News

ಬ್ಯಾಡಗಿ ಮೆಣಿಸಿನ ಕಾಯಿ ಪ್ರತಿ ಕ್ವಿಂಟಲಿಗೆ ನ 45,000ಕ್ಕೆ ಮಾರಾಟವಾಗಿ ದಾಖಲೆ

23 December, 2020 12:17 PM IST By:
chilli

ಈ ಬಾರಿ ಮೆಣಸಿನಕಾಯಿ ಬೆಳಗೆ  ಬಂಪರ್ ಬೆಲೆ ಬಂದಿದ್ದು ಕ್ವಿಂಟಲ್ ಗೆ 45 ಸಾವಿರ ರೂಪಾಯಿಗಳವರೆಗೆ ಮಾರಿ ಹೊಸ ದಾಖಲೆಯನ್ನು ಬರೆದಿದೆ.

 ಮೆಣಸಿನಕಾಯಿ ಎಂದರೆ ಎಲ್ಲರಿಗೂ ನೆನಪು ಬರುವುದು ಬ್ಯಾಡಗಿಯ ಮಾರುಕಟ್ಟೆ, ಈ ಮಾರುಕಟ್ಟೆಯಲ್ಲಿ ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದ ರೈತ ಹಿಂದೆಯೂ ಕೂಡ ಕ್ವಿಂಟಲ್ಗೆ 35000 ರೂಪಾಯಿಗಳವರೆಗೆ ಪಡೆದು ದಾಖಲೆಯನ್ನು ನಿರ್ಮಿಸಿದ್ದ, ಆದರೆ ಇದೀಗ ಮತ್ತೊಮ್ಮೆ ಅದೇ ರೈತ ಪ್ರತಿ ಕ್ವಿಂಟಲ್ಗೆ 45000 ರೂಪಾಯಿಗೂ ಅಧಿಕ ಬೆಲೆಯನ್ನು ಪಡೆದು ಹೊಸ ದಾಖಲೆಯನ್ನು ಸೃಷ್ಟಿಸಿದ್ದಾನೆ.

 ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದ ರೈತನಾದ ಬಸವರೆಡ್ಡಪ್ಪ ಬೂಸರೆಡ್ಡಿ 45,111 ರೂಪಾಯಿಗೆ ಮಾರಿ ಹೊಸ ದಾಖಲೆಯನ್ನು ಸೃಷ್ಟಿಸಿದ್ದಾನೆ. ಇವರು ಡಬ್ಬಿ ಮೆಣಸಿನಕಾಯಿಯನ್ನು ಬೆಳೆದಿದ್ದರು.

ಇವರ ಮೆಣಸಿನಕಾಯಿಯನ್ನು ಗಣೇಶ್ ಎಂಟರ್ಪ್ರೈಸಸ್ ಖರೀದಿಸಿದೆ. ಇದು ಬ್ಯಾಡಗಿ ಮಾರುಕಟ್ಟೆಯ ಇತಿಹಾಸದಲ್ಲೇ ಸಾರ್ವಕಾಲಿಕ ದಾರಣೆ ಯಾಗಿದೆ ಎಂದು ಎಪಿಎಂಸಿ ಅಧ್ಯಕ್ಷರು ಹೇಳಿದರು.