News

ಕೇರಳದಲ್ಲಿ ಹಕ್ಕಿ ಜ್ವರ ಉಲ್ಬಣ: ರಾಜ್ಯದ ಗಡಿ ಜಿಲ್ಲೆಗಳಲ್ಲಿ ಆತಂಕ

21 December, 2022 1:49 PM IST By: Hitesh
Bird flu outbreak in Kerala: Panic in border districts of the state

ಕೇರಳದ ವಿವಿಧ ಜಿಲ್ಲೆಗಳಲ್ಲಿ ಹಕ್ಕಿಜ್ವರ ಉಲ್ಬಣಿಸಿದ್ದು, ರಾಜ್ಯದ ಗಡಿ ಜಿಲ್ಲೆಯಲ್ಲೂ ಆತಂಕ ಮನೆ ಮಾಡಿದೆ.

Cylinder ಬಳಕೆದಾರರಿಗೆ ಸಿಹಿಸುದ್ದಿ: ಮುಂದಿನ ತಿಂಗಳಿಂದ ಕೇವಲ 500ಕ್ಕೆ ಸಿಗಲಿದೆ ಸಿಲಿಂಡರ್‌ !

ಕೇರಳದ ಕೋಟಯಂ ಜಿಲ್ಲೆಯ ಎರಡು ಹಳ್ಳಿಗಳಲ್ಲಿ ಹಕ್ಕಿ ಜ್ವರ ಪ್ರಕರಣಗಳು ಏಕಾಏಕಿ ಹೆಚ್ಚಾಗಿದೆ. ಹಕ್ಕಿಜ್ವರ ಪ್ರಕರಣ ಹೆಚ್ಚಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಇದನ್ನು ತಡೆಯುವ ಉದ್ದೇಶದಿಂದ ನೂರಾರು ಕೋಳಿಗಳನ್ನು ಕೊಲ್ಲಲಾಗುತ್ತಿದೆ.   

Sugarcane| ಕಬ್ಬು ಬೆಳಗಾರರಿಗೆ 21 ಕೋಟಿ ಪಾವತಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಕೋಟಯಂನ ಹಳ್ಳಿಗಳಲ್ಲಿ ಬ್ರಾಯ್ಲರ್ ಕೋಳಿಗಳಲ್ಲಿ ಕಳೆದ ವಾರ ಜ್ವರ ಕಾಣಿಸಿತ್ತು. ರೋಗದ ತೀವ್ರತೆ ಹಾಗೂ ಇದು ವ್ಯಾಪಕವಾಗಿ ಹಬ್ಬುವುದನ್ನು ತಪ್ಪಿಸುವ ಉದ್ದೇಶದಿಂದಾಗಿ ನೂರಾರು ಸಂಖ್ಯೆಯಲ್ಲಿ ಬಾತುಕೋಳಿಗಳು ಸೇರಿದಂತೆ ಹಲವು ಸಾಕು ಪಕ್ಷಿಗಳನ್ನೂ ಕೊಲ್ಲಲಾಗಿದೆ ಎಂದು ಜಿಲ್ಲಾ ಪಶು ವೈದ್ಯರು ತಿಳಿಸಿದ್ದಾರೆ.

ಕಳೆದ ಭಾನುವಾರ ರೈತರು, ಕೊಳಗಳಲ್ಲಿ ಬಾತುಕೋಳಿಗಳನ್ನು ಹಿಡಿದು ಆರೋಗ್ಯ ಅಧಿಕಾರಿಗಳ ಕೈಗೆ ಒಪ್ಪಿಸುತ್ತಿದ್ದುದು, ಆ ಕೋಳಿಗಳನ್ನು ನಾಶಪಡಿಸಲು ಗೊತ್ತುಪಡಿಸಿದ್ದ ಪ್ರದೇಶಕ್ಕೆ ಸಾಗಿಸುವುದು ಕಂಡುಬಂತು.

ಸೋಂಕು ಕಾಣಿಸಿದ ಕೊಳಗಳ ಸುತ್ತ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಕೋಳಿಗಳು ಮತ್ತು ವಿವಿಧ ಸಾಕು ಪಕ್ಷಿಗಳನ್ನು ಕೊಲ್ಲುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು. ಹೀಗಾಗಿ, ಸೂಕ್ತ ಕ್ರಮ ವಹಿಸಲಾಗುತ್ತಿದೆ ಎಂದು ಕೋಟಯಂನ ಪಶು ವೈದ್ಯಕೀಯ ಇಲಾಖೆ ಮುಖ್ಯಸ್ಥ ಶಜಿ ಪಣಿಕರ್ ಅವರು ತಿಳಿಸಿದ್ದಾರೆ.  

Bird flu outbreak in Kerala: Panic in border districts of the state

ಹಕ್ಕಿಜ್ವರ ಹರಡುವಿಕೆಯು ಕೋಳಿಗಳ ಮಾರಣಹೋಮಕ್ಕೆ ಕಾರಣವಾಗಬಹುದು. ಇದು ಮನುಷ್ಯರಿಗೂ ಹರಡುವ ಅಪಾಯವಿದ್ದು, ವ್ಯಾಪಾರಕ್ಕೂ ನಿರ್ಬಂಧ ಬೀಳುವ ಸಾಧ್ಯತೆ ಇದೆ. ಕೊರೊನಾ ಸೋಂಕು ವ್ಯಾಪಕವಾಗಿ ಕಳೆದ ಆರು ತಿಂಗಳುಗಳಿಂದಷ್ಟೇ  ಕುಕ್ಕುಟ ಉದ್ಯಮವು ಚೇತರಿಕೆ ಕಾಣುತ್ತಿದ್ದು, ಸರ್ಕಾರಕ್ಕೂ ಈ ಬೆಳವಣಿಗೆ ಆತಂಕಕ್ಕೆ ಕಾರಣವಾಗಿದೆ.