News

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅನ್ನದಾತರಿಂದ ಬೆಳಗಾವಿ ಚಲೋ

22 December, 2022 11:10 AM IST By: Hitesh
Belagavi Chalo from Annadat asking for fulfillment of Various Demands

ರೈತ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಡಿಸೆಂಬರ್‌ 27ರಂದು ಬೆಳಗಾವಿ ಚಲೋ ನಡೆಸಲು ಅಖಿಲ ಭಾರತ ಕಿಸಾನ ಸಭಾ ಕರ್ನಾಟಕ ರಾಜ್ಯ ಮಂಡಳಿ ಮುಂದಾಗಿದೆ.  

ಕೃಷಿ ಪಂಪ್ ಸೆಟ್‌ಗಳಿಗಾಗಿ ಅಕ್ರಮ ಸಕ್ರಮವೂ ಸೇರಿದಂತೆ ಅರ್ಜಿ ಸಲ್ಲಿಸಿದ ಎಲ್ಲಾ ರೈತರಿಗೂ ಕ್ರಮಬದ್ಧ ವಿದ್ಯುತ್ ಸಂಪರ್ಕ, ಉತ್ತಮ ಹಾಗೂ ಸಮರ್ಪಕ ಟಿ.ಸಿ ಅಳವಡಿಸಬೇಕು. 20 ವರ್ಷದಿಂದ ನಿಲ್ಲಿಸಿರುವ ಠೇವಣಿ ಆಧಾರಿತ ಸಾಮಾನ್ಯ ವಿದ್ಯುತ್ ಸಂಪರ್ಕ ಪುನರ್ ಪ್ರಾರಂಭಿಸಿ ರೈತರಿಗೆ ಅವಮಾನಕಾರಕವಾಗಿರುವ ಅಕ್ರಮ ಸಕ್ರಮ ಪದ್ಧತಿಯನ್ನು ರದ್ದುಗೊಳಿಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಲಾಗಿದೆ.

ಅಲ್ಲದೇ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವ ಫಾರಂ-50, 53 ಮತ್ತು ವಿಶೇಷವಾಗಿ ತೋಗರಿ ಬೆಳೆ, (ನೇಟೆ ರೋಗ) ಹಾನಿ ಪರಿಹಾರ ಹಾಗೂ ಬೆಳೆ ವಿಮೆ, ಜಾನುವಾರು ಕಳೆದುಕೊಂಡ ರೈತರಿಗೆ ಪರಿಹಾರ ನೀಡಬೇಕು, ಎಂಎಸ್‌ಪಿ ಬೆಲೆ ನಿಗದಿಗಾಗಿ ಮತ್ತು ಕಬ್ಬಿಗೆ ಸಕ್ಕರೆ ಇಳುವರಿಕೆ ಆಧಾರಿತ ಬೆಲೆ ನಿಗದಿ ಮಾಡಬೇಕು.

ಕರ್ನಾಟಕ ರಾಜ್ಯದ ಬಹು ಭಾಗದಲ್ಲಿ ಬ್ರಿಡ್ಜ್ ಕಮ್ ಬ್ಯಾರೇಜ್‌ ಹಾಗೂ ಕೇಟೀ ವೈಯರ್‌ ನಿರ್ಮಿಸಿ ಕೃಷಿಗೆ ನೀರಾವರಿ ಅನುಕೂಲ ಮಾಡಿಕೊಡಬೇಕು ಎನ್ನುವುದು ಪ್ರಮುಖ ಬೇಡಿಕೆಗಳಾಗಿವೆ.  

Belagavi Chalo from Annadat asking for fulfillment of Various Demands

ಎಂದು  ಅಖಿಲ ಭಾರತ ಕಿಸಾನ ಸಭಾ ಕರ್ನಾಟಕ ರಾಜ್ಯ ಮಂಡಳಿ ಪ್ರಕಟಣೆ ತಿಳಿಸಿದೆ.