News

Aadhaar card link 2000ಕ್ಕೆ ರೈತರೂ ಆಧಾರ್‌ ಕಾರ್ಡ್‌ ಲಿಂಕ್‌ ಮಾಡಿಸಬೇಕು: ಸಿ.ಎಂ

05 January, 2024 2:15 PM IST By: Hitesh
ರೈತರು ಆಧಾರ್‌ ಕಾರ್ಡ್‌ ಲಿಂಕ್‌ ಮಾಡಿಸಬೇಕು : ಸಿ.ಎಂ

ರಾಜ್ಯದಲ್ಲಿ ಬರಗಾಲ ಎದುರಾಗಿದ್ದು, ಬರಗಾಲದ ತಾತ್ಕಾಲಿಕ ರಿಲೀಫ್‌ 2000 ಸಾವಿರಕ್ಕಾಗಿ ರೈತರು ಕಾಯುತ್ತಿದ್ದಾರೆ. 

ಈ ನಡುವೆ ರೈತರು 2000 ಸಾವಿರ ಪಡೆಯಲು (Aadhaar card) ಆಧಾರ್‌ ಲಿಂಕ್‌ ಮಾಡಿಸಿರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ರಾಜ್ಯದಲ್ಲಿ ಬರಗಾಲ ಎದುರಾಗಿರುವ ಹಿನ್ನೆಲೆಯಲ್ಲಿ ಬರದಿಂದ ಸಂಕಷ್ಟ ಎದುರಿಸುತ್ತಿರುವ ರೈತರಿಗೆ ಸರ್ಕಾರ ನೆರವು ನೀಡಲು ಮುಂದಾಗಿದೆ.

ಬರ ಪರಿಹಾರ ನೀಡುವ ಮೊದಲು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ನಡುವೆ ವಾದ- ವಿವಾದವೂ ಏರ್ಪಟ್ಟಿತ್ತು.

ಕರ್ನಾಟಕದಲ್ಲಿ ಎದುರಾಗಿರುವ ಬರದಿಂದ ರೈತರು ಸಂಕಷ್ಟದಲ್ಲಿ ಇದ್ದಾರೆ.

ರೈತರ ಬೆಳೆ ನಷ್ಟಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಹಲವು ಬಾರಿ ಮನವಿ ಮಾಡಿದರೂ, ಕೇಂದ್ರ ಸರ್ಕಾರ ರೈತರಿಗೆ ಪರಿಹಾರ ನೀಡಲು ಮುಂದೆ ಬಂದಿಲ್ಲ.

ಹೀಗಾಗಿ ನಾವೇ ಪರಿಹಾರ ನೀಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಹಿಂದೆ ಹೇಳಿದ್ದರು.

ಅದರ ಬೆನ್ನಲ್ಲೇ ಈಚೆಗೆ ಬೆಳಗಾವಿಯಲ್ಲಿ ನಡೆದ ವಿಧಾನಸಭೆ ಚಳಿಗಾಲದ

ಧಿವೇಶನದಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರ ಖಾತೆಗೆ (2000 thousand to farmers account) 2000

ಸಾವಿರ ರೂಪಾಯಿಯನ್ನು ಶೀಘ್ರ ಹಾಕುವುದಾಗಿ ಹೇಳಿದ್ದರು. 

ಪ್ಯಾನ್‌ಗೆ ಆಧಾರ್‌ ಜೋಡಣೆ: ಪರಿಶೀಲನೆ ಮಾಡುವುದು ಹೇಗೆ ?

ಈ ನಡುವೆ ಸರ್ಕಾರವು ಸಹ ರೈತರಿಗೆ (Drought relief for farmers) ಬರ ಪರಿಹಾರ ನೀಡಲು ಸಿದ್ಧತೆ ಪ್ರಾರಂಭಿಸಿದೆ.

ಕುರಿತು ವಿವರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜ್ಯದಲ್ಲಿ ಬರ ಪರಿಹಾರದ ಹಣ ನೀಡುವುದಕ್ಕೆ ಸ್ಟಾರ್ಟ್‌ ಮಾಡ್ತಿದ್ದೇವೆ.

ರೈತರ ಬೆಳೆ ನಷ್ಟಕ್ಕೆ ತಾತ್ಕಾಲಿಕ ಪರಿಹಾರವಾಗಿ 2 ಸಾವಿರ ರೂಪಾಯಿ ಕೊಡ್ತೀವಿ ಎಂದಿದ್ದಾರೆ. ರೈತರು ಆಧಾರ್ ಲಿಂಕ್ ಮಾಡಿದ ಮೇಲೆ

ರೈತರಿಗೆ ಬರ ಪರಿಹಾರದ 2000 ಸಾವಿರ ರೂಪಾಯಿ ಅವರ ಬ್ಯಾಂಕ್‌ ಅಕೌಂಟ್‌ ಖಾತೆಗೆ ಬೀಳಲಿದೆ.

