News

ಧರಣಿ ಕೂತಿದ್ದ BJP ಮಹಿಳಾ ಅಭ್ಯರ್ಥಿ ಪತಿಗೆ ಹಿಗ್ಗಾಮುಗ್ಗಾ ಥಳಿತ: ವಿಡಿಯೋ

10 May, 2023 5:04 PM IST By: Maltesh

ರಾಜ್ಯದಲ್ಲಿ ಪ್ರಜಾಪ್ರಭುತ್ವದ ಹಬ್ಬ ಜೋರಾಗಿ ನಡೆಯುತ್ತಿದೆ. ಮಧ್ಯಾಹ್ನ 3 ಗಂಟೆಯವರೆಗೆ ಶೇ 55 ರಷ್ಟು ಮತದಾನ ನಡೆದಿದೆ ಎಂದು ವರದಿಗಳಾಗುತ್ತಿವೆ. ಈ ಬಾರಿ ಸಾಕಷ್ಟು ಪ್ರಮಾಣದಲ್ಲಿ ಮತದಾನ ನಡೆಸಲು ಸಕಲ ತಂತ್ರಗಳನ್ನು ರೂಪಿಸಲಾಗಿದೆ. ಇತ್ತ ಬಿಜೆಪಿ ಮಹಿಳಾ ಅಭ್ಯರ್ಥಿಯೊಬ್ಬರ ಪತಿಗೆ ಪೊಲೀಸ್‌ ಠಾಣೆ ಆವರಣದಲ್ಲಿ ಹಿಗ್ಗಮುಗ್ಗಾ ಥಳಿಸಿದ ಘಟನೆಯೊಂದು ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ವೈರಲ್‌ ಆಗುತ್ತಿದೆ.

ಏನಿದು ಪ್ರಕರಣ..?

ಈ ಘಟನೆ ಉತ್ತರ ಪ್ರದೇಶದಲ್ಲಿ ವರದಿಯಾಗಿದೆ.  ಉತ್ತರ ಪ್ರದೇಶದಲ್ಲಿ ಮುನ್ಸಿಪಲ್‌ ಕಾರ್ಪೋರೇಶನ್‌ ಚುನಾವಣೆ ನಡೆಯುತ್ತಿದೆ.  ಗೌರಿಗಂಜ್‌ನ ಮುನ್ಸಿಪಲ್‌ ಕಾರ್ಪೋರೇಶನ್‌ನ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ರಶ್ಮಿ ಸಿಂಗ್‌ ಅವರ ಪತಿ ದೀಪಕ್‌ ಸಿಂಗ್‌ ಹಲ್ಲೆಗೆ ಒಳಗಾದವರುಪೊಲೀಸ್‌ ಠಾಣೆಯಲ್ಲಿ ದೀಪಕ್‌ ಸಿಂಗ್‌ ಧರಣಿ ಕುಳಿತಿದ್ದರು  ಅವರನ್ನು  ಈ ವೇಳೆ ಎಸ್‌ಪಿ ಶಾಸಕ ರಾಕೇಶ್ ಪ್ರತಾಪ್ ಸಿಂಗ್ ಹಾಗೂ ಅವರ ಬೆಂಬಲಿಗರು ಸುತ್ತುವರೆದಿದ್ದಾರೆ. ಈ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆದಿದ್ದು  ಶಾಸಕ ರಾಕೇಶ್ ಪ್ರತಾಪ್ ಸಿಂಗ್ ಸೇರಿದಂತೆ ಅವರ ಬೆಂಬಲಿಗರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಕಳೆದ ರಾತ್ರಿಯಿಂದ ದೀಪಕ್‌ ಸಿಂಗ್‌ ಪೊಲೀಸ್‌ ಠಾಣೆಯಲ್ಲಿ ಧರಣಿ ಕುಳಿತಿದ್ದರು. ಇದರಿಂದ ಕೋಪಗೊಂಡಿದ್ದ ಎಸ್‌ಪಿ ಶಾಸಕ ರಾಕೇಶ್ ಪ್ರತಾಪ್, ಇವರು ಇಲ್ಲಿಯ ಸೂಕ್ಷ್ಮ ವಾತಾವರಣವನ್ನು ಹಾಳು ಮಾಡಲು ಹೊಂಚು ಹಾಕಿದ್ದಾರೆ ಎಂದು ದೂರಿದ್ದರು.

ಜೊತೆಗೆ ದೀಪಕ್‌ ಸಿಂಗ್‌ ತಮ್ಮ ಬೆಂಬಲಿಗೊಡನೆ ಕೂಡಿ ನನ್ನ ವಾಹನ ಹಾಗೂ ಮನೆಯ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.  ಅಷ್ಟೇ ಅಲ್ಲದೆ ದೀಪಕ್‌ ಸಿಂಗ್‌ ಗುಂಡು ಹಾರಿಸಿಕೊಂಡು ಸಾಯುವುದಾಗಿ ಸಹ ಹೇಳಿದ್ದರು ಎನ್ನಲಾಗಿದೆ. ಪೊಲೀಸ್ ಠಾಣೆಯಲ್ಲೇ ಬಿಜೆಪಿ ಅಭ್ಯರ್ಥಿಯ  ಪತಿಗೆ ಥಳಿಸಿದ ಬಳಿಕ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಬಳಿಕ ಹಲವು ಪೊಲೀಸ್ ಠಾಣೆಗಳ ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.