News

ಎಚ್ಚರ ಜನರೇ ಎಚ್ಚರ! ಓಮೈಕ್ರೋನ್ ನಿಂದ ಉಳಿಯಲು ದಾರಿ ಏನು?

14 December, 2021 12:38 PM IST By: Ashok Jotawar
Oxford University That made Research on omicron

ಭಾರತ ದಲ್ಲಿ ಕಳೆದ ಒಂದು ವಾರದಿಂದ ಓಮೈಕ್ರೋನ್ ನ ಹಾವಳಿ ಹೆಚ್ಚಾಗುತ್ತಲೇ ಇದೆ. ಕಾರಣ  ತಾವೆಲ್ಲ ಸ್ವಲ್ಪ ಹುಷಾರಾಗಿ ಇರಿ!

ಭಾರತದಲ್ಲಿ ಓಮೈಕ್ರೋನ್ ನಿಂದ ಪ್ರಭಾವಿತರಾದಂತ ವ್ಯಕ್ತಿಗಳ ಸಂಖ್ಯೆ ಸುಮಾರು 41 ಕ್ಕೆ ಏರಿದೆ. ಕರ್ನಾಟಕದಲ್ಲಿ 3 ,  ಮಹಾರಾಷ್ಟ್ರದಲ್ಲಿ 20 , ರಾಜಸ್ತಾನದಲ್ಲಿ  9 ಕೇರಳದಲ್ಲಿ 1 ಆಂದ್ರಪ್ರದೇಶದಲ್ಲಿ 1 ಮತ್ತು ಕೇಂದ್ರಾಡಳಿತ ರಾಜ್ಯಗಳಾದ ದೆಹಲಿ ಯಲ್ಲಿ 3  ,ಮತ್ತು ಚಂಡೀಗಡ್ ನಲ್ಲಿ 2 ಹೀಗೆ ದಿನದಿಂದ ದಿನಕ್ಕೆ ಓಮೈಕ್ರೋನ್ ನಿಂದ ಸೋಂಕಿತರಾದವರ ಸಂಖ್ಯೆ ಹೆಚ್ಚುತಲೆಯಿದೆ.

ಕಾರಣ ಎಲ್ಲ ಜನರು ತಾವು ಮನೆಯಿಂದ ಹೊರಗೆ ಬರುವಾಗ  ಸುರಕ್ಷಿತರಾಗಿ ಅಂತರದಲ್ಲಿ ಹೊರ ಜಗತ್ತಿನ ಜೊತೆ ಬೆರೆಯಿರಿ.

ನಿನ್ನೆ ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಲಂಡನ್ ನಿಂದ ಒಂದು ಹೊಸ ವಿಚಾರ್ ಹೊರ ಬಂದಿದೆ. ಅದು ಏನಪ್ಪಾ ಅಂದರೆ? ಜಗತ್ತಿನ ಯಾವುದೇ ಕೋವಿಡ್ ಲಸಿಕೆಯ 2 ಡೋಸ್ ಮುಗಿದಿದ್ದರೂ ಈ ಒಂದು ಓಮೈಕ್ರೋನ್ ನನ್ನುತಡಿಯಲು ಸಾಧ್ಯವಿಲ್ಲ.

ಕಾರಣ ಅಂದರೆ 2  ಡೋಸ್ ಪೂರ್ತಿಯಾಗಿ ತಗೆದುಕೊಂಡರು ಓಮೈಕ್ರೋನ್ ತಡೆಯಲು ಬೇಕಾದ ಆಂಟಿಬಾಡೀಸ್ ಈ ಒಂದು ಕೋವಿಡ್ ಡೋಸ್ ಗಳಲ್ಲಿ ಇಲ್ಲಎಂದು ಆಕ್ಸ್ಫರ್ಡ್ ವಿಜ್ಞಾನಿಗಳು ತಿಳಿಸಿದ್ದಾರೆ.

