News

ಏಪ್ರೀಲ್ 1 ರಿಂದ ವಿಜಯಾ ಬ್ಯಾಂಕ್ ಸೇರಿದಂತೆ 8 ಬ್ಯಾಂಕ್ ಗಳ ಪಾಸ್ ಬುಕ್, ಚೆಕ್ ಬುಕ್ ರದ್ದು

27 March, 2021 10:53 AM IST By:

ಬ್ಯಾಂಕ್‌ಗಳ ವಿಲೀನದ ಭಾಗವಾಗಿ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾವನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ವಿಲೀನಗೊಳಿಸಲಾಗಿದೆ. ಅಲಹಾಬಾದ್ ಬ್ಯಾಂಕ್ ವಿತ್ ಇಂಡಿಯನ್ ಬ್ಯಾಂಕ್; ಸಿಂಡಿಕೇಟ್ ಬ್ಯಾಂಕ್ ಕೆನರಾ ಬ್ಯಾಂಕ್ ಮತ್ತು ಆಂಧ್ರ ಬ್ಯಾಂಕ್ ಮತ್ತು ಕಾರ್ಪೊರೇಷನ್ ಬ್ಯಾಂಕ್ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ವಿಲೀನವಾಯಿತು. ವಿಲೀನಗೊಂಡ ಬ್ಯಾಂಕ್ ಗಳ ಚೆಕ್ ಬುಕ್ ಗಳು ಮತ್ತು ಪಾಸ್ ಬುಕ್ ಗಳು ಅಮಾನ್ಯವಾಗುವ ಹಿನ್ನೆಲೆಯಲ್ಲಿ 2021ರ ಏಪ್ರಿಲ್ 1ರಿಂದ ಅಧಿಕೃತವಾಗಿ ಹೊಸ ಬ್ಯಾಂಕ್ ಪಾಸ್ ಬುಕ್ ಚೆಕ್ ಬುಕ್ ಬರಲಿದೆ.

ಕಾರ್ಪೋರೇಷನ್ ಬ್ಯಾಂಕ್, ದೇನಾ ಬ್ಯಾಂಕ್, ವಿಜಯಾಬ್ಯಾಂಕ್ ಸೇರಿದಂತೆ ಒಟ್ಟು 8 ಬ್ಯಾಂಕುಗಳ ಚೆಕ್ ಬುಕ್ ಹಾಗೂ ಪಾಸ್ ಬುಕ್ ರದ್ದಾಗಲಿದೆ.  ಹೊಸ ಪಾಸ್ ಬುಕ್ ಮತ್ತು ಚೆಕ್ ಬುಕ್ ಚಾಲ್ತಿಯಲ್ಲಿರುತ್ತವೆ. ನಿಮಲ್ಲಿ ಹಳೆಯ ಚೆಕ್ ಬುಕ್ ಪಾಸ್ ಬುಕ್ ಇದ್ದರೆ ಕೂಡಲೇ ಬದಲಾಯಿಸಿಕೊಳ್ಳಿ.

ಏಪ್ರಿಲ್ 1 ರಿಂದ ಈ ಬ್ಯಾಂಕುಗಳ ಗ್ರಾಹಕರ ಖಾತೆ ಸಂಖ್ಯೆಗಳು ಬದಲಾಗಲಿವೆ. ಚೆಕ್ ಪುಸ್ತಕಗಳ ಜೊತೆಗೆ IFSC ಮತ್ತು MICR ಕೋಡ್ ಕೂಡ ಬದಲಾಗಲಿದ್ದಾವೆ. ಈಗಾಗಲೇ ಪಿಎನ್ ಬಿ ಮತ್ತು ಬ್ಯಾಂಕ್ ಆಫ್ ಬರೋಡಾ, ಈಗಿರುವ ಓಬಿಸಿ, ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ, ವಿಜಯಾ ಬ್ಯಾಂಕ್ ಮತ್ತು ದೇನಾ ಬ್ಯಾಂಕ್ ನ ಚೆಕ್ ಬುಕ್ ಗಳು ಏಪ್ರಿಲ್ 1ರಿಂದ ಸ್ಥಗಿತಗೊಳಿಸಲಿವೆ,

ಹೌದು, ದೇನಾ ಬ್ಯಾಂಕ್, ವಿಜಯಾ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್, ಯುನೈಟೆಡ್ ಬ್ಯಾಂಕ್ ಮತ್ತು ಅಲಹಾಬಾದ್ ಬ್ಯಾಂಕ್ ಗಳು ಬ್ಯಾಂಕ್ ಆಫ್ ಬರೋಡಾದೊಂದಿಗೆ 2019 ರ ಏಪ್ರೀಲ್ 1 ರಂದು ವಿಲೀನಗೊಂಡಿದ್ದವು., ಈ ಬ್ಯಾಂಕ್ ಗಳಲ್ಲಿ ಗ್ರಾಹಕರು ಖಾತೆ  ಹೊಂದಿದ್ದರೆ.  ತಕ್ಷಣ ಹೊಸ ಚೆಕ್ ಬುಕ್ ಮತ್ತು IFSC ಕೋಡ್ ಅನ್ನು ಪರಿಶೀಲಿಸಿ.

ಏಪ್ರಿಲ್ 1ರಿಂದ ಬ್ಯಾಂಕ್ ಆಫ್ ಬರೋಡಾದ ಚೆಕ್ ಬುಕ್ ಮತ್ತು ಪಾಸ್ ಬುಕ್ ಗಳು ಮಾತ್ರ ಅದರಲ್ಲಿ ಕಾರ್ಯನಿರ್ವಹಿಸಲಿವೆ.

ಆಂಧ್ರ ಬ್ಯಾಂಕ್ ಮತ್ತು ಕಾರ್ಪೊರೇಷನ್ ಬ್ಯಾಂಕ್ ಖಾತೆದಾರರು ಈಗ ತಮ್ಮ ಹೊಸ IFSC ಕೋಡ್ ಗಳನ್ನು ಬ್ಯಾಂಕ್ ಗಳ ಅಧಿಕೃತ ವೆಬ್ ಸೈಟ್ ನಲ್ಲಿ ಆನ್ ಲೈನ್ ಮೂಲಕ ತಿಳಿದುಕೊಳ್ಳಬಹುದಾಗಿದೆ. ಇನ್ನೇಕೆ ತಡ  ಇಂದೇ ನಿಮ್ಮ ಬ್ಯಾಂಕ್ ಅನ್ನು ಸಂಪರ್ಕಿಸಿ ನಿಮ್ಮ ಹೊಸ ಕೋಡ್ ಕೇಳಿಕೊಳ್ಳಿ ಇದರಿಂದ ನಿಮಗೆ ಆನ್ಲೈನ್ ವಹಿವಾಟಿನಲ್ಲಾಗುವ ತೊಂದರೆಯಾಗದಂತೆ ಕೂಡಲೇ ಪಾಸ್ ಬುಕ್ ಚೆಕ್ ಬುಕ್ ಬದಲಾಯಿಸಿಕೊಳ್ಳಿ.

ಬ್ಯಾಂಕಿನ ಗ್ರಾಹಕ ಸೇವಾ ಸಂಖ್ಯೆ 1800-208-2244 ಅಥವಾ 1800-425-3555 ಗೆ ಕರೆ ಮಾಡಬಹುದು. ಅಥವಾ ಎಸ್ ಎಂಎಸ್ ಮೂಲಕ ಮಾಹಿತಿ ಪಡೆಯಬಹುದು.