News

ಬ್ಯಾಂಕಿಂಗ್‌ ಕೆಲಸ ಇಂದೇ ಮುಗಿಸಿ.. ಸೆಪ್ಟೆಂಬರ್‌ ತಿಂಗಳಲ್ಲಿ ಬರೋಬ್ಬರಿ 13 ದಿನ ಬ್ಯಾಂಕ್‌ ರಜೆ ಇರಲಿವೆ

23 August, 2022 11:52 AM IST By: Maltesh
Bank Holidays In September 2022

Bank Holiday 2022: ಆಗಸ್ಟ್ ತಿಂಗಳು ಮುಗಿಯುತ್ತಿದೆ, ನೀವು ಬ್ಯಾಂಕ್‌ಗೆ ಸಂಬಂಧಿಸಿದ ಯಾವುದೇ ಕೆಲಸವನ್ನು ಹೊಂದಿದ್ದರೆ, ತಕ್ಷಣವೇ ಮುಗಿಸಿಕೊಳ್ಳಿ. ಯಾಕಂದ್ರೆ ಮಂಬರುವ ತಿಂಗಳವಾದ ಸೆಪ್ಟೆಂಬರ್‌ ನಲ್ಲಿ ಸಾಲು ಸಾಲು ರಜೆಗಳಿವೆ. ಇವು ನಿಮ್ಮ ಬ್ಯಾಂಕ್‌ ಸಂಬಂಧಿತ ಕೆಲಸಗಳಿಗೆ ಅಡ್ಡಿಯಾಗಿವೆ.

ಆನ್‌ಲೈನ್ ವಹಿವಾಟು ಸೇವೆಗಳಾದ Google Pay, Phone Pay, Paytm, ಇಂಟರ್ನೆಟ್ ಬ್ಯಾಂಕಿಂಗ್ ( ಆನ್‌ಲೈನ್ ವರ್ಗಾವಣೆ ) ಸೇವೆಗಳು ಮುಂದುವರಿಯುತ್ತದೆಯಾದರೂ, ಸೆಪ್ಟೆಂಬರ್‌ನಲ್ಲಿ ನಿರಂತರ ಬ್ಯಾಂಕ್ ಮುಚ್ಚುವಿಕೆಯಿಂದಾಗಿ ಚೆಕ್‌ಬುಕ್, ಪಾಸ್‌ಬುಕ್, ATM ಮತ್ತು ಖಾತೆ ಮತ್ತು ವಹಿವಾಟಿನಂತಹ ಬ್ಯಾಂಕಿಂಗ್ ಸಂಬಂಧಿತ ಕಾರ್ಯಗಳು ಪರಿಣಾಮ ಬೀರಬಹುದು.

ಭಾರತೀಯ ರಿಸರ್ವ್ ಬ್ಯಾಂಕ್ ( RBI ) ಹೊರಡಿಸಿದ ರಜಾದಿನಗಳ ಪಟ್ಟಿಯು ಎಲ್ಲಾ ರಾಜ್ಯ ರಜಾದಿನಗಳ ಪ್ರತ್ಯೇಕ ಪಟ್ಟಿಯನ್ನು ಹೊಂದಿದೆ. ಈ ರಜಾದಿನಗಳು ಎಲ್ಲಾ ರಾಜ್ಯಗಳಲ್ಲಿ ಅನ್ವಯಿಸುವುದಿಲ್ಲ.

ಈ ರಜಾದಿನಗಳಲ್ಲಿ ಗಣೇಶ ಚತುರ್ಥಿ, ಓಣಂ, ನವರಾತ್ರಿ ಸ್ಥಾಪನೆ ಮುಂತಾದ ಹಬ್ಬಗಳು ಸೇರಿವೆ. ಇದಲ್ಲದೆ, ಎರಡನೇ ಮತ್ತು ನಾಲ್ಕನೇ ಶನಿವಾರ ಮತ್ತು ಭಾನುವಾರವೂ ಸೇರಿದೆ. ಭಾರತೀಯ ರಿಸರ್ವ್ ಬ್ಯಾಂಕ್ ( ಆರ್‌ಬಿಐ ) ತನ್ನ ಬ್ಯಾಂಕ್ ರಜಾದಿನಗಳ ಪಟ್ಟಿಯಲ್ಲಿ ನೆಗೋಶಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್, ರಿಯಲ್ ಟೈಮ್ ಗ್ರಾಸ್ ಸೆಟಲ್‌ಮೆಂಟ್ ಹಾಲಿಡೇ ಮತ್ತು ಬ್ಯಾಂಕ್‌ಗಳ ಖಾತೆಗಳನ್ನು ಮುಚ್ಚುವ ಮೂರು ವಿಭಾಗಗಳನ್ನು ಸೇರಿಸಿದೆ.

