News

Bank 5 ದಿನ ಮಾತ್ರ ಇನ್ಮುಂದೆ ಬ್ಯಾಂಕ್‌ ಉದ್ಯೋಗಿಗಳಿಗೆ ಕೆಲಸ ?

02 March, 2023 12:13 PM IST By: Hitesh
Bank employees work only five days a week?

ಭಾರತೀಯ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ಇಷ್ಟರಲ್ಲೇ ಸಿಹಿಸುದ್ದಿ ಸಿಗುವ ಸಾಧ್ಯತೆ ಇದೆ.

Old Pension ಹಳೇ ಪಿಂಚಣೆ: ಸರ್ಕಾರಿ ನೌಕರರಿಗೆ ಮತ್ತೊಂದು ಗುಡ್‌ ನ್ಯೂಸ್‌ ನೀಡಿದ ಸರ್ಕಾರ!

ಅದೇ ವಾರದಲ್ಲಿ ಐದು ದಿನಗಳ ಕಾಲ ಮಾತ್ರ ಕೆಲಸ ಮಾಡುವುದು. ಆಗಿದ್ದರೆ ವಾರದಲ್ಲಿ ಐದು ದಿನ ಮಾತ್ರ ಕೆಲಸ ಮಾಡಿ ಇನ್ನುಳಿದ ಎರಡು ದಿನಗಳ ಕಾಲ ರಜೆ ತೆಗೆದುಕೊಳ್ಳುವುದು ಎಂದರೇನು.

ಇದು ಕಾರ್ಯಸಾಧುವೇ ಇನ್ನುವುದು ಇದೀಗ ಚರ್ಚೆಯಲ್ಲಿದೆ. ಭಾರತೀಯ ಬ್ಯಾಂಕ್‌ನ ಎಲ್ಲ ಉದ್ಯೋಗಿಗಳು ಐದು ದಿನ ಮಾತ್ರ ಕೆಲಸ ಮಾಡಿದರೆ, ಬ್ಯಾಂಕಿಂಗ್‌ ಸೇವೆಯಲ್ಲಿ ಒತ್ತಡವೂ ಹೆಚ್ಚಳವಾಗುವ ಸಾಧ್ಯತೆಯೂ ಇದೆ.   

ಇದೀಗ ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ (IBA) ಮತ್ತು ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಎಂಪ್ಲಾಯೀಸ್ ನಡುವೆ ಈ ನಿಟ್ಟಿನಲ್ಲಿ ಚರ್ಚೆ ನಡೆದಿದೆ.

Gold Rate Today ಚಿನ್ನದ ಬೆಲೆಯಲ್ಲಿ ಮತ್ತೆ ಹೆಚ್ಚಳ!

ವಾರದಲ್ಲಿ ಐದು ದಿನಗಳ ಬ್ಯಾಂಕ್‌ನಲ್ಲಿ ಕೆಲಸ ಮಾಡುವುದಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವು ಸುತ್ತಿನ ಸಭೆಗಳು ನಡೆದಿದ್ದು,

ಇದನ್ನು ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಪ್ರಗತಿಯೂ ಕಂಡುಬರುತ್ತಿರುವುದಾಗಿ ವರದಿ ಆಗಿದೆ.  

ಭಾರತೀಯ ಬ್ಯಾಂಕ್‌ಗಳ ಸಂಘ (IBA) ಹಾಗೂ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ನಡುವಿನ ಮಾತುಕತೆಗಳು ಬ್ಯಾಂಕ್‌ಗಳಿಗೆ

ಐದು ದಿನಗಳ ಕೆಲಸದ ವಾರವನ್ನು ಜಾರಿಗೊಳಿಸುವಲ್ಲಿ ಉದ್ಯೋಗಿಗಳು ಪ್ರಗತಿಯನ್ನು ಸಾಧಿಸಿದ್ದಾರೆ.

ಐಬಿಎ ಸಹ ಬ್ಯಾಂಕ್‌ನ ನೌಕರರು ದೀರ್ಘಾವಧಿಯ ಕೆಲಸದ ಅವಧಿಗೆ ಬದಲಾಗಿ ಈ ಪ್ರಸ್ತಾಪವನ್ನು ಒಪ್ಪಿಕೊಂಡಿದೆ.

ಈ ಪುಣ್ಯಾತ್ಮ 60 ವರ್ಷಗಳಿಂದ ನಿದ್ದೆಯನ್ನೇ ಮಾಡಿಲ್ಲವಂತೆ! 

ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ನಾಗರಾಜನ್ ಅವರು ಈ ಕುರಿತು ಮಾತನಾಡಿದ್ದು,

ಈ ನಿಟ್ಟಿನಲ್ಲಿ ಆಗಬೇಕಾಗಿರುವ ನಿರ್ದಿಷ್ಟ ಬದಲಾವಣೆಯ ಬಗ್ಗೆ ಮಾಹಿತಿ ನೀಡಿದ್ದಾರೆ.

ಸರ್ಕಾರವು ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್‌ನ ಸೆಕ್ಷನ್ 25ರ ಅಡಿಯಲ್ಲಿ ತಿಂಗಳಿನ ಎಲ್ಲಾ ಶನಿವಾರಗಳನ್ನು ರಜೆಯೆಂದು ಘೋಷಣೆ ಮಾಡುವ ಅವಶ್ಯಕತೆ ಇದೆ.

