News

Government Employees ಸರ್ಕಾರಿ ನೌಕರರಿಗೆ ಬಂಪರ್‌: ಈ ನೌಕರರಿಗೆ ಶೇ 4 DA ಹೆಚ್ಚಳ!

25 October, 2023 11:47 AM IST By: Hitesh
Bumper for government employees: 4 percent DA increase for these employees!

ಕೇಂದ್ರ ಸರ್ಕಾರವು ಈ ಸರ್ಕಾರಿ ನೌಕರರಿಗೆ ಬಂಪರ್‌ ಸುದ್ದಿಯೊಂದನ್ನು ನೀಡಿದ್ದು, ಸರ್ಕಾರಿ ನೌಕರರ ಡಿಎ (DA Increase) ತುಟ್ಟಿ ಭತ್ಯೆಯನ್ನು ಹೆಚ್ಚಳ ಮಾಡಿದೆ.

ಅಕ್ಟೋಬರ್ 23, 2023ರಂದು ಭಾರತದಲ್ಲಿನ  (Railway employee)  ರೈಲ್ವೆ ಮಂಡಳಿಯು ತನ್ನ

ಉದ್ಯೋಗಿಗಳಿಗೆ ತುಟ್ಟಿ ಭತ್ಯೆ (DA Hike) (ಡಿಎ) ಕುರಿತು ಮಹತ್ವದ ಘೋಷಣೆಯೊಂದನ್ನು ಹೊರಡಿಸಿದೆ. 

ಹಣದುಬ್ಬರವನ್ನು ಸರಿದೂಗಿಸುವ ಉದ್ದೇಶದಿಂದಾಗಿ  ಉದ್ಯೋಗಿಗಳ ವೇತನದ ಅಂಶವಾದ ಡಿಎ, ಮೂಲ ವೇತನದ 42%ರಿಂದ 46%ಕ್ಕೆ ಪರಿಷ್ಕರಿಸಲಾಗಿದೆ.

ಈ ಹೆಚ್ಚಳವು ಜುಲೈ 1, 2023 ರಿಂದ ಜಾರಿಗೆ ಬರಲಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಅಲ್ಲದೇ ರೈಲ್ವೆ ಉದ್ಯೋ(Railway employee)ಗಿಗಳು ತಮ್ಮ ಮುಂಬರುವ ವೇತನಗಳಲ್ಲಿ ಈ ಹೊಂದಾಣಿಕೆಯನ್ನು ನಿರೀಕ್ಷಿಸಬಹುದಾಗಿದೆ.

ಏಳನೇ ವೇತನ ಆಯೋಗದ ಶಿಫಾರಸ್ಸು

ಈ ಕ್ರಮವನ್ನು ಏಳನೇ ವೇತನ ಆಯೋಗದ (7th Pay Commission) ಶಿಫಾರಸ್ಸಿನ ಮೇಲೆ ತೆಗೆದುಕೊಳ್ಳಲಾಗಿದೆ.

ವಿಶೇಷ ಭತ್ಯೆಗಳಂತಹ ಹೆಚ್ಚುವರಿ ಪಾವತಿಗಳನ್ನು ಹೊರತುಪಡಿಸಿ

ಸರ್ಕಾರವು ಅಂಗೀಕರಿಸಿದ 7ನೇ ಕೇಂದ್ರೀಯ ವೇತನ (7th Pay Commission)

ಆಯೋಗದ (CPC) ಶಿಫಾರಸ್ಸುಗಳ ಆಧಾರದ ಮೇಲೆ ನಿರ್ಧರಿಸಲಾದ ವೇತನವನ್ನು

ಮೂಲ ವೇತನ” ಎಂದು ನಿರ್ಧರಿಸಲಾಗುತ್ತದೆ ಎಂದು ಹೇಳಲಾಗಿದೆ. 