ಕಾರಣ ಬ್ರಿಟಿಷ್ ರ ಪ್ರಧಾನಮಂತ್ರಿ ಬೋರಿಸ್ ಜಾನ್ಸನ್ ತಮ್ಮ ದೇಶದ ಎಲ್ಲ ನಾಗರಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಅದು ಏನಪ್ಪಾ ಅಂದರೆ ನೀವು ಲಸಿಕೆ ಹಾಕಿಕೊಂಡ ತಕ್ಷಣ ನೀವು ಸುರಕ್ಷಿತರಲ್ಲ ಮತ್ತು ನೀವು ಎಲ್ಲರು ತುಂಬಾ ಸುರಕ್ಷತೆಯಿಂದ ಇರಬೇಕು.

ಈ ಒಂದು ಸಂಶೋಧನೆ ಸೋಮವಾರ  ಸಂಜೆ ಪ್ರಕಟಿಸಲಾಗಿತ್ತು. ಕಾರಣ ಈ ಒಂದು ಸಂಶೋಧನೆಯಿಂದ ಇಡೀ ಜಗತ್ತೇ ನಡುಗುತ್ತಿದೆ.

ಈ ಎಲ್ಲ ಸಮಸ್ಯೆಗೆ ಮುಖ್ಯ ಕಾರಣ ಅಂದರೆ ಚೈನಾ. ಆದರೂ ಚೈನಾ ದಲ್ಲಿ ಓಮೈಕ್ರೋನ್ ನಿಂದ ಸೋಂಕಿತರಾಗಿರುವವರ ಸಂಖ್ಯೆ ಕೇವಲ 1 . ಜಗತ್ತಿನ ಎಲ್ಲ ದೇಶಗಳಿಗು ಕೋವಿಡ್ ನಂತಹ  ಮಹಾಮಾರಿ ಹಚ್ಚಿದರು ಆ ಒಂದು ದೇಶ್ ಹೇಗೆ ತಮ್ಮನ್ನು  ತಾವು ಸುಧಾರಿಸಿ  ಕೊಳುತ್ತಿದ್ದಾರೆ ಎಂಬುದನ್ನು  ತಿಳಿದು ನಾವು ಕೂಡ ನಮ್ಮನು  ನಾವು ಸುಧಾರಿಸಿಕೊಳ್ಳಬೇಕು.

ಈ ಒಂದು ವೈರ್ಸ್ ನಿಂದ ನಾವು ಉಳಿಯಲು ಒಂದೇ ಮಾರ್ಗ ಅದು ಏನಪ್ಪಾ ಅಂದರೆ ಮನೆಯಿಂದ ಹೊರಗೆ ಬಂದಾಗ ಮಾಸ್ಕ ಹಾಕಿಕೊಳ್ಳೋದು, ಸದಾ ಕೈಗಳನ್ನು ಸ್ಯಾನಿಟೈಜರ್ ನಿಂದ ಸ್ವಚ್ಛ ಮಾಡಿಕೊಳ್ಳೋದು ಇತ್ಯಾದಿ.

ಇನ್ನಷ್ಟು ಓದಿರಿ:

ಸಿಲೆಂಡರ್ ಪ್ಪೋ ಸಿಲೆಂಡರ್! ಸಣ್ಣ ಸಣ್ಣ ಸಿಲೆಂಡರ್, ಪುಟ್ಟ ಪುಟ್ಟ ಗ್ಯಾಸ್ ಸಿಲೆಂಡರ್!

ಅತಿಯಾಗಿ ಮೊಟ್ಟೆ ತಿಂದರೆ ಏನೆಲ್ಲಾ ಅಡ್ಡ ಪರಿಣಾಮಗಳು ಇವೆ ಗೊತ್ತಾ..?

40,000 ರೂ.ನಲ್ಲಿ 66ಕಿಮೀ ಮೈಲೇಜ್ ನೀಡುವ ಯಮಹಾ ಸ್ಕೂಟರ್!