News

ಮೇ ತಿಂಗಳಲ್ಲಿ 12 ದಿನ ಬ್ಯಾಂಕ್ ರಜೆ

01 May, 2021 5:38 PM IST By:

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಕ್ಯಾಲೆಂಡರ್ ಪಟ್ಟಿಯ ಪ್ರಕಾರ ದೇಶಾದ್ಯಂತ ಇರುವ ಖಾಸಗಿ ಅಥವಾ ಸಾರ್ವಜನಿಕ ವಲಯದ ಎಲ್ಲಾ ಬ್ಯಾಂಕುಗಳು ಈ ತಿಂಗಳಲ್ಲಿ 12 ದಿನ ರಜೆ ಇರಲಿದೆ.

ಹೌದು ಈ ತಿಂಗಳ  ಎರಡನೇ ಶನಿವಾರ-ಭಾನುವಾರ ಮತ್ತು ನಾಲ್ಕನೇ ಶನಿವಾರ-ಭಾನುವಾರದಂದು ಬ್ಯಾಂಕುಗಳು ರಜೆಗಳೊಂದಿಗೆ ಒಟ್ಟು 12 ದಿನ ಬ್ಯಾಂಕ್ ಕ್ಲೋಸ್ ಆಗಿರಲಿವೆ. ಬ್ಯಾಂಕುಗಳ ಕೆಲಸವಿದ್ದರೆ ಆದಷ್ಟು ಬೇಗ ಮುಗಿಸಿಕೊಳ್ಳಿ. ಕೋವಿಡ್-19 ತಡೆಯುವುದಕ್ಕಾಗಿ ಹೇರಲಾದ ಜನತಾ ಕರ್ಫ್ಯೂ ಹೊಸ ಮಾರ್ಗಸೂಚಿಗಳ ಪ್ರಕಾರ ಬ್ಯಾಂಕುಗಳು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ಕಾರ್ಯನಿರ್ವಹಿಸುತ್ತವೆ.

ಯಾವ ಯಾವ ದಿನಾಂಕದಂದು ಬ್ಯಾಂಕುಗಳು ಕ್ಲೋಸ್ ಆಗಿರಲಿವೆ. ಇಲ್ಲಿದೆ ಪಟ್ಟಿ.

ಮೇ 1 ಮೇ ಶನಿವಾರ ಕಾರ್ಮಿಕ ದಿನಾಚರಣೆ

ಮೇ 2 ರಂದು  ಭಾನುವಾರ, ಮೇ 7 ರಂದು  ಶುಕ್ರವಾರ ಜುಮಾತ್-ಉಲ್-ವಿದಾ, ಮೇ 8ರಂದು ಎರಡನೇ ಶನಿವಾರ ಮೇ 9 ರಂದು ಭಾನುವಾರ. ಮೇ 10 ಸೋಮವಾರ ಶಾಬ್-ಎ-ಖಾದ್ರ್ ಮೇ. 13 ರಂದು ಗುರುವಾರ ಈದ್ ಉಲ್ ಫಿತರ್ ಮೇ. 14 ರಂದು ಶುಕ್ರವಾರ ಪರಶುರಾಮ್ ಜಯಂತಿ, ಮೇ 16 ರಂದು  ಭಾನುವಾರ ಮೇ. 22 ರಂದು ನಾಲ್ಕನೇ ಶನಿವಾರ ಮೇ 23 ರಂದು  ಭಾನುವಾರ, ಮೇ 26 ರಂದು ಬುಧವಾರ ಬುದ್ಧ ಪೂರ್ಣಿಮಾ ಮೇ 30 ರಂದು ಭಾನುವಾರ.