ಕೇಂದ್ರ ಸಚಿವ ಸಂಪುಟವು ಸರ್ಕಾರಿ ನೌಕರರಿಗೆ ಸರಿಸುಮಾರು 15,000 ಕೋಟಿ ರೂ.ಗಳ ಬೋನಸ್ ಅನ್ನು

ಅನುಮೋದಿಸಿದ ಕೆಲವೇ ದಿನಗಳಲ್ಲಿ ಈ ಘೋಷಣೆ ಹೊರಬಿದ್ದಿದೆ. ಅಲ್ಲದೇ ಇದರಲ್ಲಿ 4% DA ಹೆಚ್ಚಳ ಸೇರಿದೆ.   

ಡಿಎ (DA Hike)  ಹೆಚ್ಚಳ ಏನು ಎಂದು ನೋಡುವುದಾದರೆ. ಉದ್ಯೋಗಿಗಳಿಗೆ ಜುಲೈ ತಿಂಗಳ ಹಿಂದಿನ ಬಾಕಿ ಸಹ ಲಭ್ಯವಾಗಲಿದೆ.

ಅವರು ಈಗಾಗಲೇ ಕೆಲಸ ಮಾಡಿದ ತಿಂಗಳುಗಳ ಆದಾಯವನ್ನು ಹೆಚ್ಚಾಗಿ ಪಡೆಯಲಿದ್ದಾರೆ.

ಅಖಿಲ ಭಾರತ ರೈಲ್ವೇಮೆನ್ ಫೆಡರೇಶನ್‌ನ ಪ್ರಧಾನ ಕಾರ್ಯದರ್ಶಿ ಶಿವ ಗೋಪಾಲ್

ಮಿಶ್ರಾ ಅವರು ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ. 

ಜುಲೈನಿಂದ ಡಿಎ ಬಾಕಿ ಉಳಿದಿದೆ ಮತ್ತು ಅದನ್ನು ಪಡೆಯುವ ಸರಿಯಾದ ನಿರೀಕ್ಷೆಯನ್ನು ನೌಕರರು ಹೊಂದಿದ್ದಾರೆ ಎಂದಿದ್ದಾರೆ.

ಅಲ್ಲದೇ ದೀಪಾವಳಿ ಹಬ್ಬದ ಮೊದಲು ಈ ಪ್ರಕ್ರಿಯೆ ನಡೆದಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.  

ಭಾರತೀಯ ರೈಲ್ವೇಮೆನ್ ರಾಷ್ಟ್ರೀಯ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಂ ರಾಘವಯ್ಯ ಅವರು ರೈಲ್ವೆ ಮಂಡಳಿಯ ಸಕಾಲಿಕ ಪ್ರಕಟಣೆಯನ್ನು

ಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ, ಜನವರಿ 2020 ರಿಂದ ಜೂನ್ 2021 ರವರೆಗೆ ಡಿಎ ಪಾವತಿಗೆ ನೌಕರರ ಸಂಘಗಳಿಂದ

ನಿರಂತರ ಬೇಡಿಕೆಯಿದೆ ಅದನ್ನೂ ಮಾನ್ಯ ಮಾಡಬೇಕಿತ್ತು ಎಂದು ಆಗ್ರಹಿಸಿದ್ದಾರೆ.    

ಇನ್ನು ಜುಲೈ 1, 2023 ರಿಂದ ಜಾರಿಗೆ ಬರುವಂತೆ ರೈಲ್ವೆ ನೌಕರರಿಗೆ ತುಟ್ಟಿಭತ್ಯೆ (DA Hike) ಯನ್ನು

ಮೂಲ ವೇತನದ 42% ರಿಂದ 46% ಕ್ಕೆ ಹೆಚ್ಚಿಸುವ ರೈಲ್ವೆ ಮಂಡಳಿಯ ನಿರ್ಧಾರವನ್ನು ನೌಕರರ ಸಂಘಗಳು ಸ್ವಾಗತಿಸಿವೆ.