News

ಭಾರತ ಸರ್ಕಾರದಿಂದ ಬಿಗ ಅನೌನ್ಸಮೆಂಟ್!! ಕನಿಷ್ಠ ಬೆಂಬಲ ಬೆಲೆ ಮುಂದುವರಿಯುದು

04 December, 2021 11:39 AM IST By: KJ Staff
MSP

ಭಾರತ ಸರ್ಕಾರದ ವತಿಯಿಂದ್ ಶುಕ್ರವಾರ ಈ ಒಂದು ಹೇಳಿಕೆ ಬಂದಿದೆ, ಭಾರತ  ಸರ್ಕಾರದಿಂದ ಒಂದು ಸಮಿತಿ ಕೂಡ ರಚನೆ ಆಗಲಿದೆ, ಈ ಒಂದು ಸಮಿತಿಯ ಕೆಲಸ ಏನಪ್ಪಾ ಅಂದ್ರೆ ಕನಿಷ್ಠ ಬೆಂಬಲ ಬೆಲೆಯನ್ನ(MSP) ಇನ್ನೂ ದೃಢತೆಯಿಂದ, ಮತ್ತು ಪಾರದರ್ಶಕತೆಯಿಂದ ನಿರ್ವಹಿಸಲು ಈ ಒಂದು ಸಮಿತಿ ಸಹಾಯ ಮಾಡುತ್ತದೆ.

Congress leader Rahul Gandhi and Union Agriculture Minister N S Tomar
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಹೇಳಿಕೆ ವಿರುದ್ಧ ಕೇಂದ್ರೀಯ ಕೃಷಿ ಮಂತ್ರಿ ನರೇಂದ್ರ ಸಿಂಗ್ ತೋಮರ್ ರವರು ಹರಿಹಾಯ್ದಿದ್ದಾರೆ, "ಮೊದಲು ಕಾಂಗ್ರೆಸ್ನ ನಾಯಕರು ರಾಹುಲ್ ಗಾಂಧಿ ಯವರ ಮಾತು ಕೇಳಲಿ ಆಮೇಲ್ ನಾವ್ ಕೇಳುತ್ತೇವೆ ಯಂದು" ತೀಕ್ಷ್ಣ ಮಾತಿನ ಬಾಣವನ್ನು ಬಿಟ್ಟಿದ್ದಾರೆ.

3/12/2021 ರಂದು ಕೇಂದ್ರೀಯ ಕೃಷಿ ಮಂತ್ರಿ ನರೇಂದ್ರ ಸಿಂಗ್ ತೋಮರ್ ರವರು ಕನಿಷ್ಠ ಬೆಂಬಲ ಬೆಲೆ (MSP) ಕುರಿತ,  "ಇದು ಹಿಂದೇನು ಇತ್ತು, ಇಂದು ಇದೆ, ಇನ್ನು ಮುಂದೆನು ಇರುತ್ತೆ" ಯಂದು ತುಂಬಾ ಸ್ಪಷ್ಟ ರೀತಿಯಲ್ಲಿ ಹೇಳಿದ್ದಾರೆ, ಕನಿಷ್ಠ ಬೆಂಬಲ ಬೆಲೆಯ(MSP) ಕುರಿತು ಪ್ರಧಾನ್ ಮಂತ್ರಿ, ನರೇಂದ್ರ ಮೋದಿ ಯವರು ಕೂಡ ತುಂಬಾ ಸ್ಪಷ್ಟ ರೀತಿಯಲ್ಲಿ ನಿರ್ಧಾರವನ್ನ ತೆಗೆದು ಕೊಂಡಿದ್ದಾರೆ ಏನದು ನಿರ್ಧಾರ?  ಕನಿಷ್ಠ ಬೆಂಬಲಿ ಬೆಲೆ ಮೇಲೆ ಒಂದು ಸಮಿತಿ ಮಾಡಿ ಕನಿಷ್ಠ ಬೆಂಬಲ ಬೆಲೆಯನ್ನ(MSP) ತುಂಬಾ ಪ್ರಭಾವಶಾಲಿಯಾಗಿ, ಮತ್ತು ಪಾರದರ್ಶಕವಾಗಿ ನಡೆಸುವ ನಿರ್ಧಾರ ದಲ್ಲಿದ್ದಾರೆ. ಮತ್ತು ಕನಿಷ್ಠ ಬೆಂಬಲ ಬೆಲೆ ಯಲ್ಲಿ ವೃದ್ಧಿ ಕೂಡ ಆಗಿದೆ.

ಗೊಬ್ಬರ ಕೊರತೆಯ ಕುರಿತು ಕೂಡ ಕೇಂದ್ರೀಯ ಕೃಷಿ ಮಂತ್ರಿ ನರೇಂದ್ರ ಸಿಂಗ್ ತೋಮರ್ ರವರ ಹೇಳಿಕೆ ಸ್ಪಟಿಕ ದಂತೆ ಸ್ಪಷ್ಟ ವಾಗಿದೆ ಅಂದರೆ, "ರೈತರಿಗೆ ಗೊಬ್ಬರ ಒಳ್ಳೆಯ ಪ್ರಮಾಣ ದಲ್ಲಿ ಸಿಗುತ್ತಿದೆ ಮತ್ತು ಯಾವುದೇ ಕುಂದು ಕೊರತೆ ಇಲ್ಲ ವೆಂದು ಹೇಳಿದ್ದಾರೆ.