ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 2023-24ನೇ ಸಾಲಿನ ಬಜೆಟ್ ಅನ್ನು ಆಡಳಿತಾಧಿಕಾರಿಗಳ ನೇತೃತ್ವದಲ್ಲಿಯೇ ಮಂಡಿಸಲಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 2023-24ನೇ ಸಾಲಿನ ಆಯವ್ಯಯ ಅಂದಾಜು ಮಂಡನೆಯನ್ನು ಗುರುವಾರ ಬೆಳಿಗ್ಗೆ 11.30ಕ್ಕೆ ಸರ್.ಪುಟ್ಟಣ್ಣ ಚೆಟ್ಟಿ ಪುರಭವನ(ಟೌನ್ ಹಾಲ್)ದಲ್ಲಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಅವರ ಅಧ್ಯಕ್ಷತೆ ಹಾಗೂ ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್ ಅವರ ಉಪಸ್ಥಿತಿಯಲ್ಲಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ್ ರಾಯಪುರ ಮಂಡಿಸಲಿದ್ದಾರೆ.
ಬಜೆಟ್‌ನಲ್ಲಿ ಹಲವು ಯೋಜನೆಗೆ ವಿಶೇಷ ಅನುದಾನ ಮೀಸಲಿಡಲಾಗಿದೆ.
ಅನುದಾನ ಹಂಚಿಯ ವಿವರ ಈ ರೀತಿ ಇದೆ.
- ಕಟ್ಟಡ ನಕ್ಷೆಗಳ ಡಿಜಟಲೀಕರಣ ರೂ.2 ಕೋಟಿಗಳು
- ಒತ್ತುವರಿ ತೆರವುಗೊಳಿಸಲು ವಲಯಕ್ಕೆ ಒಂದು ಕೋಟಿಯಂತೆ ಒಟ್ಟು ರೂ.8 ಕೋಟಿಗಳು
- ಅನಧಿಕೃತ ಕಟ್ಟಡ ತೆರವುಗೊಳಿಸಲು ಒಟ್ಟು ರೂ.10 ಕೋಟಿಗಳು ಕಸಾಯಿಖಾನೆಗಳ ನಿರ್ವಹಣೆಗಾಗಿ ರೂ.1 ಕೋಟಿಗಳು
- ಚಿತಾಗಾರಗಳ/ರುದ್ರಭೂಮಿ ನಿರ್ವಹಣೆಗಾಗಿ ರೂ.7.74 ಕೋಟಿಗಳು
- ಆರ್ಟಿರಿಯಲ್/ ಸಬ್ ಆರ್ಟಿರಿಯಲ್ ರಸ್ತೆಗಳ ನಿರ್ವಹಣೆಗಾಗಿ ರೂ.60.10 ಕೋಟಿಗಳು
- ರೈಲ್ವೆ ಮೇಲು ಸೇತುವೆ ಮತ್ತು ಕೆಳ ಸೇತುವೆಗಳ ನಿರ್ವಹಣೆಗಾಗಿ ರೂ.23.11 ಕೋಟಿಗಳು
- ವಾಡ್ ನ ನಿರ್ವಹಣೆ ಕೆಲಸಗಳಿಗಾಗಿ ಪ್ರತಿ ವಾರ್ಡಗೆ ರೂ.75 ಲಕ್ಷದಂತೆ ಒಟ್ಟಾರೆ ರೂ.182.25 ಕೋಟಿಗಳು:
- ಪ್ರತಿ ವಾರ್ಡ್ ಹೂಳೆತ್ತುವ ಕಾಮಗಾರಿಗಳಿಗೆ ರೂ.30 ಲಕ್ಷಗಳು
- ಪ್ರತಿ ವಾರ್ಡ್ ಗೆ ರಸ್ತೆ ಗುಂಡಿ ಮುಚ್ಚುವ ಕಾಮಗಾರಿಗಳಿಗೆ ರೂ.15 ಲಕ್ಷಗಳು
- ಪ್ರತಿ ವಾರ್ಡ್ ಗೆ ಪಾದವಾರಿ ಮಾರ್ಗಗಳ ದುರಸ್ತಿ ಕಾಮಗಾರಿಗಳಿಗೆ ರೂ.25 ಲಕ್ಷಗಳು
- ಮಾನ್ಸುನ್ ನಿರ್ವಹಣೆಗಾಗಿ ರೂ.5 ಲಕ್ಷಗಳು.