ನಿಮ್ಮ ಅಕೌಂಟ್‌ನಲ್ಲಿ ಮಿನಿಮಮ್‌ ಬ್ಯಾಲೆನ್ಸ್ ಎಷ್ಟು ಇರಬೇಕು ತಿಳಿದುಕೊಳ್ಳಿ, ಇಲ್ಲದಿದ್ದರೆ ಬ್ಯಾಂಕ್ ದಂಡ ವಿಧಿಸುತ್ತದೆ

ಸೆಪ್ಟೆಂಬರ್ 2022 ರಲ್ಲಿ ಬ್ಯಾಂಕ್ ರಜಾದಿನಗಳು

1 ಸೆಪ್ಟೆಂಬರ್ 2022 ಗಣೇಶ ಚತುರ್ಥಿ, 4 ಸೆಪ್ಟೆಂಬರ್ 2022 ಭಾನುವಾರ (ವಾರದ ರಜೆ), 6 ಸೆಪ್ಟೆಂಬರ್ 2022 ಪೂಜೆ - ರಾಂಚಿಯಲ್ಲಿ ಬ್ಯಾಂಕುಗಳು ಬಂದ್‌, 7 ಸೆಪ್ಟೆಂಬರ್ 2022 ಮೊದಲ ಓಣಂ - ಕೊಚ್ಚಿ ಮತ್ತು ತಿರುವನಂತಪುರಂನಲ್ಲಿ ಬ್ಯಾಂಕುಗಳು ಬಂದ್‌ ಆಗಲಿವೆ 8 ಸೆಪ್ಟೆಂಬರ್ 2022 ತಿರುಓಣಂ - ಕೊಚ್ಚಿ ಮತ್ತು ತಿರುವನಂತಪುರಂನಲ್ಲಿ ಬ್ಯಾಂಕುಗಳು ಮುಚ್ಚಲಿವೆ.

9 ಸೆಪ್ಟೆಂಬರ್ 2022 ಇಂದ್ರಜಾತ್ರ - ಗ್ಯಾಂಗ್‌ಟಾಕ್‌ನಲ್ಲಿ ಬ್ಯಾಂಕ್ ಮುಚ್ಚಲಾಗುತ್ತದೆ, 10 ಸೆಪ್ಟೆಂಬರ್ 2022 ಶನಿವಾರ (ತಿಂಗಳ ಎರಡನೇ ಶನಿವಾರ), 11 ಸೆಪ್ಟೆಂಬರ್ 2022 ಭಾನುವಾರ (ವಾರದ ರಜೆ), 18 ಸೆಪ್ಟೆಂಬರ್ 2022 ಭಾನುವಾರ (ವಾರದ ರಜೆ), 21 ಸೆಪ್ಟೆಂಬರ್ 2022 ಶ್ರೀ ನಾರಾಯಣ ಗುರು ಸಮಾಧಿ ದಿನ - ಬ್ಯಾಂಕ್‌ಗಳು ಕೊಚ್ಚಿ ಮತ್ತು ತಿರುವನಂತಪುರಂನಲ್ಲಿ ಆಫ್

ಬ್ಯಾಂಕ್-ರಜೆ-ಸುದ್ದಿ

24ನೇ ಸೆಪ್ಟೆಂಬರ್ 2022 ಶನಿವಾರ (ತಿಂಗಳ ನಾಲ್ಕನೇ ಶನಿವಾರ), 25ನೇ ಸೆಪ್ಟೆಂಬರ್ 2022 ಭಾನುವಾರ (ವಾರದ ರಜೆ), 26ನೇ ಸೆಪ್ಟೆಂಬರ್ 2022 ನವರಾತ್ರಿ.

LIC ನೇಮಕಾತಿ: 80 ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ..80 ಸಾವಿರ ಸಂಬಳ