ್ನು ಮೇ 25 ರೊಳಗೆ ಸಲ್ಲಿಸಬೇಕು. ಡಯಟ್ ಮೂಲಕ ಪ್ರವೇಶ ಪರೀಕ್ಷೆ ಜೂನ್ 01 ರಂದು ನಡೆಯುತ್ತದೆ.
ಹೆಚ್ಚಿನ ಮಾಹಿತಿಗಾಗಿ ನಗರದ ಕೋಟೆ ಪ್ರದೇಶದ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ಕಚೇರಿ ಸಂಪರ್ಕಿಸಬಹುದು ಎಂದು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಸತೀಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಿಂಗಳ ತೋಟಗಾರಿಕೆ ತರಬೇತಿ ಅರ್ಜಿ ಅವಧಿ ವಿಸ್ತರಣೆ
ಬಳ್ಳಾರಿ ತೋಟಗಾರಿಕೆ ಇಲಾಖೆಯಿಂದ 2023-24ನೇ ಸಾಲಿನಲ್ಲಿ ನೀಡಲಾಗುವ 10 ತಿಂಗಳ ತೋಟಗಾರಿಕೆ ತರಬೇತಿ ಪಡೆಯಲು ಅರ್ಹ ರೈತ ಮಕ್ಕಳಿಂದ ಈಗಾಗಲೇ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಅವಧಿಯನ್ನು ವಿಸ್ತರಿಸಲಾಗಿದೆ. ಅರ್ಜಿಗಳನ್ನು ಸ್ವೀಕರಿಸಲು ಕೊನೆಯ ದಿನ ಮೇ 22 ರಂದು ಸಂಜೆ 05.30 ರೊಳಗೆ ಸಲ್ಲಿಸಬೇಕು.
ಸಂದರ್ಶನ ನಡೆಯುವ ದಿನ ಮೇ 25. ಆಯ್ಕೆ ಪಟ್ಟಿಯನ್ನು ಪ್ರಕಟಿಸುವುದು ಹಾಗೂ ಪ್ರವೇಶ ಪತ್ರ ನೀಡುವ ದಿನ ಮೇ 29. ಆಯ್ಕೆಯಾದ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ನಿರ್ದೇಶನಾಲಯಕ್ಕೆ ಕಳುಹಿಸುವ ದಿನ ಮೇ 30. ಅಭ್ಯರ್ಥಿಗಳು ತರಬೇತಿಗೆ ಹಾಜರಾಗುವ ದಿನ ಜೂನ್ 01 ರಿಂದ ಆಗಿರುತ್ತದೆ. ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಎಲ್ಲಾ ಮೂಲ ದಾಖಲಾತಿಗಳೊಂದಿಗೆ ಹಾಜರಾಗಲು ಸೂಚಿಸಿ ಹೆಚ್ಚಿನ ಮಾಹಿತಿಗಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಸಂಪರ್ಕಿಸಬಹುದು ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಅವರು ತಿಳಿಸಿದ್ದಾರೆ.