News

ಕಚ್ಚಾ ಸೆಣಬಿನ ಕನಿಷ್ಠ ಬೆಂಬಲ ಬೆಲೆಗೆ (MSP) ಸಂಪುಟ ಅನುಮೋದನೆ

26 March, 2023 1:24 PM IST By: Kalmesh T
Cabinet approves Minimum Support Price (MSP) for Raw Jute for 2023 -24 season

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು 2023-24 ರ ಋತುವಿಗೆ ಕಚ್ಚಾ ಸೆಣಬಿನ ಕನಿಷ್ಠ ಬೆಂಬಲ ಬೆಲೆಗೆ (MSP) ತನ್ನ ಅನುಮೋದನೆಯನ್ನು ನೀಡಿದೆ. ಅನುಮೋದನೆಯು ಕೃಷಿ ವೆಚ್ಚಗಳು ಮತ್ತು ಬೆಲೆಗಳ ಆಯೋಗದ ಶಿಫಾರಸುಗಳನ್ನು ಆಧರಿಸಿದೆ.

PM Kisan 14th Installment release: ಪಿಎಂ ಕಿಸಾನ್‌ 14ನೇ ಕಂತಿನ ಕುರಿತು ಮಹತ್ವದ ಮಾಹಿತಿ!

2023-24 ಋತುವಿನಲ್ಲಿ ಕಚ್ಚಾ ಸೆಣಬಿನ ಕನಿಷ್ಠ ಬೆಂಬಲ ಬೆಲೆಯನ್ನು ಪ್ರತಿ ಕ್ವಿಂಟಲ್ ಗೆ ರೂ.5050/-  (ಹಿಂದಿನ ಟಿ.ಡಿ.-5 ದರ್ಜೆಗೆ ಈಗಿನ ಟಿ.ಡಿ-3 ಸಮನಾಗಿರುತ್ತದೆ) ಎಂದು ನಿಗದಿಪಡಿಸಲಾಗಿದೆ.

ಇದು ಅಖಿಲ ಭಾರತ ಸರಾಸರಿ ಉತ್ಪಾದನಾ ವೆಚ್ಚಕ್ಕಿಂತ 63.20 ಪ್ರತಿಶತದಷ್ಟು ಹೆಚ್ಚು ಲಾಭವನ್ನು ಖಚಿತಪಡಿಸುತ್ತದೆ.

ರೈತರಿಗೆ ಜೀವವಿಮೆ ಸೌಲಭ್ಯ ಜಾರಿ: ಸರ್ಕಾರವೇ ಭರಿಸಲಿದೆ ಬರೋಬ್ಬರಿ 180 ಕೋಟಿ ಪ್ರೀಮಿಯಂ!

2023-24ರ ಋತುವಿನ ಕಚ್ಚಾ ಸೆಣಬಿನ ಕನಿಷ್ಠ ಬೆಂಬಲ ಬೆಲೆಯನ್ನು (MSP) ಕೇಂದ್ರ ಸರ್ಕಾರವು 2018-19ರ ಬಜೆಟ್‌ನಲ್ಲಿ ಘೋಷಿಸಿದಂತೆ ಅಖಿಲ ಭಾರತ ಸರಾಸರಿ ಉತ್ಪಾದನಾ ವೆಚ್ಚದ ಮಟ್ಟಕ್ಕಿಂತ  ಕನಿಷ್ಠ 1.5 ಪಟ್ಟು ಹೆಚ್ಚು ನಿಗದಿಪಡಿಸುವ ತನ್ನ ತತ್ವಕ್ಕೆ ಅನುಗುಣವಾಗಿದೆ. 

ಇದು ಸೆಣಬು ಬೆಳೆಗಾರರಿಗೆ ಲಾಭದ ಅಂಶವಾಗಿ (margin of profit) ಕನಿಷ್ಠ 50 ಪ್ರತಿಶತ ಮೊತ್ತವನ್ನು ಖಾತರಿಪಡಿಸುತ್ತದೆ.

ಸೆಣಬು ಬೆಳೆಗಾರರಿಗೆ ಉತ್ತಮ ಲಾಭದಾಯಕ ಆದಾಯವನ್ನು ಖಾತ್ರಿಪಡಿಸುವ ಮತ್ತು ಗುಣಮಟ್ಟದ ಸೆಣಬಿನ ನಾರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇದು ಪ್ರಮುಖ ಮತ್ತು ಪ್ರಗತಿಪರ ಹಂತಗಳಲ್ಲಿ ಇದೂ ಕೂಡಾ ಒಂದಾಗಿದೆ.

ಆಹಾರ ಧಾನ್ಯಗಳ ಸಂಗ್ರಹಣೆ ಮತ್ತು ರೈತರ ಪ್ರಯೋಜನಕ್ಕಾಗಿ ಪಾರದರ್ಶಕ ಮತ್ತು ಏಕರೂಪದ ನೀತಿ

ಬೆಂಬಲ ಬೆಲೆ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಕೇಂದ್ರ ಸರ್ಕಾರದ ನೋಡಲ್ ಏಜೆನ್ಸಿಯಾಗಿ ಭಾರತೀಯ ಸೆಣಬು ನಿಗಮ (Jute Corporation of India) ಸಂಸ್ಥೆಯು ಮುಂದುವರಿಯುತ್ತದೆ ಮತ್ತು ಅಂತಹ ಕಾರ್ಯಾಚರಣೆಗಳಲ್ಲಿ ಸಂಸ್ಥೆಗೆ ಉಂಟಾಗುವ ನಷ್ಟವನ್ನು ಕೇಂದ್ರ ಸರ್ಕಾರವು ಸಂಪೂರ್ಣವಾಗಿ ಮರುಪಾವತಿ ಮಾಡುತ್ತದೆ.