News

ಬ್ರೇಕಿಂಗ್‌: ದೀಪಾವಳಿ ಬೆನ್ನಲ್ಲೇ ಬೆಲೆ ಏರಿಕೆಯ ಶಾಕ್‌ !

19 October, 2022 1:57 PM IST By: KJ Staff
smart phone

ದೇಶದಲ್ಲಿ ಈಗಾಗಲೇ ಬೆಲೆ ಏರಿಕೆಯಿಂದ ಜನ ತತ್ತರಿಸಿದ್ದಾರೆ. ಇದರ ನಡುವೆಯೇ ಜನರಿಗೆ ಮತ್ತೊಂದು ಬೆಲೆ ಏರಿಕೆಯ ಶಾಕ್‌ ಕಾದಿದೆ. 

ದೀಪಾವಳಿಯ ನಂತರ ಅಂದರೆ, ಅಕ್ಟೋಬರ್-ಡಿಸೆಂಬರ್ ವೇಳೆಗೆ ದೇಶದಲ್ಲಿ ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಅಂದಾಜು ಶೇಕಡಾ 5 ರಿಂದ 7ರಷ್ಟು ಹೆಚ್ಚಾಗಬಹುದು.

ರೈತರಿಗೆ ಸಿಹಿಸುದ್ದಿ: 2023-24 ರ ಎಲ್ಲಾ ಹಿಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ಕ್ಯಾಬಿನೆಟ್ ಅನುಮೋದನೆ!

ಇತ್ತೀಚಿನ ದಿನಗಳಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ನಿರಂತರ ಕುಸಿತವಾಗುತ್ತಿದೆ. ಇದು ಟೀಕೆಗೂ ಸಹ ಗುರಿಯಾಗುತ್ತಿದೆ.
ಅಲ್ಲದೇ ಡಾಲರ್‌ನ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿರುವುದರಿಂದ ಬೇಡಿಕೆಯ ಮೇಲೆ ಪರಿಣಾಮ ಬೀರುತ್ತಿದೆ.
ಅದೇ ಸಮಯದಲ್ಲಿ ಈ ವರ್ಷ ಸ್ಮಾರ್ಟ್‌ಫೋನ್‌ಗಳ ಸಾಗಣೆಯೂ ಕಡಿಮೆಯಾಗುವ ನಿರೀಕ್ಷೆ ಇದೆ. 
ಉದ್ಯಮ ವಲಯದ ಅಂದಾಜಿನ ಪ್ರಕಾರ,ಹಬ್ಬದ ಋತುವಿನ ಬೇಡಿಕೆಯನ್ನು ಉತ್ತೇಜಿಸಲು ಆಮದು ಮಾಡಲಾದ ಘಟಕಗಳ ಹೆಚ್ಚುವರಿ ವೆಚ್ಚವನ್ನು ಸ್ಮಾರ್ಟ್‌ಫೋನ್‌ ಕಂಪನಿಗಳೇ ಭರಿಸುತ್ತಿವೆ.

ರಾಜ್ಯದ ಒಟ್ಟು 50.36 ಲಕ್ಷ ರೈತರಿಗೆ ₹1007.26 ಕೋಟಿ ಸಹಾಯಧನ- ಕೃಷಿ ಸಚಿವ ಬಿ.ಸಿ.ಪಾಟೀಲ್‌

ಈಗ ಈ ವೆಚ್ಚವನ್ನು ಗ್ರಾಹಕರಿಗೆ ವರ್ಗಾಯಿಸಲು ಬಯಸುತ್ತಿವೆ. ಹೀಗಾಗಿ, ಪ್ರಸಕ್ತ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಸ್ಮಾರ್ಟ್‌ಫೋನ್‌ನ ಬೆಲೆಯೂ ಬೆಲೆ 20 ಸಾವಿರ ರೂಪಾಯಿಗೆ ಮುಟ್ಟುವ ಸಾಧ್ಯತೆ ಇದೆ.

ಅದ್ಯಾಗೂ  ಏಪ್ರಿಲ್-ಜೂನ್‌ ತ್ರೈಮಾಸಿಕದಲ್ಲಿ 17 ಸಾವಿರದ ಆಸುಪಾಸಿನಲ್ಲೇ ಇತ್ತು. ರೂಪಾಯಿ ಮೌಲ್ಯ ಕುಸಿತ ಖಂಡಿತವಾಗಿಯೂ ವೆಚ್ಚದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.  