ಆಧಾರ್ ಲಿಂಕ್ ಮಾಡದ ರೈತರು ಕೂಡಲೇ  ಆಧಾರ್‌  ಲಿಂಕ್ ಮಾಡಿಸಬೇಕು ಎಂದಿದ್ದಾರೆ.

ರೈತರಿಗೆ ಶೀಘ್ರ ಪರಿಹಾರ ಕೊಡಿ: ಬಿಜೆಪಿ ಆಗ್ರಹ  

ಬರಗಾಲದಿಂದ ರಾಜ್ಯದ ರೈತರು ಸಂಕಷ್ಟದಲ್ಲಿದ್ದು ಅವರಿಗೆ ಶೀಘ್ರ ಪರಿಹಾರ ನೀಡಬೇಕು ಎಂದು ಬಿಜೆಪಿ ಒತ್ತಾಯಿಸಿದೆ.

ರೈತರಿಗೆ 2000 ಸಾವಿರ ರೂಪಾಯಿ ಶೀಘ್ರ ಕೊಡಿ. ರಾಜ್ಯ ಸರ್ಕಾರ ಘೋಷಣೆ ಮಾಡಿರುವಂತೆ 2000 ಸಾವಿರ ರೂಪಾಯಿಯನ್ನು,

ಬರಪೀಡಿತ ತಾಲ್ಲೂಕಿನ ರೈತರಿಗೆ ಕೂಡಲೇ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.

ಬೆಳಗಾವಿ ವಿಧಾನ ಮಂಡಲ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರ ಖಾತೆಗಳಿಗೆ 2 ಸಾವಿರ

ರೂಪಾಯಿಗಳನ್ನು ತಾತ್ಕಾಲಿಕ ಪರಿಹಾರವಾಗಿ ಘೋಷಿಸಿದ್ದಾರೆ. ಆದರೆ, ಇಲ್ಲಿಯ ವರೆಗೆ ಹಣ ನೀಡಿಲ್ಲ ಎಂದು ಆರೋಪಿಸಿದ್ದಾರೆ.

ಆಧಾರ್‌ ಕಾರ್ಡ್‌ ನವೀಕರಣಕ್ಕೆ ಮತ್ತೆ ಅವಕಾಶ

ಇನ್ನು ಆಧಾರ್‌ ಕಾರ್ಡ್‌ ಅಪ್ಡೇಟ್‌ ಮಾಡುವುದಕ್ಕೆ ಸರ್ಕಾರ ಮತ್ತೆ ಚಾನ್ಸ್‌ ನೀಡಿದೆ. ಆಧಾರ್‌ ಕಾರ್ಡ್‌ ನವೀಕರಣಕ್ಕೆ ಅಂದರೆ

ಆಧಾರ್‌ ಕಾರ್ಡ್‌ ಅಪ್ಡೇಟ್‌ಗೆ ಕೇಂದ್ರ ಸರ್ಕಾರ ಇದೀಗ ಅವಕಾಶ ನೀಡಿದೆ

Aadhaar Biometrics Lock ಆಧಾರ್ ಬಯೋಮೆಟ್ರಿಕ್ಸ್ ಲಾಕ್‌ ಮಾಡುವ ಸುಲಭ ವಿಧಾನ ಇಲ್ಲಿದೆ!

ಆಧಾರ್ ಕಾರ್ಡ್ ನವೀಕರಣ ಮಾಡುವುದಕ್ಕೆ 2023 ಡಿಸೆಂಬರ್‌ 15ರ ವರೆಗೆ ಅವಕಾಶ ನೀಡಲಾಗಿತ್ತು.

ಇದಕ್ಕೆ ಸಾರ್ವಜನಿಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಆಧಾರ್‌ ಕಾರ್ಡ್‌ ಅಪ್ಡೇಟ್ಸ್‌ ಅವಕಾಶವನ್ನು ಮತ್ತೆ

ಮೂರು ತಿಂಗಳು ವಿಸ್ತರಿಸಲಾಗಿದೆ. ಇದೀಗ ನೀವು 2024ರ ಮಾರ್ಚ್‌ 14ರ ವರೆಗೆ ಆಧಾರ್‌ ಕಾರ್ಡ್‌ ಅಪ್ಡೇಟ್ಸ್‌ ಮಾಡಿಕೊಳ್ಳಲು ಅವಕಾಶ ಇರುತ್ತದೆ.

ಇದಕ್ಕಾಗಿ ನೀವು myAadhaar ಪೋರ್ಟಲ್‌ನಲ್ಲಿ ಆಧಾರ್‌ ಕಾರ್ಡ್‌ ಅಪ್ಡೇಟ್ಸ್‌ ಮಾಡಿಕೊಳ್ಳಬಹುದಾಗಿದ್ದು, ಇದು ಆನ್‌

ಲೈನ್‌ನ ಮೂಲಕ ಉಚಿತವಾಗಿದೆ.

