ಕಲಬುರಗಿ ಜಿಲ್ಲೆಯಲ್ಲಿ ಪ್ರಸ್ತುತ ಹಿಂಗಾರು ಹಂಗಾಮು ಪ್ರಾರಂಭವಾಗಿದ್ದು, ಹಿಂಗಾರು ಬೆಳೆಗಳಾದ ಕಡಲೆ, ಶೇಂಗಾ, ಜೋಳ ಹಾಗೂ ಗೋಧಿ ಮುಂತಾದ ಬೆಳೆಗಳ ಬಿತ್ತನೆ ಕಾರ್ಯಕೈಗೊಳ್ಳಲು ರೈತರು ಭೂಮಿ ಸಿದ್ದತೆ ಮಾಡಿಕೊಂಡಿದ್ದಾರೆ ಎಂದು ಕಲಬುರಗಿ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ. ಆದ್ದರಿಂದ ರೈತ ಬಾಂದವರು ಬಿತ್ತನೆ ಬೀಜ ಖರೀದಿ ಮಾಡುವಾಗ ಎಚ್ಚರವಹಿಸಿ ಅಧಿಕೃತ ಪರವಾನಗಿ ಹೊಂದಿದ ಬೀಜ ಮಾರಾಟಗಾರರಿಂದ ಬೀಜವನ್ನು ಖರೀದಿಸಬೇಕು ಹಾಗೂ ಅವರಿಂದ ರಸೀದಿಯನ್ನು ಕಡ್ಡಾಯವಾಗಿ ಪಡೆದು ಬೆಳೆ ಕಟಾವು ಆಗುವರೆಗೆ ರಸೀದಿಯನ್ನು ರೈತರು ತಮ್ಮಲ್ಲಿ ಇಟ್ಟುಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ.
ಅಧಿಕೃತ ಪರವಾನಿಗೆ ಪಡೆದ ಅಂಗಡಿಗಳಿಂದ ರಸಗೊಬ್ಬರ ಖರೀದಿಸಲು ರೈತರಿಗೆ ಸೂಚನೆ
ಪ್ರಸ್ತುತ ಹಿಂಗಾರು ಹಂಗಾಮು ಪ್ರಾರಂಭವಾಗಲಿದ್ದು, ಕಲಬುರಗಿ ಹಾಗೂ ಕಮಲಾಪುರ ತಾಲೂಕುಗಳ ಎಲ್ಲಾ ರೈತ ಬಾಂಧವರು ಬೀಜ, ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಕೃಷಿ ಇಲಾಖೆಯಿಂದ ಅಧಿಕೃತ ಪರವಾನಿಗೆ ಪಡೆದ ಅಂಗಡಿಗಳಿAದ ಮಾತ್ರ ಖರೀದಿಸಬೇಕೆಂದು ಕಲಬುರಗಿ ಸಹಾಯಕ ಕೃಷಿ ನಿರ್ದೇಶಕ ಚಂದ್ರಕಾAತ ಜೀವಣಗಿ ಅವರು ತಿಳಿಸಿದ್ದಾರೆ.
ರೈತರು ನಕಲಿ ಬೀಜ ಮಾರಾಟಗಾರರಿಂದ ಎಚ್ಚರವಹಿಸಬೇಕು. ಬಿತ್ತನೆ ಮಾಡುವ ಮುನ್ನ ಬೀಜಗಳ ಗುಣಮಟ್ಟ ಪರಿಶೀಲಿಸಬೇಕು. ಬೀಜ ರಸಗೊಬ್ಬರ, ಕೀಟನಾಶಕ ಖರೀದಿಸಿದ ಬಿಲ್‌ಗಳನ್ನು ಜೋಪಾನವಾಗಿ ಇಟ್ಟುಕೊಳಬೇಕು. ಕೃಷಿ ಅಧಿಕಾರಿಗಳ ಮಾರ್ಗದರ್ಶನ ಪಡೆದ ಕೃಷಿ ಪರಿಕರವನ್ನು ಖರೀದಿಸಬೇಕು.