ದೇಶದಲ್ಲಿ ನಿರಂತರವಾಗಿ ಡಾಲರ್‌ನ ಎದುರು ರುಪಾಯಿ ಮೌಲ್ಯ ಕುಸಿಯತ್ತಿರುವುದರಿಂದಾಗಿ ಮುಂದೆ ಗ್ರಾಹಕ ಸರಕುಗಳ ಬೆಲೆ ಮೇಲೆ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆ.  

ದೇಶದಲ್ಲಿ ತಯಾರಾಗುವ ಸ್ಮಾರ್ಟ್‌ಫೋನ್‌ಗಳು ಇಂದಿಗೂ ವಿದೇಶದಿಂದ ಬರುವ ಬಿಡಿ ಭಾಗಗಳ ಮೇಲೆ ಅವಲಂಬಿತವಾಗಿವೆ.

ಹೀಗಾಗಿ ಬಜೆಟ್ ಸ್ಮಾರ್ಟ್‌ಫೋನ್‌ಗಳ (ಕಡಿಮೆ ಬೆಲೆಯ ಫೋನ್‌ಗಳು) ಮೇಲೆ ಪರಿಣಾಮ ಬೀರುತ್ತದೆ. 

ಹಬ್ಬದ ಸೀಸನ್ ನಂತರ ಹೆಚ್ಚುವರಿ ವೆಚ್ಚವು ನೇರವಾಗಿ ಗ್ರಾಹಕರ ಮೇಲೆ ಪರಿಣಾಮ ಬೀರಲಿದೆ.

PM Kisan Samman Sammelan 2022: ರೈತರ ಖಾತೆಗೆ ಬರಲಿದೆ ನೇರವಾಗಿ 16,000 ಕೋಟಿ!

ಬೆಲೆಗಳ ಹೆಚ್ಚಳವು ವಾರ್ಷಿಕ ಆಧಾರದ ಮೇಲೆ ಮಾರಾಟದ ಮೇಲೆ ಪರಿಣಾಮ ಬೀರಬಹುದು. ಅಕ್ಟೋಬರ್ 9 ರಂದು ಡಾಲರ್ ಎದುರು ರೂಪಾಯಿ 82.86 ಕ್ಕೆ ಕುಸಿದಿತ್ತು.

ತಾಳೆ ಎಣ್ಣೆ ಮೇಲಿನ ಆಮದು ಸುಂಕವೂ ಹೆಚ್ಚಾಗುವ ಸಾಧ್ಯತೆ  

ಕೇಂದ್ರ ಸರ್ಕಾರವು ತಾಳೆ ಎಣ್ಣೆ ಆಮದು ಮೇಲಿನ ಸುಂಕವನ್ನೂ ಹೆಚ್ಚಿಸುವ ಸಾಧ್ಯತೆ ಇದೆ.

ಸರ್ಕಾರಿ ಮೂಲಗಳು ಮತ್ತು ಉದ್ಯಮಿಗಳಿಂದ ಪಡೆದ ಮಾಹಿತಿಯ ಪ್ರಕಾರ, ಭಾರತವು ಅತಿ ಹೆಚ್ಚು ಅಡುಗೆ ಎಣ್ಣೆ ಆಮದುದಾರ ರಾಷ್ಟ್ರ ಎನಿಸಿದೆ.

ಆದರೆ, ದೇಶೀಯವಾಗಿ ಉತ್ಪಾದನೆಯಾಗುವ ಎಣ್ಣೆ ಬೀಜಗಳಿಗೆ ಕಡಿಮೆ ಬೆಲೆ ಇದೆ. ಇದರಿಂದ ರೈತರಿಗೆ ನಷ್ಟವಾಗುತ್ತಿದೆ.  

ರೈತರಿಗೆ ಸಹಾಯ ಮಾಡುವ ಪ್ರಯತ್ನಗಳ ಭಾಗವಾಗಿ ಆಮದು ಸುಂಕ ಏರಿಕೆ ಆಗುವ ಸಾಧ್ಯತೆ ಇದೆ.  

ಈ ವರ್ಷದ ಆರಂಭದಲ್ಲಿ, ಬೆಲೆಗಳನ್ನು ನಿಯಂತ್ರಿಸಲು ಭಾರತವು ಕಚ್ಚಾ ತಾಳೆ ಎಣ್ಣೆ (CPO) ಮೇಲಿನ ಮೂಲ ಆಮದು ಸುಂಕವನ್ನು ರದ್ದುಗೊಳಿಸಿತು. 

ಇದನ್ನೂ ಓದಿರಿ: ಸಿಹಿಸುದ್ದಿ: ಮೀನುಗಾರರ ಮಕ್ಕಳಿಗೂ ರೈತ ವಿದ್ಯಾನಿಧಿ ಯೋಜನೆ, ₹50 ಕೋಟಿ ಅನುದಾನ ಮೀಸಲು!