15 ಸಾವಿರಕ್ಕೂ ಹೆಚ್ಚು ಕುರಿಗಳನ್ನು ಸಾಗಿಸುತ್ತಿದ್ದ ಹಡಗೊಂದು ಸುಡಾನ್‌ನ ಕೆಂಪು ಸಮುದ್ರದ ಸುವಾಕಿನ್ ಬಂದರಿನ ಬಳಿ ಸಮುದ್ರದಲ್ಲಿ ಮುಳುಗಿದ್ದು ಕುರಿಗಳು ನೀರು ಪಾಲಾಗಿವೆ.
ಇದನ್ನೂ ಓದಿರಿ: Breaking: ಏಷ್ಯಾದಲ್ಲೇ ಅತಿ ಉದ್ದದ ದಂತ ಹೊಂದಿದ್ದ ಆನೆ "ದಂತ ಭೋಗೇಶ್ವರ್" ಇನ್ನಿಲ್ಲ!
ಮಿತಿಮೀರಿ ಸಾವಿರಾರು ಕುರಿಗಳನ್ನು ಸಾಗಿಸುತ್ತಿದ್ದ ಹಡಗೊಂದು ಸುಡಾನ್‌ನ ಕೆಂಪು ಸಮುದ್ರದ ಸುವಾಕಿನ್ ಬಂದರಿನ ಬಳಿ ಸಮುದ್ರದಲ್ಲಿ ಮುಳುಗಿದ್ದು ಕುರಿಗಳು ನೀರು ಪಾಲಾಗಿವೆ. ಆದರೆ ಹಡಗಿನ ಸಿಬಂದಿಗಳನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸುಡಾನ್‌ನಿಂದ ಸೌದಿ ಅರೆಬಿಯಾಕ್ಕೆ ಜಾನುವಾರುಗಳನ್ನು ಸಾಗಿಸುತ್ತಿದ್ದ ಹಡಗಿಗೆ ಮಿತಿಯನ್ನು ಮೀರಿ ಪ್ರಾಣಿಗಳನ್ನು ತುಂಬಿಸಿದ್ದರಿಂದ ಭಾರ ತಾಳಲಾರದೆ ಸಮುದ್ರದಲ್ಲಿ ಮುಳುಗಿದೆ ಎಂದು ಬಂದರು ಮಂಡಳಿಯ ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
₹23 ಲಕ್ಷಕ್ಕೆ ಬೇಡಿಕೆ ಗಿಟ್ಟಿಸಿಕೊಂಡ ಅಪರೂಪದ ಮೇಕೆ! ಏನಿದರ ವಿಶೇಷತೆ ಗೊತ್ತೆ?
15,800 ಕುರಿಗಳನ್ನು ಸಾಗಿಸುತ್ತಿದ್ದ ಬದ್ 1 ಎಂಬ ಹಡಗು ರವಿವಾರ ಬೆಳಗ್ಗೆ, ಸಮುದ್ರದಲ್ಲಿ ಮುಳುಗಿದೆ. ಈ ಹಡಗು 9000 ಕುರಿಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಹಡಗಿನ ಸಿಬಂದಿಗಳನ್ನು ರಕ್ಷಿಸಲಾಗಿದೆ ಮುಳುಗಿರುವ ಹಡಗು ಬಂದರಿನ ಕಾರ್ಯಾಚರಣೆಗೆ ತೊಡಕಾಗಲಿದೆ ಅಲ್ಲದೆ ಭಾರೀ ಪ್ರಮಾಣದಲ್ಲಿ ಜಾನುವಾರುಗಳು ಸತ್ತಿರುವುದರಿಂದ ಪರಿಸರ ಮಾಲಿನ್ಯದ ಅಪಾಯವೂ ಹೆಚ್ಚಿದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
PM ಉಚಿತ ಹೊಲಿಗೆ ಯಂತ್ರ ಯೋಜನೆ; ಒಂದು ಅರ್ಜಿ ಸಲ್ಲಿಸಿ ಉಚಿತ ಹೊಲಿಗೆ ಯಂತ್ರ ಪಡೆಯಿರಿ..! ಈಗಲೇ ಅರ್ಜಿ ಸಲ್ಲಿಸಿ
ಕಳೆದುಹೋದ ಜಾನುವಾರುಗಳ ಒಟ್ಟು ಮೌಲ್ಯವು ಸುಮಾರು 14 ಸೌದಿ ರಿಯಾಲ್‌ಗಳು ($ 3.7 ಮಿಲಿಯನ್) ಎಂದು ಘಟನೆಯ ಕುರಿತು ತನಿಖೆಗೆ ಕರೆ ನೀಡಿದ ಸಂಘದ ಜಾನುವಾರು ವಿಭಾಗದ ಮುಖ್ಯಸ್ಥ ಸಲೇಹ್ ಸೆಲಿಮ್ ಹೇಳಿದ್ದಾರೆ.
ಜಾನುವಾರು ಮಾಲೀಕರು ಸುಮಾರು 700 ಕುರಿಗಳನ್ನು ಮಾತ್ರ ಚೇತರಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು "ಆದರೆ ಅವರು ತುಂಬಾ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಮತ್ತು ಅವು ದೀರ್ಘಕಾಲ ಬದುಕುತ್ತವೆ ಎಂದು ನಾವು ನಿರೀಕ್ಷಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.