ಆಧಾರ್‌ ಬಯೋಮೆಟ್ರಿಕ್‌ ಬಗ್ಗೆ ತಿಳಿದುಕೊಳ್ಳಿ

ಆಧಾರ್ ಬಯೋಮೆಟ್ರಿಕ್ ಲಾಕ್ ಎನ್ನುವುದು (Aadhaar biometric lock is a security tool) ಸುರಕ್ಷತಾ ಸಾಧನವಾಗಿದೆ.

ನಿಮ್ಮ ಬ್ಯಾಂಕ್ ಖಾತೆಗಳಿಗೆ ಅನಧಿಕೃತ ಪ್ರವೇಶವನ್ನು ತಪ್ಪಿಸುತ್ತದೆ.

ಈ ರೀತಿ ಮಾಡುವಲ್ಲಿ ಮಹತ್ವದ ನಿರ್ವಹಣೆಯನ್ನು ಇದು ಮಾಡುತ್ತದೆ.

ಇದರೊಂದಿಗೆ  ಬೆರಳಚ್ಚುಗಳು, ಐರಿಸ್ ಸ್ಕ್ಯಾನ್‌ (ಕಣ್ಣರೆಪ್ಪೆಯ ಸ್ಕ್ಯಾನ್‌)ಗಳು ಮತ್ತು ಮುಖದ ಗುರುತಿಸುವಿಕೆ ಡೇಟಾ ಸೇರಿದಂತೆ

ತಮ್ಮ (Their biometric information, including fingerprints, iris scans and facial recognition data) ಬಯೋಮೆಟ್ರಿಕ್ ಮಾಹಿತಿಯನ್ನು  

ರಕ್ಷಿಸಲು ಆಧಾರ್ ಕಾರ್ಡ್‌ ಹೊಂದಿರುವವರಿಗೆ ಸಹಾಯ ಮಾಡುತ್ತದೆ.

ಇತ್ತೀಚಿನ ದಿನಗಳಲ್ಲಿ ಆಧಾರ್‌ ಕಾರ್ಡ್‌ ಸ್ಕ್ಯಾಂಗಳು ಹೆಚ್ಚಾಗ್ತಿರುವ ಹಿನ್ನೆಲೆಯಲ್ಲಿ ಆಧಾರ್‌ ಕಾರ್ಡ್‌ ಲಾಕ್‌ ಮಾಡುವುದು ಮುಖ್ಯವಾಗಿದೆ. 

ಆಧಾರ್ ಬಯೋಮೆಟ್ರಿಕ್ ಲಾಕ್ ಸಖತ್‌ ಸಿಂಪಲ್‌!

ಆಧಾರ್ ಬಯೋಮೆಟ್ರಿಕ್ ಲಾಕ್ ಅನ್ನು ಆಕ್ಟಿವೇಟ್‌ ಮಾಡುವುದು ತುಂಬಾ ಸಿಂಪಲ್‌. 

ನೀವು UIDAI ವೆಬ್‌ಸೈಟ್ ಅನ್ನು ಪ್ರವೇಶಿಸಬಹುದು ಅಥವಾ mAadhaar ಅಪ್ಲಿಕೇಶನ್ ಯೂಸ್‌ ಮಾಡಿಕೊಳ್ಳಬಹುದು

Aadhaar Card Fraud: ಆಧಾರ್‌ ಕಾರ್ಡ್‌ ವಂಚನೆ: ನಿಮಗೇ ತಿಳಿಯದೆಯೇ ನಿಮ್ಮ ಖಾತೆಯಿಂದ ಹಣ ಖಾಲಿ!

ಒಂದು ಸಲ ನಿಮ್ಮ ಬಯೋಮೆಟ್ರಿಕ್ಸ್ ಲಾಕ್ ಮಾಡಿದರೆ, ನೀವು ಅದನ್ನು ಅಂದರೆ ಬಯೋಮೆಟ್ರಿಕ್ಸ್ (Biometrics Unlock) ಅನ್‌ಲಾಕ್

ಮಾಡಲು ಆಯ್ಕೆ ಮಾಡುವ ಅವಧಿಯವರೆಗೆ ಆಧಾರ್ ದೃಢೀಕರಣಕ್ಕಾಗಿ ಯಾರೂ ಇದನ್ನು ಯೂಸ್‌ ಮಾಡುವುದಕ್ಕೆ ಆಗಲ್ಲ.

ಇದರೊಂದಿಗೆ ಅದೇ ವಿಧಾನಗಳ ಮೂಲಕ ಮತ್ತೆ ನೀವು ಸ್ಟಾರ್ಟ್‌ ಮಾಡ್ಬೋದು.