News

ನೀಲಿ – ಸೂರ್ಯ ನಗರಿ ಜೋಧಪುರ

31 December, 2020 4:52 PM IST By:
blue city

ಆತ್ಮೀಯ ಸ್ನೇಹಿತರೆ, ಜೋಧಪುರವು ರಾಜಸ್ಥಾನ ರಾಜ್ಯಕ್ಕೆ ಸೇರಿದ್ದು 233.5km2 ವಿಸ್ತೀರ್ಣಹೊಂದಿದ್ದು, 1.5ದಶ ಲಕ್ಷಕ್ಕಿಂತ ಅಧಿಕ ಜನಸಂಖ್ಯೆ ಹೊಂದಿದೆ. ರಾಜಸ್ಥಾನದ ಏರಡನೆ ಮೆಟ್ರೊಪಾಲಿಟಿಯನ್ ಸಿಟಿಯಾಗಿದೆ. ಈ ಸ್ಥಳವು ಅನೇಕ ಅರಮನೆ, ಕೋಟೆ, ದೇಗುಲಗಳನ್ನು ಹೊಂದಿದ್ದು, ಪ್ರವಾಸಿಗರಿಗೆ ನೆಚ್ಚಿನ ತಾಣವಾಗಿ ಹೊರಹೊಮ್ಮಿದೆ.

ಸೂರ್ಯನಗರಿ/ನೀಲಿನಗರಿ

ಜೋಧಪುರವು ಭಾರತದ ಮರುಭೂಮಿಗಳಲ್ಲಿ ಒಂದಾದ ಥಾರ್ಮರು ಭೂಮಿಗೆ ಹತ್ತಿರವಿರುವುದರಿಂದ, ವರ್ಷಾನುಪೂರ್ತಿ( ಮಾನ್ಸೂನ್ತಿಂಗಳನ್ನು ಹೊರತುಪಡಿಸಿ) ಬಿಸಿಲಿನ ವಾತಾವರಣ ಇರುವುದರಿಂದ ಇದನ್ನು ಸೂರ್ಯ ನಗರಿ ಎಂದು ನಾಮಂಕಿತವಾಗಿದೆ. ಈ ನಗರಕ್ಕೆ ನೀಲಿ ನಗರಿ ಎಂಬ ಹೆಸರು ಇದೆ. ಹೀಗೆ ಕರೆಯಲು ತುಂಬಾ ಕಾರಣಗಳಿವೆ. ಅವುಗಳೆಂದರೆ, ಜಾತಿ ಪದ್ಧತಿ ಅಸ್ತಿತ್ವದಲ್ಲಿದಾಗ, ಈ ನಗರದ ಬ್ರಾಹ್ಮಣರು ತಮ್ಮನ್ನುಇತರೆ ವರ್ಗಗಳಿಂದ ಗುರುತಿಸಿಕೊಳ್ಳಲು ತಮ್ಮ ಮನೆಗಳಿಗೆ ನೀಲಿಬಣ್ಣವನ್ನು ಹಚ್ಚುತ್ತಿದ್ದರು.

ಇನ್ನೊಂದು ಕಾರಣವೆಂದರೆ ದೇವತೆಗಳು ಅಮೃತವನ್ನು ಪಡೆಯುವ ಸಂದರ್ಭದಲ್ಲಿ ಹೊರಬಂದ ಹಾಲಾಹಲ ವಿಷವನ್ನು ಶಿವನು ಸೇವಿಸಿದಾಗಅವನ ಕಂಠ ನೀಲಿ ಬಣ್ಣಕ್ಕೆ ತಿರುಗುತ್ತದೆ. ಇದರ ಪ್ರತೀತಿಯಾಗಿ ಅಲ್ಲಿನ ಶಿವನ ಭಕ್ತರು ಮನೆ ಹಾಗೂ ಗೋಪುರಗಳನ್ನು ಸಿಂಗರಿಸಲು ನೀಲಿ ಬಣ್ಣವನ್ನು ಬಳಸುವ ರೂಢಿ ಇದೆ.

ಮೊದಲಿನ ಕಾಲದಲ್ಲಿ ಗೆದ್ದಲುಗಳ ಕಾರಣದಿಂದ, ಅನೇಕ ಮನೆಗಳು , ಕಟ್ಟಡಗಳು ಹಾಳಾಗುತ್ತಿದ್ದವು ಇದನ್ನು ನಿಯಂತ್ರಿಸುವ ಸಲುವಾಗಿ ಜನರು ಸುಣ್ಣದ ಜೊತೆ ತಾಮ್ರದ ಸಲ್ಫೇಟ್ಬಳಸಿ ಮನೆಗಳಿಗೆ ಹಚ್ಚುತ್ತಿದ್ದರು.

ಈ ಸ್ಥಳದಲ್ಲಿ ಯಾವಾಗಲೂ ಬಿಸಿಲಿನ ಬೇಗೆಯಿಂದ ತಾಪಮಾನ ಹೆಚ್ಚಿರುತ್ತದೆ, ವೈಜ್ಞಾನಿಕವಾಗಿ ನೀಲಿ ಬಣ್ಣವು ಶಾಖವನ್ನು ತನ್ನಲ್ಲಿ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದ್ದು, ಇದರಿಂದ ತಾಪಮಾನವು ಕಮ್ಮಿಯಾಗುತ್ತದೆ. ಇದರಿಂದಲೇ ನೀಲಿ ಬಣ್ಣವನ್ನು ತಮ್ಮ ಮನೆಗಳಿಗೆ ಬಳಸುವ ಹವ್ಯಾಸ ಇರಬಹುದು ಎಂಬುದು ಹಲವರ ಅಭಿಪ್ರಾಯ.

ಹಾಗೆಂದ ಮಾತ್ರಕ್ಕೆ ಇಡೀ ಜೋಧಪುರವೇ ನೀಲಿ ಬಣ್ಣದಿಂದ ಕೂಡಿದೆ ಎಂತಲ್ಲ, ಈ ನಗರವು ಬೆಳೆಯುತ್ತಾ ಹೋದಂತೆ ನೀಲಿಬಣ್ಣದ ಕಟ್ಟಡಗಳು, ಮನೆಗಳು ಮೆಹ್ರಾನಘರ್ ಎಂಬಕೋಟೆಯ ಹತ್ತಿರ ಕಾಣಸಿಗುತ್ತವೆ. ಈ ಕೋಟೆಯ ಮೇಲೆ ನಿಂತು ನೋಡಿದರೆ ಮನಮೋಹಕವಾದ ನೀಲಿ ಬಣ್ಣ ಎಂತವರ ನ್ನಾದರು ರೋಮಾಂಚನಗೊಳಿಸುತ್ತದೆ.

ಲೇಖಕರು: ಆತ್ಮಾನಂದ ಹೈಗರ್