News

Breaking: ಅಫ್ಘಾನಿಸ್ತಾನದಲ್ಲಿ ಭಾರೀ ಭೂಕಂಪ; 920 ಜನ ಸಾವು; ಸಾವಿರಾರು ಜನರಿಗೆ ಗಂಭೀರ ಗಾಯ..!

22 June, 2022 3:16 PM IST By: Kalmesh T
Breaking: Heavy earthquake in Afghanistan

ಅಫ್ಘಾನಿಸ್ತಾನದಲ್ಲಿ ಭಾರೀ ಭೂಕಂಪ ಸಂಭವಿಸಿದ್ದು, ಅಂದಾಜು 920ಕ್ಕೂ ಅಧಿಕ ಜನರ ಸಾವಾಗಿದೆ. 1 ಸಾವಿರಕ್ಕೂ ಅಧಿಕ ಜನರಿಗೆ ಗಾಯಗಳಾಗಿವೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿರಿ: ಬರೋಬ್ಬರಿ 300 ಕೆ.ಜಿ ತೂಕ, 13 ಅಡಿ ಉದ್ದದ ವಿಶ್ವದ ಅತಿ ದೊಡ್ಡ ಮೀನು ಪತ್ತೆ..! ಏನಿದರ ವಿಶೇಷ ಗೊತ್ತೆ?

ವಿಶ್ವದಾದ್ಯಂತ ಸದ್ದು ಮಾಡುತ್ತಿದೆ ಬರೋಬ್ಬರಿ 19 ಇಂಚಿನ ಅತಿ ಉದ್ದದ ಕಿವಿಯುಳ್ಳ ಈ ಮೇಕೆ! ಅಚ್ಚರಿಯಾದರೂ ಇದು ಸತ್ಯ..

ಅಫ್ಘಾನಿಸ್ತಾನದಲ್ಲಿ (Afghanistan) ಬುಧವಾರ ಭಾರೀ ಭೂಕಂಪ (earthquake) ಸಂಭವಿಸಿದ್ದು, 920 ಜನ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಒಂದು ಸಾವಿರಕ್ಕೂ ಅಧಿಕ ಜನ ಗಾಯಾಳುವಾಗಿದ್ದಾರೆ ಎಂದು ಹೇಳಲಾಗಿದೆ. ಭೂಕಂಪದ ಪರಿಣಾಮ ಪಾಕಿಸ್ತಾನದ (Pakistan) ಕೆಲ ಭಾಗಗಳಲ್ಲೂ ಕಂಡು ಬಂದಿದೆ. 

ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 6.1ರಷ್ಟು ದಾಖಲಾಗಿದೆ. ಯುಎಸ್ ಜಿಯೋಲಾಜಿಕಲ್ ಸರ್ವೆ (ಯುಎಸ್ಜಿಎಸ್) ಪ್ರಕಾರ, ಭೂಕಂಪದ ಕೇಂದ್ರಬಿಂದು ಅಫ್ಘಾನಿಸ್ತಾನದ ಆಗ್ನೇಯದಲ್ಲಿದೆ ಎಂದು ಹೇಳಲಾಗಿದೆ.

ಭೂಕಂಪದಲ್ಲಿ ಈವರೆಗೂ 920 ಜನರ ಸಾವು ಕಂಡಿದ್ದಾರೆ. 500 ರಿಂದ ಸಾವಿರ ಜನರು ಗಾಯಾಳುವಾಗಿರಬಹುದು ಎಂದು ವರದಿ ಮಾಡಿದೆ. ಪಕ್ಟಿಕಾ ಮತ್ತು ಖೋಸ್ಟ್ ಪ್ರಾಂತ್ಯಗಳಲ್ಲಿ ಈ ಭೂಕಂಪ ಸಂಭವಿಸಿದೆ.

ಜೂನ್ 21 ವರ್ಷದ ಅತಿ ದೊಡ್ಡ ಹಗಲು ಇರುವ ದಿನ..! ಇದರ ವಿಶೇಷತೆ ಏನು ಗೊತ್ತೆ? ಇಲ್ಲಿದೆ ಕುತೂಹಲಕರ ಸಂಗತಿ..

Audi E-rickshaw: 2023 ಹೊತ್ತಿಗೆ ಭಾರತದ ರೋಡಿಗೆ ಬರಲಿವೆ ಆಡಿ ಇ-ರಿಕ್ಷಾಗಳು..! ಇವುಗಳ ವಿಶೇಷತೆ ಏನು ಗೊತ್ತೆ?

ಭೂಕಂಪದ ಗರಿಷ್ಠ ತೀವ್ರತೆಯನ್ನು ಇನ್ನೂ ನಿರ್ಧರಿಸಲಾಗಿಲ್ಲ. ಆದಾಗ್ಯೂ, ರಿಕ್ಟರ್ ಮಾಪಕದಲ್ಲಿ 7.0 ಅಥವಾ ಅದಕ್ಕಿಂತ ಹೆಚ್ಚಿನ ತೀವ್ರತೆಯ ಭೂಕಂಪವನ್ನು ಮಧ್ಯಮ ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ. ಅಫ್ಘಾನಿಸ್ತಾನದಲ್ಲಿ ಭೂಕಂಪನವು ಇದಕ್ಕಿಂತ ಕಡಿಮೆ ತೀವ್ರತೆಯನ್ನು ಹೊಂದಿತ್ತು.