ಈ ಪ್ರಸ್ತಾವನೆಯೂ ಬ್ಯಾಂಕ್‌ ಸಿಬ್ಬಂದಿಯ ವೇತನದ ಭಾಗವಾಗಿ ಉಳಿದಿಲ್ಲ ಎನ್ನಲಾಗಿದೆ.   

ಇದೀಗ ನಡೆಯುತ್ತಿರುವ ಚರ್ಚೆಯೂ ಚಾಲನೆಗೆ ಬಂದರೆ, ಹಲವು ವರ್ಷಗಳಿಂದ ವಾರದಲ್ಲಿ

ಆರು ದಿನ ಕೆಲಸ ಮಾಡುತ್ತಿರುವ ಬ್ಯಾಂಕ್ ಉದ್ಯೋಗಿಗಳು ಮತ್ತಷ್ಟು ನಿರಾಳರಾಗಲಿದ್ದಾರೆ.  

ವಾರದಲ್ಲಿನ ಕೆಲಸದ ಬದಲಾವಣೆಯು ಈಗಾಗಲೇ ಐದು ದಿನಗಳ ಕೆಲಸದ ವಾರದಲ್ಲಿ ಕಾರ್ಯನಿರ್ವಹಿಸುವ

ಇತರ ಉದ್ಯಮಗಳಿಗೆ ಅನುಗುಣವಾಗಿ ಬ್ಯಾಂಕ್‌ಗಳೂ ಕಾರ್ಯನಿರ್ವಹಿಸಲಿವೆ.  

ವಾರದಲ್ಲಿ ಐದು ದಿನಗಳು ಮಾತ್ರ ಕೆಲಸ ಮಾಡಿ ಇನ್ನುಳಿದ ಎರಡು ದಿನಗಳ ಕಾಲ ರಜೆ ಸಿಗುವುದೇ ಆದರೆ,

ಇದರಿಂದ ಬ್ಯಾಂಕ್‌ನ  ಉದ್ಯೋಗಿಗಳು ತಮ್ಮ ಕುಟುಂಬದೊಂದಿಗೆ ಮತ್ತಷ್ಟು ಸಮಯಾವಕಾಶವನ್ನು ಕಳೆಯಲು ಅನುಕೂಲವಾಗಲಿದೆ.

ರಾಜ್ಯದಲ್ಲಿ ಕಳೆದ 3 ವರ್ಷದಲ್ಲಿ 40 ಲಕ್ಷ ಮನೆಗಳಿಗೆ ನೀರು: ಬಸವರಾಜ ಬೊಮ್ಮಾಯಿ

ಬ್ಯಾಂಕ್‌ನ ಸಿಬ್ಬಂದಿಗೆ ಒತ್ತಡ ಸಾಧ್ಯತೆ

ಬ್ಯಾಂಕ್‌ನ ಸಿಬ್ಬಂದಿಗೆ ವಾರದಲ್ಲಿ ಐದು ದಿನಗಳ ಕಾಲ ಮಾತ್ರ ಕೆಲಸ ಮಾಡುವುದಕ್ಕೆ ಅವಕಾಶ ಕಲ್ಪಿಸಿದರೆ, ಮುಂದಿನ ದಿನಗಳಲ್ಲಿ ಸಮಸ್ಯೆ ಆಗುವ ಸಾಧ್ಯತೆಯೂ ಇದೆ.

ವಾರದಲ್ಲಿ ಐದು ದಿನಗಳ ಕಾಲ ಮಾತ್ರ ಬ್ಯಾಂಕ್‌ನಲ್ಲಿ ಕೆಲಸ ನಿರ್ವಹಿಸುವುದರಿಂದ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ.

ಕಡಿಮೆ ಅವಧಿಯಲ್ಲಿ ಹೆಚ್ಚು ಕೆಲಸವನ್ನು ಪೂರೈಸಬೇಕಾಗುತ್ತದೆ. ಅಲ್ಲದೇ ಇದೇ ಸಂದರ್ಭದಲ್ಲಿ ವಹಿವಾಟುಗಳಲ್ಲಿಯೂ ಏರುಪೇರಾಗುವ ಸಾಧ್ಯತೆ ಇದೆ.

ವಹಿವಾಟುಗಳೆಲ್ಲವೂ ವಾರದ ಐದು ದಿನಗಳಲ್ಲೇ ಆಗಬೇಕಾದರೆ, ಗ್ರಾಹಕರ ಸಂಖ್ಯೆ ಹೆಚ್ಚಳವಾಗಲಿದೆ.

ಅಂದರೆ ವಾರಾಂತ್ಯದಲ್ಲಿ ಬರುವ ವಹಿವಾಟು ಹಾಗೂ ಗ್ರಾಹಕರು ವಾರದ ಐದು ದಿನಗಳಲ್ಲೇ ಬರಲಿದ್ದು, ಇದು ಗ್ರಾಹಕರಿಗೂ ಸಮಸ್ಯೆ ಆಗುವ ಸಾಧ್ಯತೆ ಇದೆ.