News

Sandalwood ಶ್ರೀಗಂಧ ಬೆಳೆವವರಿಗೆ ಕವಿತಾ ಮಿಶ್ರಾ ಬೆಸ್ಟ್‌ ಟಿಪ್ಸ್‌!

21 December, 2023 3:59 PM IST By: Hitesh
ಶ್ರೀಗಂಧ ಬೆಳೆವವರಿಗೆ ಗುಡ್‌ನ್ಯೂಸ್‌

ಶ್ರೀಗಂಧ ಬೆಳೆಯುವವರಿಗೆ ಒಳ್ಳೆಯ ಹಾಗೂ ಕೈತುಂಬಾ ಆದಾಯವಿದೆ.

ಇದೀಗ ರಾಜ್ಯ ಸರ್ಕಾರವೂ ಸಹ ಶ್ರೀಗಂಧ ಬೆಳೆಯುವವರಿಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡಿದೆ.  

ಕವಿತಾ ಮಿಶ್ರಾ ಅವರು ಶ್ರೀಗಂಧವನ್ನು ಬೆಳೆಯುವ ಮೂಲಕ ಕೋಟ್ಯಾಂತರ ರೂಪಾಯಿ ಆದಾಯವನ್ನು ಗಳಿಸುತ್ತಿದ್ದಾರೆ.

ಅವರು ಶ್ರೀಗಂಧವನ್ನು ಬೆಳೆಯುವವರಿಗೆ ಅತ್ಯುತ್ತಮವಾದ ಸಲಹೆ ನೀಡುತ್ತಿದ್ದಾರೆ.

ಶ್ರೀಗಂಧದ ಸಸಿಗಳನ್ನು ಸುದೀರ್ಘ ಅವಧಿಗೆ ದೃಷ್ಟಿಯಲ್ಲಿ ಇರಿಸಿಕೊಳ್ಳಬೇಕು.

ಇದರಿಂದ ಶ್ರೀಗಂಧ ಬೆಳೆ ಬೆಳೆದರೆ ಸುದೀರ್ಘ ಅವಧಿಯಲ್ಲಿ ಉತ್ತಮ ಆದಾಯ ಸಿಗಲಿದೆ.   

Good News ಶ್ರೀಗಂಧ ಬೆಳೆವ ರೈತರಿಗೆ ಕರ್ನಾಟಕ ಸರ್ಕಾರದಿಂದ ಗುಡ್‌ನ್ಯೂಸ್‌! 

ಶ್ರೀಗಂಧ ಕರ್ನಾಟಕದ ಹೊನ್ನ ಕಳಸ

ಕವಿತಾ ಮಿಶ್ರಾ ಅವರು ಶ್ರೀಗಂಧದ ಬೆಳೆಯ ಮೂಲಕ ದೇಶ – ವಿದೇಶದಲ್ಲಿ ಖ್ಯಾತಿ ಗಳಿಸಿದ್ದಾರೆ.

ಶ್ರೀಗಂಧದ ಮರ ಹಾಗೂ ಅದರ ಖ್ಯಾತಿಯ ಬಗ್ಗೆ ಕವಿತಾ ಮಿಶ್ರಾ ಅವರು ಮಹತ್ವದ ಮಾಹಿತಿ ನೀಡುತ್ತಾರೆ.

ಕರ್ನಾಟಕದ ಶ್ರೀಗಂಧದ ಮರಕ್ಕೆ ದೇಶ ವಿದೇಶದಲ್ಲಿ ಅತ್ಯಂತ ಹೆಚ್ಚು ಬೇಡಿಕೆ ಇದೆ.

45ರಿಂದ 50 ವರ್ಷ ಆದ ಮೇಲೆ ರೈತರಿಗೂ ವಿಶ್ರಾಂತಿ ಬೇಕಾಗುತ್ತದೆ.

ರೈತರು ಸಹ ಈ ರೀತಿ ದೀರ್ಘಕಾಲದ ಯೋಜನೆ ರೂಪಿಸಿಕೊಳ್ಳಬೇಕು.