- ಬೃಹತ್ ಮಳೆ ನೀರುಗಾಲುವೆಗಳ ನಿರ್ವಹಣೆಗಾಗಿ 70.20 ಕೋಟಿಗಳು
- ತುರ್ತು ಮಾನ್ಸುನ್ ಕಾಮಗಾರಿಗಳಿಗಾಗಿ ರೂ.15 ಕೋಟಿಗಳು:
- ಹೊಸ ವಲಯಗಳಿಗೆ ರೂ.2 ಕೋಟಿ
- ಹಳೆ ವಲಯಗಳಿಗೆ ರೂ.1 ಕೋಟಿ
- ಬೀದಿ ದೀಪಗಳ ನಿರ್ವಹಣೆಗಾಗಿ ರೂ.38 ಕೋಟಿಗಳು
- ಕೆರೆಗಳ ನಿರ್ವಹಣೆಗಾಗಿ ರೂ.35 ಕೋಟಿಗಳು
- ಭೂಸ್ವಾಧೀನ ಪ್ರಕ್ರಿಯೆಗಾಗಿ ರೂ.100 ಕೋಟಿಗಳು
- ಕೆರೆ ಮತ್ತು ಇತರೆ ಖಾಲಿ ಜಾಗಗಳ ಸಂರಕ್ಷಣೆಗಾಗಿ ರೂ.40 ಕೋಟಿಗಳು
- ಹೊಸದಾಗಿ ರಚನೆಯಾದ ವಾರ್ಡ್‌ಗಳ ಕಚೇರಿ ನಿಮಾಣಕ್ಕಾಗಿ ರೂ.12 ಕೋಟಿಗಳು
Bank 5 ದಿನ ಮಾತ್ರ ಇನ್ಮುಂದೆ ಬ್ಯಾಂಕ್ ಉದ್ಯೋಗಿಗಳಿಗೆ ಕೆಲಸ ?
- ವಲಯ ಕಟ್ಟಡಗಳಿಗಾಗಿ ರೂ.10 ಕೋಟಿಗಳು
- ವಿವಿದ್ಜಿನಿಯರಿಂಗ್ ವಿಭಾಗದ ಕಾಮಗಾರಿಗಳಿಗೆ ರೂ.25 ಕೋಟಿ
- ಇಂಟಿಗ್ರೇಟೆಡ್ ಕಮಾಂಡ್ ಕಂಟ್ರೋಲ್ ಸ್ಥಾಪನೆಗಾಗಿ ರೂ.5 ಕೋಟಿಗಳು
- ಅಂಗನವಾಡಿಗಳ ನಿರ್ಮಾಣಕ್ಕಾಗಿ ರೂ.4.50 ಕೋಟಿಗಳು
- ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣಕ್ಕಾಗಿ ರೂ.10 ಕೋಟಿಗಳು
- ಬೊಮ್ಮನಹಳ್ಳಿ ಮತ್ತು ಮಹದೇವಪುರ ವಲಯದಲ್ಲಿ ಆಂಟಿ ರೇಬಿಸ್ ಕೇಂದ್ರ ಸ್ಥಾಪನೆಗಾಗಿ ರೂ.5 ಕೋಟಿಗಳು
- ಹಾರೋಹಳ್ಳಿಯಲ್ಲಿ ಕಸಾಯಿಖಾನೆ ಅಭಿವೃದ್ಧಿ ಕಾಮಗಾರಿಗಳಿಗಾಗಿ ರೂ.2.5 ಕೋಟಿಗಳು
- ಹೊಸ ಉದ್ಯಾನವನಗಳ ಅಭಿವೃದ್ಧಿಗಾಗಿ ರೂ. 15 ಕೋಟಿಗಳು
