ಕರ್ನಾಟಕದಲ್ಲಿ ಹೆಚ್ಚು ಮನೆಮಾತಾಗಿದ್ದ ಭಾಗ್ಯಲಕ್ಷ್ಮೀ ಯೋಜನೆ ಇನ್ನೂ ಮುಂದೆ ಸುಕನ್ಯಾ ಸಮೃದ್ದಿಯಾಗಿ ಬದಲಾಗಿದೆ. ಭಾಗ್ಯಲಕ್ಷ್ಮೀ ಯೋಜನೆಯನ್ನು ಬಿ.ಎಸ್. ಯಡಿಯೂರಪ್ಪ 2006-07 ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದಿದ್ದರು. ಈ ಯೋಜನೆ ಬಹಳಷ್ಟು ಹೆಸರೂ ಪಡೆದಿತ್ತು. ಆದರೆ ಈಗ ಈ ಯೋಜನು ಸುಕನ್ಯಾ ಸಮೃದ್ದಿಯಾಗಿದೆ ಬದಲಾಗಿದೆ.
ಭಾಗ್ಯಲಕ್ಷ್ಮೀ ಯೋಜನೆ ಅಡಿಯಲ್ಲಿ ಸರ್ಕಾರವು ಒಟ್ಟಿಗೆ 19300 ರುಪಾಯಿ ಪಾವತಿಸುತ್ತಿತ್ತು. ಬಾಂಡ್ ಮೆಚ್ಯುರಿಟಿ ಆದಮೇಲೆ 1 ಲಕ್ಷ ರೂಪಾಯಿ ಹಣ ನೀಡುವ ಷರತ್ತು ಇತ್ತು. ಆದರೆ ಈ ಷರತ್ತಿಗೆ ಎಲ್‌ಐಸಿ ತಕರಾರು ಮಾಡಲಾರಂಭಿಸಿತ್ತು. ಹೀಗಾಗಿ ಭಾಗ್ಯ ಲಕ್ಷ್ಮೀ ಯೋಜನೆಯನ್ನು ಸುಕನ್ಯಾ ಸಮೃದ್ದಿಯನ್ನಾಗಿ ಬದಲಾವಣೆ ಮಾಡಿ ಅಂಚೆ ಇಲಾಖೆಗೆ ವರ್ಗಾಯಿಸಲಾಗಿದೆ.
18 ವರ್ಷದ ಬದಲು 21 ವರ್ಷ ಕಾಯಬೇಕು:
ಭಾಗ್ಯಲಕ್ಷ್ಮಿ ಯೋಜನೆಯಲ್ಲಿ ಬಾಂಡ್ ಪಡೆದವರಿಗೆ 18 ವರ್ಷಕ್ಕೇ ಮೆಚ್ಯೂರಿಟಿ ಹಣ ಸಿಗುತ್ತಿತ್ತು. ಇನ್ನು ಮುಂದೆ 21 ವರ್ಷದವರೆಗೆ ಕಾಯಬೇಕು. ಭಾಗ್ಯಲಕ್ಷ್ಮೀ ಯೋಜನೆಯನ್ನು ಈಗ ಅಂಚೆ ಇಲಾಖೆಗೆ ಒಪ್ಪಿಸಿದ್ದರಿಂದ ಆಗಸ್ಟ್ ತಿಂಗಳಿನಿಂದ ಅಂಚೆ ಇಲಾಖೆಯು ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ ಫಲಾನುಭವಿಗಳ ನೋಂದಣಿ ಪ್ರಕ್ರಿಯೆ ಆರಂಭಿಸಲಿದೆ.
ಪ್ರತಿ ಮಗುವಿಗೆ 1 ಲಕ್ಷ ಬದಲು 1.27 ಮೆಚ್ಯುರಿಟಿ ಹಣ:
ಈಗ ಪ್ರತಿ ಮಗುವಿಗೆ 1 ಲಕ್ಷ ರೂಪಾಯಿ ಬದಲಿಗೆ 1.27 ಲಕ್ಷ ರೂಪಾಯಿ ಬಾಂಡ್ ಮೆಚ್ಯುರಿಯಿ ಹಣ ಸಿಗಲಿದೆ. ಈಗಾಗಲೇ ಬಾಂಡ್ ಮಾಡಿಸಿದವರಿಗೆ ಎಲ್‌ಐಸಿಯಿಂದಲೇ ಹಣ ಬರಲಿದೆ.. ಸುಕನ್ಯಾ ಸಮೃದ್ಧಿ ಯೋಜನೆ ಅಡಿ ರಾಜ್ಯ ಸರ್ಕಾರ ಪ್ರತಿವರ್ಷ ಮಗುವಿಗೆ 3 ಸಾವಿರ ರೂಪಾಯಿಯಂತೆ 15 ವರ್ಷ 45 ಸಾವಿರ ರೂಪಾಯಿ ಪಾವತಿಸುವುದರಿಂದ ಇನ್ನೂ ಮುಂದೆ ಪ್ರತಿ ಫಲಾನುಭವಿ ಮಗುವಿಗೆ 21 ವರ್ಷ ತುಂಬಿದಾಗ 1.27 ಲಕ್ಷ ರೂಪಾಯಿ ಹಣ ಸಿಗಲಿದೆ.
ಶಿಕ್ಷಣಕ್ಕೆ ಹಣ ಪಡಯಲು ಅವಕಾಶ:
ಭಾಗ್ಯಲಕ್ಷ್ಮಿ ಯೋಜನೆಯಲ್ಲಿ ಫಲಾನುಭವಿಗಳಿಗೆ ಎಸ್‌ಎಸ್‌ಎಲ್‌ಸಿ/ ಪಿಯುಸಿ ಓದಲು ಹಣ ಪಡೆಯಲಾಗುತ್ತಿರಲಿಲ್ಲ. ಆದರೆ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಶಿಕ್ಷಣಕ್ಕೆ ಹಣ ಬೇಕಿದ್ದಲ್ಲಿ ಪಡೆಯುವ ಅವಕಾಶವಿದೆ. ಹಿಂದಿನ ಬಿಪಿಎಲ್ ಕುಟುಂಬಗಳಲ್ಲಿ ಹೆಣ್ಣು ಮಗು ಜನಿಸಿದ 2 ವರ್ಷದೊಳಗೆ ಬಾಂಡ್ ಮಾಡಿಸಬೇಕಿತ್ತು. ಅದೇ ಷರತ್ತುಗಳು ಸುಕನ್ಯಾ ಸಮೃದ್ಧಿಯಲ್ಲೂ ಅನ್ವಯವಾಗುತ್ತವೆ. ಪೋಷಕರು ನಿಧನರಾದರೆ ವಿಮೆ ಸೌಲಭ್ಯ ಇರುವುದಿಲ್ಲ. ಎಲ್‌ಐಸಿಯಲ್ಲಿ ವಿಮೆ ಸೌಲಭ್ಯ ಇತ್ತು. ಎರಡು ಯೋಜನೆಗಳಲ್ಲಿ ಮಗು ಮೃತಪಟ್ಟಲ್ಲಿ ಸರ್ಕಾರಕ್ಕೆ ಹಣ ವಾಪಸ್ ಹೋಗಲಿದೆ.