ಹೆಚ್ಚಿನ ಮಾಹಿತಿಗಾಗಿ ತಮ್ಮ ಸಮೀಪದ ರೈತ ಸಂಪರ್ಕ ಕೇಂದ್ರಗಳಿಗೆ ಹಾಗೂ ಕಲಬುರಗಿ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಂಪರ್ಕಿಸಬೇಕೆAದು ಅವರು ತಿಳಿಸಿದ್ದಾರೆ.
ಜಿಲ್ಲಾ ಮಟ್ಟದ ರೇಷ್ಮೆ ಕೃಷಿ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ
ಪ್ರಸಕ್ತ 2020-21ನೇ ಸಾಲಿನ ಪ್ರಗತಿಪರ ರೇಷ್ಮೆ ಬೆಳೆಗಾರರಿಗೆ ಮತ್ತು ರೇಷ್ಮೆ ನೂಲು ಬಿಚ್ಚಾಣಿಕೆದಾರರಿಗೆ ಇಲಾಖೆಯಿಂದ ಜಿಲ್ಲಾ ಮಟ್ಟದ ರೇಷ್ಮೆ ಕೃಷಿ ಪ್ರಶಸ್ತಿ ನೀಡಲಾಗುತ್ತಿದ್ದು, ಕೆಳಕಂಡ ಅರ್ಹತೆ ಹೊಂದಿರುವ ಮತ್ತು ಉತ್ತಮ ಪ್ರಗತಿ ಸಾಧಿಸಿರುವ ರೇಷ್ಮೆ ಬೆಳೆಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಪಂಚಾಯತ್ ರೇಷ್ಮೆ ಉಪನಿರ್ದೇಶಕರು ತಿಳಿಸಿದ್ದಾರೆ.
ಪ್ರಶಸ್ತಿಗಾಗಿ ರೇಷ್ಮೆ ಬೆಳೆಗಾರರ ಅರ್ಹತೆ ಇಂತಿದೆ. ಕನಿಷ್ಟ 1 ಎಕರೆ ಹಿಪ್ಪು ನೇರಳೆ ತೋಟ ಹಾಗೂ ಪ್ರತ್ಯೇಕ ಹುಳು ಸಾಕಾಣಿಕೆ ಮನೆ ಹೊಂದಿರಬೇಕು. 100 ಮೊಟ್ಟೆಗೆ ಸರಾಸರಿ ರೇಷ್ಮೆ ಗೂಡಿನ ಇಳುವರಿ 65 ಕೆ.ಜಿ ಹಾಗೂ 1 ಎಕರೆಗೆ ರೇಷ್ಮೆ ಗೂಡಿನ ಉತ್ಪಾದನೆ 500 ಕೆ.ಜಿ ಗಿಂತ ಕಡಿಮೆ ಇರಬಾರದು. ರೇಷ್ಮೆ ಬೆಳೆಗಾರರು ರೇಷ್ಮೆ ಪಾಸ್‌ಬುಕ್, ರೇಷ್ಮೆ ಮೊಟ್ಟೆ/ಚಾಕಿ ಖರೀದಿಸಿರುವ ಬಗ್ಗೆ ಹಾಗೂ ರೇಷ್ಮೆ ಗೂಡು ಮಾರಾಟ ಮಾಡಿರುವ ಬಗ್ಗೆ ದಾಖಲಾತಿಗಳನ್ನು ಹೊಂದಿರಬೇಕು.
ಮೇಲ್ಕಂಡ ಅರ್ಹತೆ ಹೊಂದಿರುವ ರೇಷ್ಮೆ ಬೆಳೆಗಾರರು ಸ್ಥಳೀಯ ರೇಷ್ಮೆ ವಿಸ್ತರಣಾಧಿಕಾರಿಗಳು/ ರೇಷ್ಮೆ ಸಹಾಯಕ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಿ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಪಡೆದು ಭರ್ತಿ ಮಾಡಿ 2021ರ ಸೆಪ್ಟೆಂಬರ್ 30 ರೊಳಗಾಗಿ ಅರ್ಜಿ ಸಲ್ಲಿಸಬೇಕು.