News

ಬ್ರೇಕಿಂಗ್‌; ಬಕ್ರೀದ್‌ನಲ್ಲಿ ಗೋಹತ್ಯೆ ಮಾಡದಂತೆ ಸರ್ಕಾರದ ಎಚ್ಚರಿಕೆ!

08 July, 2022 5:17 PM IST By: Kalmesh T
breaking; Govt warns against cow slaughter in Bakrid

ಕರ್ನಾಟಕ ಪಶುಸಂಗೋಪನಾ ಸಚಿವ ಪ್ರಭು. ಚವ್ಹಾಣ್ ಅವರು ಮುಂಬರುವ ಬಕರೀದ್‌ ಹಬ್ಬದಲ್ಲಿ ರಾಜ್ಯದಲ್ಲಿ ದನಗಳನ್ನು ವಧೆಗಾಗಿ ಮಾರಾಟ ಮಾಡುವ ಮತ್ತು ಖರೀದಿಸುವವರಿಗೆ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿರಿ: ಕೇಂದ್ರ ಸರ್ಕಾರಿ ನೌಕರರಿಗೆ ಗುಡ್‌ನ್ಯೂಸ್‌; ಜುಲೈನಲ್ಲಿ ಪಡೆಯಲಿದ್ದಾರೆ 5% ಡಿಎ ಹೆಚ್ಚಳ! ಇಲ್ಲಿದೆ ಪೂರ್ತಿ ವಿವರ

ಬಕ್ರಿದ್‌ ಆಚರಣೆಗಾಗಿ ಜಾನುವಾರುಗಳನ್ನು ಬಲಿ ನೀಡದಂತೆ ಜನರನ್ನು ಒತ್ತಾಯಿಸಿದ ಚವ್ಹಾಣ್ , ಜಾನುವಾರು ಹತ್ಯೆ ತಡೆ ಮತ್ತು ಸಂರಕ್ಷಣಾ ಕಾಯ್ದೆ, 2020 ಮತ್ತು ಗೋಹತ್ಯೆ ನಿಷೇಧ ಕಾಯ್ದೆಯನ್ನು ನೆನಪಿಸುವ ಮೂಲಕ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಪಶುಸಂಗೋಪನಾ ಇಲಾಖೆ ಮತ್ತು ಪೊಲೀಸರಿಗೆ ಕರ್ನಾಟಕ ಸರ್ಕಾರವು ಗೋವುಗಳು ಮತ್ತು ಗೋಮಾಂಸ ಸಾಗಣೆಯ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸುವಂತೆ ಆದೇಶಿಸಿದೆ.

ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಹಸು, ಎತ್ತು, ಕರು, ಒಂಟೆಗಳನ್ನು ಕೊಂದಾಗ ಜಾನುವಾರುಗಳನ್ನು ವಧೆ ಮಾಡುವುದನ್ನು ಸೂಕ್ಷ್ಮವಾಗಿ ಪರಿಶೀಲಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ.

ರಾಜ್ಯದೆಲ್ಲೆಡೆ ಭಾರೀ ಮಳೆ ಸೂಚನೆ; ಶಾಲಾ-ಕಾಲೇಜುಗಳಿಗೆ ರಜೆ!

ರಾಜ್ಯದಲ್ಲಿ ಗೋಹತ್ಯೆ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿರುವುದರಿಂದ, ಯಾವುದೇ ಕಾರಣಕ್ಕಾಗಿ ಗೋಹತ್ಯೆ ಮಾಡಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಕರ್ನಾಟಕ ಸಚಿವರು ಸಾರ್ವಜನಿಕರಿಗೆ ಹೇಳಿದರು.

"ರಾಜ್ಯದ ಎಲ್ಲಾ ಗಡಿ ಪ್ರದೇಶಗಳಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯ ಸಂಭವನೀಯ ಉಲ್ಲಂಘನೆಗಳ ಬಗ್ಗೆ ಪೊಲೀಸ್ ಇಲಾಖೆಗಳು ಮತ್ತು ಪಶುಸಂಗೋಪನಾ ಇಲಾಖೆಯ ಪ್ರತಿನಿಧಿಗಳು ನಿಗಾ ವಹಿಸಬೇಕು .

ಗೋಹತ್ಯೆ ಪತ್ತೆಯಾದರೆ, ತಕ್ಷಣವೇ ಸ್ಥಳೀಯ ಪೊಲೀಸ್ ಠಾಣೆಗೆ ಎಫ್‌ಐಆರ್ (FIR) ದಾಖಲಿಸಲಾಗುತ್ತದೆ. ಮತ್ತು ಅಪರಾಧಿಗಳು ಕಠಿಣ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ,” ಎಂದರು.

ರೈತರಿಗೆ ಗುಡ್‌ನ್ಯೂಸ್‌: ಸರ್ಕಾರದಿಂದ ಅತಿ ಹೆಚ್ಚು ಸಬ್ಸಿಡಿಯಲ್ಲಿ ದೊರೆಯಲಿವೆ ಕೃಷಿ ಡ್ರೋಣ್‌ಗಳು!

ಸಚಿವರ ಪ್ರಕಾರ, ನಿರ್ದಿಷ್ಟ ಸ್ಥಳದಿಂದ ಗೋಹತ್ಯೆ ವರದಿಯಾದರೆ, ಸ್ಥಳೀಯ ಆಡಳಿತ ಪ್ರಾಧಿಕಾರವನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಮತ್ತು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.

ಬಕರ್ ಈದ್ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಗೋಹತ್ಯೆ ತಡೆಯಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಲಯ ಮತ್ತು ನಗರದ ತಾಲ್ಲೂಕುಗಳಲ್ಲಿ ಕಾರ್ಯಪಡೆ ರಚಿಸಲಾಗಿದೆ.

ಜುಲೈ 10 ರಂದು, ಈದ್-ಉಲ್-ಅಝಾ (ಬಕ್ರೀದ್) ಆಚರಿಸಲಾಗುತ್ತದೆ. ಆದರೆ ಇದು ಚಂದ್ರನು ಗೋಚರಿಸುತ್ತದೆಯೇ ಅಥವಾ ಇಲ್ಲವೇ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.