News

ರಾಜ್ಯದಲ್ಲಿ “ಪಕ್ಷಿ ಉತ್ಸವ”; ಎಲ್ಲಿ ಮತ್ತು ಯಾವಾಗ ಇಲ್ಲಿದೆ ವಿವರ!

07 December, 2022 4:46 PM IST By: Hitesh
Bird festival again in the state; Here's the details on where and when!

ರಾಜ್ಯದ ಜನರ ಬಹುಬೇಡಿಕೆಯ ಪಕ್ಷಿ ಉತ್ಸವ ಮತ್ತೆ ಪ್ರಾರಂಭವಾಗಲಿದೆ.

ಈ ಬಾರಿ ಕೊಲ್ಲೂರಿನ ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯದಲ್ಲಿ ಜನವರಿ 6ರಿಂದ 8ರವರೆಗೆ ಪಕ್ಷಿ ಉತ್ಸವ ನಡೆಯಲಿದೆ.  

ಮಲಬಾರ್ ಟ್ರೋಗನ್ ಈ ಬಾರಿ ಉತ್ಸವದ 9 ನೇ ಆವೃತ್ತಿಯ ವಿಷಯವಾಗಿದ್ದು, ಈ ಬಾರಿಯ ಉತ್ಸವವನ್ನು ಕರ್ನಾಟಕ
ಪರಿಸರ ಪ್ರವಾಸೋದ್ಯಮ ಮಂಡಳಿಯು ಆಯೋಜಿ
ಸಿದೆ.  

ಪಕ್ಷಿಗಳ ಜಾತಿಗಳು ಮತ್ತು ಅವುಗಳ ಆವಾಸಸ್ಥಾನದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ

ಪಕ್ಷಿ ಮತ್ತು ಸ್ಥಳವನ್ನು ಆಯ್ಕೆ ಮಾಡಲಾಗಿದೆ. ಪಶ್ಚಿಮ ಘಟ್ಟಗಳಿಗೆ ಹತ್ತಿರವಾಗಿದ್ದು, ಪ್ರದೇಶಗಳು ಪಕ್ಷಿಗಳಿಗೆ ಆವಾಸಸ್ಥಾನವಾಗಿದೆ.

ಪ್ರತಿ ವರ್ಷವೂ ವಿಭಿನ್ನ ವಿಷಯಗಳು ಮತ್ತು ಪಕ್ಷಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ಮಂಡಳಿಯ ಅಧ್ಯಕ್ಷ ಮದನ್ ಗೋಪಾಲ್ ತಿಳಿಸಿದ್ದಾರೆ.

ಗ್ರಾಮ ಪಂಚಾಯ್ತಿ “ರೆಸಾರ್ಟ್‌” ರಾಜಕೀಯ: ವಿಮಾನದಲ್ಲಿ ಬಂದು ವೋಟ್‌ ಮಾಡಿದ್ರು! 

ಉಡುಪಿ ಮತ್ತು ಶಿವಮೊಗ್ಗದ ನಡುವೆ ಆಯ್ಕೆ ಆಗಿರುವ ನಿರ್ದಿಷ್ಟ ಪ್ರದೇಶವು ಪಕ್ಷಿಶಾಸ್ತ್ರಜ್ಞರಿಗೆ ಅಧ್ಯಯನ ಮಾಡಲು ಅನುಕೂಲಕರವಾದ ವಾತಾವರಣವನ್ನು ನೀಡುತ್ತದೆ.

ಅಲ್ಲದೇ ಇಲ್ಲಿಗೆ ಬರುವುದರಿಂದಾಗಿ ಅನೇಕ ಪಕ್ಷಿಗಳೊಂದಿಗೆ ವಿಶಿಷ್ಟ ಅನುಭವವೂ ಲಭ್ಯವಾಗಲಿದೆ.

ಸ್ಥಳದಲ್ಲಿ ಪಕ್ಷಿಗಳಿಗಾಗಿ ಎಂಟು ಜಾಡುಗಳನ್ನು ಗುರುತಿಸಲಾಗಿದ್ದು, ಕರ್ನಾಟಕವು 500ಕ್ಕೂ ಹೆಚ್ಚು

ಜಾತಿಯ ಪಕ್ಷಿಗಳಿಗೆ ನೆಲೆಯಾಗಿದೆ ಎಂದು ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ.  

ತಮಿಳುನಾಡಿನಲ್ಲಿ ಭಾರೀ ಮಳೆ ಸಾಧ್ಯತೆ: ಹೈಅಲರ್ಟ್‌ ಘೋಷಣೆ! 

ಜೀವಿಗಳನ್ನು ಗುರುತಿಸುವ ಉದ್ದೇಶದಿಂದ ಜನವರಿಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಡಿಸೆಂಬರ್ ಹಾಗೂ ಫೆಬ್ರವರಿ ಅವಧಿಯಲ್ಲಿ ಅನೇಕ ವಲಸೆ, ಸ್ಥಳೀಯ ಪಕ್ಷಿಗಳನ್ನು ಕಾಣಬಹುದಾಗಿದೆ.

ಹುಲಿ ಕೇಂದ್ರಿತ ಪ್ರವಾಸೋದ್ಯಮವನ್ನು ವೈವಿಧ್ಯ ಮಾಡುವುದು ಇದರ ಉದ್ದೇಶವಾಗಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

Heavy Rain| ರಾಜ್ಯದ ವಿವಿಧೆಡೆ ಧಾರಾಕಾರ ಮಳೆ! 

Bird festival again in the state; Here's the details on where and when!

ಇಲ್ಲಿಯವರೆಗೆ ಮಂಡ್ಯದ ರಂಗನತಿಟ್ಟು ಪಕ್ಷಿಧಾಮ, ಮಂಗಳೂರಿನ ಪಿಲಿಕುಳ ನಿಸರ್ಗಧಾಮ, ಬೀದರ್ನ ಹಳ್ಳದಕೇರಿ

ಟ್ರೀ ಪಾರ್ಕ್,ದಾಂಡೇಲಿಯ ಕಾಳಿ ಹುಲಿ ಸಂರಕ್ಷಿತ ಪ್ರದೇಶ, ಬಳ್ಳಾರಿಯ ದರೋಜಿ ಕರಡಿಧಾಮ, ಚಿಕ್ಕಬಳ್ಳಾಪುರದ ನಂದಿ ಬೆಟ್ಟ,

ಚಾಮರಾಜನಗರ, ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ, ಮಡಿಕೇರಿಯಲ್ಲಿ ಪಕ್ಷಿ ಸಂತೆಯನ್ನು ಆಯೋಜಿಸಲಾಗುತ್ತಿತ್ತು.