ಶ್ರೀಗಂಧವನ್ನು ವೈಜ್ಞಾನಿಕ ಹಾಗೂ ತಂತ್ರಜ್ಞಾನ ಅಳವಡಿಸಿಕೊಂಡು ಬೆಳೆಯಬಹುದು.

ಆಧುನಿಕ ತಂತ್ರಜ್ಞಾನ ಸಾಕಷ್ಟು ಬಂದಿದೆ. ರೈತರು ಇದರಿಂದ ಲಾಭವನ್ನು ಪಡೆಯಬಹುದು.

ಮುಂದಾಲೋಚನೆ ಮಾಡಿಕೊಂಡು ಶ್ರೀಗಂಧವನ್ನು ಬೆಳೆಯಬೇಕು.

ಒಂದೇ ಎಕರೆಯಾದರೂ ಯೋಜನೆ ರೂಪಿಸಿಕೊಂಡರೆ ಕೋಟಿಗಳಲ್ಲಿ ಮಾತನಾಡಬಹುದು.

ರೈತರೂ ಸಹ ಆರ್ಥಿಕವಾಗಿ ಸದೃಢವಾಗಬಹುದು ಎನ್ನುತ್ತಾರೆ ಅವರು.

ಶ್ರೀಗಂಧದ: ಸರ್ಕಾರದ ಗುಡ್‌ನ್ಯೂಸ್‌

ಶ್ರೀಗಂಧದ ಬೆಳೆಯುವವರಿಗೆ ಸರ್ಕಾರವೂ ಗುಡ್‌ನ್ಯೂಸ್‌ ನೀಡಿದೆ.

ಕರ್ನಾಟಕದ ಶ್ರೀಗಂಧದ ಮರವು ದೇಶದಲ್ಲೇ ಅತ್ಯುತ್ತಮ ಖ್ಯಾತಿ ಗಳಿಸಿದೆ.

ಈಗ ಶ್ರೀಗಂಧದ (sandalwood farmers) ಮರವನ್ನು ಬೆಳೆಯುವ ರೈತರಿಗೆ ಕರ್ನಾಟಕ ಸರ್ಕಾರವು ಸಿಹಿಸುದ್ದಿ ನೀಡಿದೆ.

ಈ ಸಂಬಂಧ ಮಾತನಾಡಿರುವ ಸಚಿವ ಎಂ.ಬಿ ಪಾಟೀಲ (MB Patil) ಅವರು, ಶ್ರೀಗಂಧದ ನಾಡು ಕನ್ನಡ ನಾಡಿನ

ಘತವೈಭವ ಮರಳಿಸಲಿದ್ದೇವೆ. ಇದಕ್ಕೆ ಸರ್ಕಾರ ಕಾರ್ಯ ಯೋಜನೆ ರೂಪಿಸಿಕೊಳ್ಳುತ್ತಿದೆ ಎಂದಿದ್ದಾರೆ. 

ಸ್ಯಾಂಡಲ್‌ ವುಡ್‌ ಮುಖ್ಯಾಂಶಗಳು

* ಕರ್ನಾಟಕದಲ್ಲಿ ಶ್ರೀಗಂಧದ (sandalwood) ಘತವೈಭವವನ್ನು ಮರುಕಳಿಸುವ ಗುರಿ.

* ಮುಂದಿನ 5 ವರ್ಷಗಳ ಅವಧಿಯಲ್ಲಿ 10,000 ದಿಂದ 15,000 ಎಕರೆಗಳಲ್ಲಿ

ಶ್ರೀಗಂಧದ (sandalwood) ಮರಗಳನ್ನು ಬೆಳೆಸುವ ಯೋಜನೆ.

* ಇದರಿಂದ ಶ್ರೀಗಂಧದ ರೈತರಿಗೆ ಆಕರ್ಷಕ ಆದಾಯ ಸಿಗಲಿದೆ ಎಂದಿದ್ದಾರೆ.