News

ಬ್ರೇಕಿಂಗ್‌: ಜನಸಾಮಾನ್ಯರಿಗೆ ಮತ್ತೆ ಶಾಕ್‌, ಹಾಲಿನ ದರ ಹೆಚ್ಚಿಸಿದ ಅಮುಲ್‌!

15 October, 2022 5:30 PM IST By: Kalmesh T
Breaking: Another shock for the common people, Amul has increased the price of milk!

ದೀಪಾವಳಿ ಮುನ್ನವೇ ಮತ್ತೆ ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬಿಸಿ ಮುಟ್ಟಿಸಿದೆ ಅಮುಲ್‌ ಹಾಲಿನ ಕಂಪನಿ. ಎಷ್ಟು ಅಂತೀರಾ ಇದನ್ನು ಓದಿರಿ.

ATM ನಿರಾಕರಿಸಿದ 500 ರೂ.ಗಳನ್ನು ನೀಡದ ಬ್ಯಾಂಕಿಗೆ ದಂಡ! ಖರ್ಚು, ಬಡ್ಡಿ ಸೇರಿ ಗ್ರಾಹಕನಿಗೆ ₹1,02,700 ಪರಿಹಾರ!

Milk Price Hike: ದೇಶಾದ್ಯಂತ ದೀಪಾವಳಿ ಸಂಭ್ರಮ ಈಗಷ್ಟೇ ಆರಂಭವಾಗುತ್ತಲಿದೆ. ಈ ನಡುವೆಯೇ ಜನಸಾಮಾನ್ಯರಿಗೆ ಮತ್ತೊಂದು ಶಾಕ್ ಸಿಕ್ಕಿದೆ. ಖ್ಯಾತ  ಹಾಲಿನ ಕಂಪನಿಯಾದ ಅಮುಲ್ ಹಾಲಿನ ದರ ಹೆಚ್ಚಿಸುವ ಮೂಲಕ ತನ್ನ ಗ್ರಾಹಕರಿಗೆ ಶಾಕ್ ನೀಡಿದೆ.

ಮುಲ್‌ ಕಂಪನಿಯು ದೆಹಲಿಯಲ್ಲಿ ತನ್ನ ಹಾಲಿನ ದರವನ್ನು ಒಂದು ಲೀಟರ್‌ಗೆ 2 ರೂಪಾಯಿಯನ್ನು ಹೆಚ್ಚಿಸಿದೆ.

ಇಂದು ಬೆಳಗ್ಗೆ ಹಾಲು ಖರೀದಿಸಲು ಬಂದಿದ್ದ ಜನರು ಪ್ರತಿ ಲೀಟರ್ ಹಾಲಿನ ಪ್ಯಾಕೆಟ್‌ಗೆ 61 ರೂಪಾಯಿಗೆ ಬದಲಾಗಿ 63 ರೂಪಾಯಿಯನ್ನು ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಬೆಂಗಳೂರು ಜಿಕೆವಿಕೆಯಲ್ಲಿ ನವೆಂಬರ್‌ 3ರಿಂದ ಬೃಹತ್‌ ಕೃಷಿ ಮೇಳ! ಏನೇನಿರಲಿದೆ ಗೊತ್ತೆ?

Amul increased milk price: ಅಮುಲ್ ಫುಲ್ ಕ್ರೀಮ್ ಹಾಲಿನ ದರವನ್ನು ಲೀಟರ್ ಗೆ ರೂಪಾಯಿ 61 ರಿಂದ 63ಕ್ಕೆ ಏರಿಸಿದೆ ಎನ್ನಲಾಗುತ್ತಿದೆ.

ಆದರೆ, ಹಾಲಿನ ದರ ಏರಿಕೆ ಕುರಿತು ಕಂಪನಿಯಿಂದ ಯಾವುದೇ ಪ್ರಕಟಣೆ ಅಥವಾ ಪ್ರತಿಕ್ರಿಯೆ ನೀಡಿಲ್ಲ.

ಆದರೆ, ಅಮುಲ್ ನಂತರ ಇದೀಗ ಇತರೆ ಕಂಪನಿಗಳೂ ಈ ಹಬ್ಬದ ಸೀಸನ್ ನಲ್ಲಿ ಹಾಲಿನ ದರವನ್ನು ಹೆಚ್ಚಿಸುವ ಸಾಧ್ಯತೆ ಇದ್ದು, ಗ್ರಾಹಕರಲ್ಲಿ ಆತಂಕ ಮೂಡಿಸಿದೆ.

ಇಂದು ನಾಳೆ ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ “ಸಾವಯವ ಹಬ್ಬ”

Milk Price Hike: ಗುಜರಾತ್ ಕೋಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ ಲಿಮಿಟೆಡ್ ತನ್ನ ಹಾಲಿನ ಉತ್ಪನ್ನಗಳನ್ನು ಅಮುಲ್ ಬ್ರಾಂಡ್ ಹೆಸರಿನಲ್ಲಿ ಮಾರಾಟ ಮಾಡುತ್ತದೆ.

ಪ್ರಮುಖ ಹಾಲಿನ ಬ್ರ್ಯಾಂಡ್ ಗಳಾದ ಅಮುಲ್ ಮತ್ತು ಮದರ್ ಡೈರಿ ಕಳೆದ ಆಗಸ್ಟ್ ನಲ್ಲಿ ಹಾಲಿನ ದರವನ್ನು ಲೀಟರ್ ಗೆ 2 ರೂಪಾಯಿಯನ್ನು ಹೆಚ್ಚಿಸಿದೆ.

Milk Price Hike: ಈ ಹಿಂದೆ ಕೂಡ ಮಾರ್ಚ್‌ನಲ್ಲಿ ಹಾಲಿನ ದರ ಏರಿಕೆ ಮಾಡಲಾಗಿತ್ತು. ಇತ್ತೀಚೆಗೆ ಮತ್ತೆ ಬೆಲೆ ಏರಿಕೆಯಾಗಿದೆ. ಹಾಲು ಭಾರತೀಯ ಮನೆಗಳಲ್ಲಿ ವ್ಯಾಪಕವಾಗಿ ಬಳಸಲಾಗುವ ವಸ್ತುವಾಗಿದೆ.

ಹಾಗಾಗಿ ಈ ಬೆಲೆಗಳು ಸಾಮಾನ್ಯ ಜನರ ಮೇಲೆ ಪರಿಣಾಮ ಬೀರುತ್ತವೆ. ಈ ವಾರ ಎರಡೂ ಕಂಪನಿಗಳು ಹಾಲಿನ ದರವನ್ನು ಹೆಚ್ಚಿಸಿವೆ.

ಅಕ್ಟೋಬರ್ 11 ರಂದು ಮೇಧಾ ಮತ್ತು ಸುಧಾ ಡೈರಿ ಹಾಲಿನ ದರದಲ್ಲಿ ಹೆಚ್ಚಳವನ್ನು ಮಾಡಿದ್ದರವು. ಈ ಎರಡು ಕಂಪನಿಗಳ ಹಾಲಿನ ದರ ಲೀಟರ್ ಗೆ ರೂ.2 ಏರಿಕೆಯಾಗಿದೆ.