ಕೇಂದ್ರ ಸರ್ಕಾರ ಇದೇ ಮೊದಲ ಬಾರಿ ಪೇಪರ್ಲೆಸ್ ಬಜೆಟ್ ಮಂಡನೆ ಮಾಡುತ್ತಿದ್ದು ನಮಗೆಲ್ಲ ಹೆಮ್ಮೆಯ ವಿಷಯ.ಫೆಬ್ರವರಿ 1 ರಂದು ನಮ್ಮ ದೇಶದ ವಿತ್ತ ಸಚಿವೆಯಾದ ನಿರ್ಮಲ ಸೀತಾರಾಮನ್ ಅವರು ಮಂಡಿಸಲಿದ್ದಾರೆ.
ಬಜೆಟ್ ಪ್ರತಿಯನ್ನು ಸಂಸದರಿಗೆ ಹಾಗೂ ಜನಸಾಮಾನ್ಯರಿಗೆ ತಲುಪಿಸಲು ಅನುಕೂಲವಾಗುವ ಹಾಗೆ ಕೇಂದ್ರಸರ್ಕಾರವು ಬಜೆಟ್ ಗಾಗಿ ಒಂದು ಆಪ್ ಅನ್ನು ಬಿಡುಗಡೆ ಮಾಡಿದೆ. ಇದರ ಮೂಲಕ ನಾವು ಬಜೆಟ್ ಮಾಹಿತಿಯನ್ನು ಸುಲಭವಾಗಿ ಪಡೆಯಬಹುದು. ಕೇಂದ್ರ ಸರ್ಕಾರ ಈ ಹಿಂದೆ ಪ್ರಕಟಿಸಿದ ಅಂತ 14 ಬಜೆಟ್ನ ದಾಖಲೆಗಳು ಸಹ ಲಭ್ಯವಿದೆ. ಇದರಲ್ಲಿ ಹಣಕಾಸು ಮಸೂದೆಗಳು, ವಾರ್ಷಿಕ ಹಣಕಾಸು ದಾಖಲೆಗಳು,ಹಾಗೂ ಮತ್ತಿತರ ದಾಖಲೆಗಳು ದೊರೆಯುತ್ತವೆ.
ಈ ಬಜೆಟ್ APP ಇಂಗ್ಲಿಷ್ ಹಾಗೂ ಹಿಂದಿ ಭಾಷೆಯಲ್ಲಿ ಆಂಡ್ರಾಯ್ಡ್ ಹಾಗೂ IOS ಬಳಕೆದಾರರಿಗೆ ಲಭ್ಯವಿದೆ. ಇದನ್ನು indiabudget.gov.in ಮೂಲಕ ಸರಳವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು.