News

ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿ: ಬೆಳೆಗಾರರಿಗೆ ಪಾವತಿಸುವ ಕನಿಷ್ಠ ಬೆಲೆ ಹೆಚ್ಚಳ

20 August, 2020 2:51 PM IST By:

ಸಕ್ಕರೆ ಕಾರ್ಖಾನೆಗಳು ರೈತರಿಗೆ(Sugarcane growers) ನೀಡುವ ದರವನ್ನು ಹೆಚ್ಚಿಸಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

2020-21ರ ಮಾರುಕಟ್ಟೆ ವರ್ಷಕ್ಕೆ (ಅಕ್ಟೋಬರ್-ಸೆಪ್ಟೆಂಬರ್) ಕಬ್ಬಿನ ನ್ಯಾಯಯುತ ಮತ್ತು ಸಂಭಾವನೆ ದರ (ಫೇರ್‌ ಆ್ಯಂಡ್‌ ರೆಮ್ಯುನರೇಟಿವ್‌ ಪ್ರೈಸ್‌: FRP) ಹೆಚ್ಚಿಸುವ ನಿರ್ಧಾರವನ್ನು ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ (ಸಿಸಿಇಎ) ಸಭೆಯಲ್ಲಿ ಅನುಮೋದನೆ ದೊರೆತಿದೆ.

ಕಾರ್ಖಾನೆಗಳು (Industry) ಇದುವರೆಗೆ ಪ್ರತಿ ಕ್ವಿಂಟಲಿಗೆ ರೈತರಿಗೆ (farmers) 275 ರೂಪಾಯಿ ನೀಡುತ್ದಿದ್ದು ಅದನ್ನು 10 ರೂಪಾಯಿನಷ್ಟು ಹೆಚ್ಚಿಸಿ 285 ರೂಪಾಯಿಗೆ ತಲುಪಿಸಲಾಗಿದೆ. 1 ಕೋಟಿ ಕಬ್ಬು ಬೆಳೆಗಾರರಿಗೆ ಸಂಭಾವನೆ ದರವುನ್ನ ಪ್ರತಿ ಕ್ವಿಂಟಲ್‌ಗೆ 285 ರೂಪಾಯಿಯಂತೆ ನಿಗದಿಪಡಿಸಲಾಗಿದೆ.
ಪ್ರಮುಖವಾಗಿ ಕಬ್ಬು ಉತ್ಪಾದಿಸುವ ರಾಜ್ಯಗಳಾದ ಉತ್ತರ ಪ್ರದೇಶ, ಪಂಜಾಬ್ ಮತ್ತು ಹರಿಯಾಣದಲ್ಲಿ ತಮ್ಮದೇ ಆದ ಕಬ್ಬಿನ ಬೆಲೆಯನ್ನು ರಾಜ್ಯ ಸಲಹಾ ಬೆಲೆಗಳು(ಎಸ್‌ಎಪಿ) ಎಂದು ನಿಗದಿಪಡಿಸಲಾಗುವುದು. ಇದು ಸಾಮಾನ್ಯವಾಗಿ ಕೇಂದ್ರ ಸರ್ಕಾರದ ಬೆಲೆಗಿಂತಲೂ ಹೆಚ್ಚಾಗಿರುತ್ತದೆ. ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಕಬ್ಬು ತೀವ್ರ ಕುಸಿತದಿಂದ ದೇಶದ ಒಟ್ಟು ಸಕ್ಕರೆ ಉತ್ಪಾದನೆ ಕುಂಠಿತವಾಗಲಿದೆ ಎಂದು ಹೇಳಲಾಗಿದೆ.