News

ಬಂಗಾರ ಪ್ರಿಯರಿಗೆ ಕಹಿಸುದ್ದಿ: ಚಿನ್ನದ ದರದಲ್ಲಿ ಹೆಚ್ಚಳ! ಎಷ್ಟು ತಿಳಿಯಿರಿ

27 December, 2022 4:12 PM IST By: Kalmesh T
Bitter news for gold lovers: increase in gold prices! Know how much

ಬಂಗಾರದ ಬೆಲೆಯ ಕುರಿತು ಯಾರಿಗೆ ಕುತೂಹಲ ಇರುವುದಿಲ್ಲ ಹೇಳಿ. ಕೆಲವೊಂದಿಷ್ಟು ಜನರಿಗೆ ದಿನಕ್ಕೆ ಒಮ್ಮೆಯಾದರೂ ಬಂಗಾರದ ಬೆಲೆ ಚೆಕ್‌ ಮಾಡಿದರೆ ಸಮಾಧಾನವಾಗುತ್ತದೆ. ಇಲ್ಲಿದೆ ಈ ಕುರಿತಾದ ಮಾಹಿತಿ

ವಾಟ್ಸಪ್‌ ಬಳಕೆದಾರರೇ ಎಚ್ಚರಿಕೆ: ಇನ್ಮುಂದೆ ಫ್ರೀ ಇದೆಯಂತ ವಾಟ್ಸಪ್‌ ಸ್ಟೇಟಸ್‌ನಲ್ಲಿ ಏನಬೇಕಾದ್ರು ಹಾಕುವಂತಿಲ್ಲ!

ನಿನ್ನೆ ಬಂಗಾರದ ದರ ತಟಸ್ಥವಾಗಿತ್ತು. ಇದೀಗ ಮತ್ತೆ ದರ ಹೆಚ್ಚಾಗಿದೆ. ಚಿನ್ನ, ಬೆಳ್ಳಿ, ವಜ್ರ ಇತ್ಯಾದಿ ಬೆಲೆಬಾಳುವ ಲೋಹಗಳ ಬೆಲೆ ಕಳೆದ ಕೆಲವು ದಿನಗಳಿಂದ ಸಾಕಷ್ಟು ಬದಲಾಗುತ್ತಲೆ ಇದೆ.

ಹೊಸ ವರ್ಷದ ಸಮಯದಲ್ಲಿ ಪ್ರತಿಯೊಬ್ಬರು ಬಂಗಾರದ ಆಭರಣ, ವಸ್ತುಗಳನ್ನು ತಮ್ಮ ಪ್ರೀತಿ ಪಾತ್ರರಿಗೆ ನೀಡಬಯಸುತ್ತಾರೆ.

ನಿನ್ನೆಗೆ ಹೋಲಿಸಿದರೆ ಬಂಗಾರದ ಬೆಲೆ ಇಂದು ಸ್ವಲ್ಪ ಹೆಚ್ಚಾಗಿದೆ. ಪ್ರತಿಬಾರಿಯಂತೆ ಈ ಬಾರಿಯೂ ಬಂಗಾರದ ಬೆಲೆ ಏರಿಳಿತವನ್ನು ಕಾಣುತ್ತಲೆ ಇದೆ. ಇದೀಗ ಮತ್ತೆ ಬಂಗಾರದ ಬೆಲೆಯಲ್ಲಿ ಏರಿಕೆ ಕಂಡಿದೆ.

81.35 ಕೋಟಿ ಫಲಾನುಭವಿಗಳಿಗೆ ಕೇಂದ್ರ ಸರ್ಕಾರದಿಂದ ಉಚಿತ ಆಹಾರಧಾನ್ಯ: ಸಚಿವ ಸಂಪುಟ ನಿರ್ಧಾರ

ಬೆಂಗಳೂರು, ಮಂಗಳೂರು, ಮೈಸೂರು ಸೇರಿದಂತೆ ರಾಜ್ಯ ಮತ್ತು ಹೊರರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ಬಂಗಾರದ ಮತ್ತು ಬೆಳ್ಳಿಯ ಬೆಲೆ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.

ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್‌ ಚಿನ್ನದ ದರ

10 ಗ್ರಾಂ 22 ಕ್ಯಾರೆಟ್‌ ಚಿನ್ನದ ದರ ಇಂದು ಬೆಂಗಳೂರಿನಲ್ಲಿ 50000 ರೂಪಾಯಿ ಇದೆ. ಮಂಗಳೂರು 50000 ರೂ., ಮೈಸೂರಿನಲ್ಲಿ 50000 ರೂ. ಇದೆ. ರಾಜ್ಯದ ಬಹುತೇಕ ನಗರಗಳಲ್ಲಿ ಇಂದು ಇದೇ ದರ ಇರುತ್ತದೆ.

ಆಧಾರಕಾರ್ಡ್‌ ಹೊಂದಿರುವವರಿಗೆ ಕೇಂದ್ರದಿಂದ ಮಹತ್ವದ ಮಾಹಿತಿ: ನೀವಿದನ್ನು ಪಾಲಿಸಲೇಬೇಕು!

ಚಿನ್ನದಂಗಡಿಯಿಂದ ಚಿನ್ನದಂಗಡಿಗೆ ದರದಲ್ಲಿ ವ್ಯತ್ಯಾಸವೂ ಇರಬಹುದು. ಚೆನ್ನೈನಲ್ಲಿ 50860 ರೂ. , ಮುಂಬೈನಲ್ಲಿ 49950 ರೂ. , ದೆಹಲಿಯಲ್ಲಿ50100 ರೂ. , ಕೋಲ್ಕತಾದಲ್ಲಿ49950 ರೂ.,

ಹೈದರಾಬಾದ್‌ 49950 ರೂ., , ಕೇರಳ 49950 ರೂ., ಪುಣೆ 49950 ರೂ., ಬರೋಡಾ 5000ರೂ., ಅಹಮದಾಬಾದ್‌ 50000 ರೂ.,, ಜೈಪುರ 50100 ರೂ., ಲಖನೌ 50100 ರೂ., ಕೊಯಮುತ್ತೂರು 50860 ರೂ., ಮದುರೈನಲ್ಲಿ ಚಿನ್ನದ ದರ 50860 ರೂ. ಇದೆ.