- ಹೊಸ ಚಿತಗಾರಗಳ ನಿರ್ಮಾಣಕ್ಕಾಗಿ ರೂ.30 ಕೋಟಿಗಳು
- ಪ್ರಾಣಿಗಳ ಹೊಸ ಚಿತಗಾರಗಳ ನಿರ್ಮಾಣಕ್ಕಾಗಿ ರೂ.5 ಕೋಟಿಗಳು
- ಕೆರೆಗಳ ಅಭಿವೃದ್ಧಿಗಾಗಿ ರೂ.50 ಕೋಟಿಗಳು
- ಅಂಡ ಗೌಂಡ್ ಪಾರ್ಕಿಂಗ್ ನಿರ್ಮಾಣಕ್ಕಾಗಿ ರೂ. 5 ಕೋಟಿಗಳು
- 75 ಜಂಕ್ಷನ್‌ಗಳ ಅಭಿವೃದ್ಧಿಗಾಗಿ ರೂ.150 ಕೋಟಿಗಳು
- ಪ್ರತಿ ವಾರ್ಡಗೆ ರೂ.1.50 ಕೋಟಿಗಳಂತೆ ವಾರ್ಡ್ ಕಾಮಗಾರಿಗಳಿಗಾಗಿ ಒಟ್ಟು ರೂ.303.75 ಕೋಟಿಗಳು
- ದಾಸರಹಳ್ಳಿ ವಲಯದಲ್ಲಿ ಬೃಹತ್ ಮಳೆ ನೀರುಗಾಲುವೆ ತಡೆಗೋಡೆ ನಿರ್ಮಾಣಕ್ಕಾಗಿ ರೂ.5 ಕೋಟಿಗಳು
- ಹೆಚ್ಚುವರಿ ವಿದ್ಯುತ್ ಫಿಟ್ಟಿಂಗ್ ಗಳಿಗಾಗಿ ಒಟ್ಟು ರೂ.17.25 ಕೋಟಿಗಳು 1.ಹೊಸ ವಲಯದ ಪ್ರತಿ ವಾರ್ಡಗೆ ರೂ.10 ಲಕ್ಷ
- 2.ಹಳೆ ವಲಯದ ಪ್ರತಿ ವಾರ್ಡಗೆ ರೂ.5 ಲಕ್ಷ
- ವಿವೇಚನೆಗೆ ಒಳಪಟ್ಟ ಅನುದಾನಗಳಿಗಾಗಿ ಒಟ್ಟು ರೂ.400 ಕೋಟಿಗಳು
- ಪೂಜ್ಯ ಮಹಾಪೌರರು ರೂ. 100 ಕೋಟಿ
- ಮುಖ್ಯ ಆಯುಕ್ತರು ರೂ.50 ಕೋಟಿ
- ಬೆಂಗಳೂರು ನಗರ ಉಸ್ತುವಾರಿ ಮಂತ್ರಿಗಳು ರೂ.250 ಕೋಟಿ
- ಸ್ವಾತಂತ್ರ್ಯ ಉದ್ಯಾನವನದಲ್ಲಿ ವಿಶೇಷ ಅಭಿವೃದ್ಧಿ ಕಾಮಗಾರಿಗಳಿಗಾಗಿ ರೂ.5 ಕೋಟಿ
- 110 ಹಳ್ಳಿಗಳಲ್ಲಿ ವಿಶೇಷ ಅಭಿವೃದ್ಧಿ ಕಾಮಗಾರಿಗಳಿಗಾಗಿ ರೂ.6 ಕೋಟಿ
- ಅಸಂಘಟಿತ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರ ವಸತಿ ನಿಲಯಗಳಿಗಾಗಿ ರೂ.24 ಕೋಟಿ