ಪಾಕಿಸ್ತಾನದ ಮಾಧ್ಯಮಗಳ ಪ್ರಕಾರ, ಇಸ್ಲಾಮಾಬಾದ್ ಸೇರಿದಂತೆ ಇತರ ನಗರಗಳಲ್ಲಿ ಭೂಕಂಪನದ ಅನುಭವವಾಗಿದೆ. ಸಾಮಾಜಿಕ ಜಾಲತಾಣಗಳಲ್ಲೂ ಭೂಕಂಪದ ಬಗ್ಗೆ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಭೂಕಂಪದ ಈ ಕಂಪನಗಳು ಕೆಲವು ಸೆಕೆಂಡುಗಳ ಕಾಲ ಅನುಭವಿಸಿದವು ಎಂದು ಜನರು ಬರೆದಿದ್ದಾರೆ.

ಆದರೆ ಇದರಿಂದ ಜನರು ಭಯಭೀತರಾಗಿ ಸುರಕ್ಷಿತ ಸ್ಥಳಗಳಿಗೆ ಓಡಲಾರಂಭಿಸಿದರು. ಕಳೆದ ಶುಕ್ರವಾರವೂ ಪಾಕಿಸ್ತಾನದಲ್ಲಿ ಕೆಲ ಭಾಗಗಳಲ್ಲಿ ಭೂಕಂಪದ ಅನುಭವವಾಗಿತ್ತು. ನಂತರ ಇಸ್ಲಾಮಾಬಾದ್, ಪೇಶಾವರ್, ರಾವಲ್ಪಿಂಡಿ ಮತ್ತು ಮುಲ್ತಾನ್‌ನಲ್ಲಿ ಈ ಕಂಪನದ ಅನುಭವವಾಗಿದೆ.

ಹಸು ಸಾಕಾಣಿಕೆಗೆ ₹60,249, ಎಮ್ಮೆ ಸಾಕಾಣಿಕೆಗೆ ₹40,783 ಸಹಾಯಧನ!

ಸಾಫ್ಟ್‌ವೇರ್ ಕೆಲಸ ಬಿಟ್ಟು ಕತ್ತೆ ಸಾಕಾಣಿಕೆ ಆರಂಭ; ಲೀ.ಹಾಲಿಗೆ 7ರಿಂದ 8 ಸಾವಿರ ಆದಾಯ!

ಈ ಕಂಪನಗಳು ಫೈಸಲಾಬಾದ್, ಅಬೋಟಾಬಾದ್, ಸ್ವಾತ್, ಬುನೇರ್, ಕೊಹತ್ ಮತ್ತು ಮಲ್ಕಂಡಿಯಲ್ಲಿಯೂ ಸಂಭವಿಸಿದೆ. ಮತ್ತೊಂದೆಡೆ, ಈ ಭೂಕಂಪದ ಪ್ರಭಾವವು 500 ಕಿಮೀ ವ್ಯಾಪ್ತಿಯೊಳಗೆ ಇತ್ತು ಎಂದು ಯುರೋಪಿಯನ್ ಮೆಡಿಟರೇನಿಯನ್ ಭೂಕಂಪನ ಕೇಂದ್ರ ತಿಳಿಸಿದೆ. ಈ ಭೂಕಂಪದಿಂದಾಗಿ ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಭಾರತದಲ್ಲಿ ಕಂಪನದ ಅನುಭವವಾಗಿದೆ.

ಸರ್ಕಾರದ ವಕ್ತಾರ ಬಿಲಾಲ್ ಕರಿಮಿ ಈ ಕುರಿತಾಗಿ ಟ್ವೀಟ್ ಮಾಡಿದ್ದು, "ದುರದೃಷ್ಟವಶಾತ್, ನಿನ್ನೆ ರಾತ್ರಿ ಪಕ್ಟಿಕಾ ಪ್ರಾಂತ್ಯದ ನಾಲ್ಕು ಜಿಲ್ಲೆಗಳಲ್ಲಿ ತೀವ್ರ ಭೂಕಂಪ ಸಂಭವಿಸಿದೆ. ಇದರಲ್ಲಿ ನಮ್ಮ ದೇಶದ ನೂರಾರು ಜನರು ಸಾವಿಗೀಡಾಗಿದ್ದು, ಗಾಯಗೊಂಡರು ಮತ್ತು ಸಾಕಷ್ಟು ಮನೆಗಳು ನಾಶವಾದವು.

ಹೆಚ್ಚಿನ ವಿನಾಶವನ್ನು ತಡೆಗಟ್ಟಲು ಈ ಪ್ರದೇಶಕ್ಕೆ ತಂಡಗಳನ್ನು ಕಳುಹಿಸಲು ನಾವು ಎಲ್ಲಾ ತುರ್ತು ಏಜೆನ್ಸಿಗಳಿಗೆ ಮನವಿ ಮಾಡುತ್ತೇವೆ' ಎಂದು ಬರೆದುಕೊಂಡಿದ್ದಾರೆ.