News

ನೇಮಕಾತಿ: PUC ಪಾಸ್‌ ಆದವರಿಗೆ ಗಡಿ ಭದ್ರತಾ ಪಡೆಯಲ್ಲಿ ಉದ್ಯೋಗಾವಕಾಶ

10 August, 2022 12:14 PM IST By: Maltesh
BSF Recruitment 2022 How To Apply

ಬಾರ್ಡರ್ ಸೆಕ್ಯುರಿಟಿ ಫೋರ್ಸ್ (BSF ನೇಮಕಾತಿ) ವಿವಿಧ ಖಾಲಿ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿದೆ. ಒಟ್ಟು 323 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹೆಡ್ ಕಾನ್‌ಸ್ಟೆಬಲ್ ಎಚ್‌ಸಿ ಮಿನಿಸ್ಟ್ರಿಯಲ್, ಅಸಿಸ್ಟೆಂಟ್ ಸಬ್ ಇನ್‌ಸ್ಪೆಕ್ಟರ್ ಎಎಸ್‌ಐ ಸ್ಟೆನೋಗ್ರಾಫರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ rectt.bsf.gov.in ಗೆ ಭೇಟಿ ನೀಡಬಹುದು. ಮೂಲಕ ಅರ್ಜಿ ಸಲ್ಲಿಸಬಹುದು

ಖಾಲಿ ಹುದ್ದೆಗಳ ವಿವರಗಳು

ಪೋಸ್ಟ್ - ಹೆಡ್ ಕಾನ್‌ಸ್ಟೆಬಲ್

 ಅಂತಿಮ ದಿನಾಂಕ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 6. ಆಗಸ್ಟ್ 8ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ.

 ಖಾಲಿ ಹುದ್ದೆಗಳ ಸಂಖ್ಯೆ - 312

ಪೇ ಸ್ಕೇಲ್ - 25500 - 81100/- ಹಂತ 4

ಪೋಸ್ಟ್ - ಸಹಾಯಕ ಸಬ್ ಇನ್ಸ್‌ಪೆಕ್ಟರ್ (ASI ಸ್ಟೆನೋಗ್ರಾಫರ್)

ಇದನ್ನೂ ಓದಿ:

12ನೇ ವಯಸ್ಸಿಗೆ ಗಿನ್ನೆಸ್‌ ದಾಖಲೆ ಮಾಡಿದ ರೈತನ ಮಗ..ಈ ಪ್ರಚಂಡ ಪೋರನ ಸಾಧನೆಯೇನು ಗೊತ್ತಾ..?

ಖಾಲಿ ಹುದ್ದೆಗಳ ಸಂಖ್ಯೆ - 11

ವೇತನ ಶ್ರೇಣಿ - 29200- 92300 ಹಂತ 5

ಶೈಕ್ಷಣಿಕ ಅರ್ಹತೆ

ಹೆಡ್ ಕಾನ್ಸ್‌ಟೇಬಲ್ (ಎಚ್‌ಸಿ ಮಿನಿಸ್ಟ್ರಿಯಲ್) ಹುದ್ದೆಗೆ ಅರ್ಜಿ ಸಲ್ಲಿಸುವವರು ಭಾರತದ ಯಾವುದೇ ಮಾನ್ಯತೆ ಪಡೆದ ಸಂಸ್ಥೆಯಿಂದ 10+2 ಉತ್ತೀರ್ಣರಾಗಿರಬೇಕು. ಸಹಾಯಕ ಸಬ್ ಇನ್ಸ್‌ಪೆಕ್ಟರ್ (ASI ಸ್ಟೆನೋಗ್ರಾಫರ್) ಹುದ್ದೆಗೆ ಆಕಾಂಕ್ಷಿಗಳು ಭಾರತದಲ್ಲಿ ಯಾವುದೇ ಮಾನ್ಯತೆ ಪಡೆದ ಬೋರ್ಡ್‌ನಿಂದ 10+2 ಮಧ್ಯಂತರ ಪರೀಕ್ಷೆಯನ್ನು ಶೀಘ್ರಲಿಪಿ/ಟೈಪಿಂಗ್ ಕೌಶಲ್ಯ ಪರೀಕ್ಷೆಯೊಂದಿಗೆ ಉತ್ತೀರ್ಣರಾಗಿರಬೇಕು.

ಅರ್ಜಿ ಶುಲ್ಕವನ್ನು ನೆಟ್ ಬ್ಯಾಂಕಿಂಗ್, ಕ್ರೆಡಿಟ್/ಡೆಬಿಟ್ ಕಾರ್ಡ್ ಮತ್ತು ಇ-ಚಲನ್ ಮೂಲಕ ಪಾವತಿಸಬಹುದು. ಅರ್ಜಿ ಶುಲ್ಕ ಸಾಮಾನ್ಯ, OBC ಮತ್ತು IWS ವರ್ಗದವರಿಗೆ 100 ರೂ. ಎಸ್ಸಿ, ಎಸ್ಟಿ ಯಾವುದೇ ಶುಲ್ಕವಿಲ್ಲ. ಅರ್ಜಿಯನ್ನು ವೆಬ್‌ಸೈಟ್ ಮೂಲಕ ಸಲ್ಲಿಸಬೇಕು. ಲಿಖಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ, ದಾಖಲೆ ಪರಿಶೀಲನೆ, ದೈಹಿಕ ಸಾಮರ್ಥ್ಯ ಪರೀಕ್ಷೆ ಮತ್ತು ವಿವರವಾದ ವೈದ್ಯಕೀಯ ಪರೀಕ್ಷೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.